Top

ಸ್ಯಾಂಡಲ್​ವುಡ್​ನ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ವಿಧಿವಶ

ಸಿಂಹದ ಮರಿ, ಎಕೆ 47, ಕಲಾಸಿಪಾಳ್ಯ, ಗೋಲಿಬಾರ್​ ಹೀಗೆ ಸಾಲು ಸಾಲು ಚಿತ್ರಗಳಿಗೆ ಬಂಡವಾಳ ಹೂಡಿ ಗೆಲುವು ಕಂಡಿದ್ದರು.

ಸ್ಯಾಂಡಲ್​ವುಡ್​ನ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ವಿಧಿವಶ
X

ಬೆಂಗಳೂರು: ಸ್ಯಾಂಡಲ್​ವುಡ್​ ನಿರ್ಮಾಪಕ, ಖ್ಯಾತ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಇಂದು ವಿಧಿವಶರಾಗಿದ್ದಾರೆ.

ಕೋಟಿ ನಿರ್ಮಾಪಕ ಅಂತಲೇ ಹೆಸರಿನಿಂದ ಫೇಮಸ್​ ಆಗಿದ್ದ ಅವರಿಗೆ ಮೂರು ದಿನಗಳ ಹಿಂದೆಯಷ್ಟೇ ಕೊರೊನಾ ಸೋಂಕು ತಗುಲಿ ಎಂ.ಎಸ್​ ರಾಮಯ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಉಸಿರಾಟದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಸಿಂಹದ ಮರಿ, ಎಕೆ 47, ಕಲಾಸಿಪಾಳ್ಯ, ಗೋಲಿಬಾರ್, ಲಾಕ್​ಅಪ್​ ಡೆತ್, ಆಟೋ ಶಂಕರ್​​​ ಹೀಗೆ ಸಾಲು ಸಾಲು ಚಿತ್ರಗಳಿಗೆ ಬಂಡವಾಳ ಹೂಡಿ ಗೆಲುವು ಕಂಡಿದ್ದರು.

ಸದ್ಯ ರಾಮು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಡೀ ಸ್ಯಾಂಡಲ್​ವುಡ್​ಗೆ ದಂಗು ಬಡಿದಂತಾಗಿರುವುದು ಮಾತ್ರ ಸುಳ್ಳಲ್ಲ

Next Story

RELATED STORIES