Top

ಅಭಿಮಾನಿಗಳ ಜೊತೆ ದೊಡ್ಮನೆ ಯುವರಾಜನ ಸಮಾಗಮ

ಸುಮಾರು 500ಕ್ಕೂ ಹೆಚ್ಚು ಅಭಿಮಾನಿಗಳು ಜೊತೆಗೂಡಿ, ಯುವರಾಜ್​ಕುಮಾರ್​ಗೆ ಹೂಗುಚ್ಚ ನೀಡಿ, ಕೆಜಿಗಟ್ಟಲೆ ಹೂವಿನ ಹಾರಗಳನ್ನ ಹಾಕಿ, ಹೂವಿನ ಅಭಿಷೇಕ ಮಾಡಿ, ಸ್ಯಾಂಡಲ್​ವುಡ್​ ಅದ್ದೂರಿ ಎಂಟ್ರಿ ಕೊಡುವಂತೆ ಶುಭ ಹಾರೈಸಿದ್ದಾರೆ.

ಅಭಿಮಾನಿಗಳ ಜೊತೆ ದೊಡ್ಮನೆ ಯುವರಾಜನ ಸಮಾಗಮ
X

ದೊಡ್ಮನೆ ಕುಡಿ ಯುವರಾಜ್​ಕುಮಾರ್​ ಸ್ಯಾಂಡಲ್​ವುಡ್​ಗೆ ಗ್ರ್ಯಾಂಡ್​ ಎಂಟ್ರಿ ಕೊಡೊಕ್ಕೆ ರೆಡಿಯಾಗಿರೋದು ಗೊತ್ತೇಯಿದೆ. ಈಗಾಗಲೇ ಫಸ್ಟ್​ ಲುಕ್​ ಪೋಸ್ಟರ್​ನಿಂದ ಸಿನಿಪ್ರಿಯರ ಗಮನ ಸೆಳೆದಿರೋ ಯುವ, ಸದ್ಯದಲ್ಲೇ ಶೂಟಿಂಗ್​ ಶುರುಮಾಡೋ ಪ್ಲಾನ್​ನಲ್ಲಿದ್ದಾರೆ. ಆದರೆ, ಅದಕ್ಕೂ ಮುನ್ನ ಅಭಿಮಾನಿದೇವರುಗಳ ಮುಂದೆ ಬಂದು, ಪ್ರೀತಿ ಆಶೀರ್ವಾದ ಪಡೆದಿದ್ದಾರೆ.

ವರನಟ ಡಾ.ರಾಜ್​ ಕುಟುಂಬದ ಮತ್ತೊಂದು ಕುಡಿ ಯುವರಾಜ್​ಕುಮಾರ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಾರೆ ಅಂದಾಗ್ಲೇ ಬಹುದೊಡ್ಡ ನಿರೀಕ್ಷೆ ಇತ್ತು. ಆ ನಂತರ ಫಸ್ಟ್ ಲುಕ್​ ನೋಡುತ್ತಿದ್ದ ಹಾಗೇ , ಚಂದನವನದಲ್ಲಿ ಗಟ್ಟಿನೆಲೆಯೂರೋದು ಗ್ಯಾರೆಂಟಿ ಅಂತ ಅಭಿಮಾನಿಗಳು ಫಿಕ್ಸ್​ ಆಗ್ಬಿಟ್ರು. ಕೈಯಲ್ಲಿ ಉದ್ದನೆಯ ಭರ್ಜಿ ಹಿಡಿದು ಖಡಕ್ ಲುಕ್‌ನಲ್ಲಿ ಯುವ ರಾಜ್ ಕುಮಾರ್ ಮಿಂಚಿದರು. ಈ ಚಿತ್ರಕ್ಕೆ ಯುವ 01 ಅಂತ ವರ್ಕಿಂಗ್​ ಟೈಟಲ್​ ಕೂಡ ಇಡಲಾಗಿದೆ.

ಸದ್ಯ ಯುವರಾಜ್​ಕುಮಾರ್ ಸಿನಿಮಾಗಾಗಿಯೇ ಲಾಂಗ್​ ಹೇರ್ ಬಿಟ್ಟು, ಬಿಯರ್ಡ್​ ಲುಕ್​ಅನ್ನು ಮೇಂಟೇನ್ ಮಾಡ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್​ ಶುರು ಮಾಡೋ ಪ್ಲಾನ್​ನಲ್ಲಿದ್ದಾರೆ. ಆದರೆ, ಅದಕ್ಕೂ ಮುನ್ನ ಅಭಿಮಾನಿಗಳನ್ನೊಮ್ಮೆ ಭೇಟಿ ಮಾಡಿ, ಅವರ ಹಾರೈಕೆ, ಆಶೀರ್ವಾದ ಪಡೆದಿದ್ದಾರೆ ಯುವರಾಜ್​ಕುಮಾರ್.

ಯುವರಾಜ್ ಕುಮಾರ್ ದೊಡ್ಮನೆಯ ಮೂರನೇ ತಲೆಮಾರು. ಅಭೀಮಾನಿಗಳಿಗೆ ಯುವ ಅಂದ್ರೆ ಕೊಂಚ ಪ್ರೀತಿ ಜಾಸ್ತಿನೇ. ಹಾಗಾಗಿ ಯುವರಾಜ್​ಕುಮಾರ್ ಎಂಟ್ರಿಗೆ ದೊಡ್ಮನೆ ಫ್ಯಾನ್ಸ್ ಕಾಯುತ್ತಿದ್ದಾರೆ. ಯುವರಾಜ್​ಕುಮಾರ್​ರನ್ನ ಭೇಟಿ ಮಾಡೋಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ದೊಡ್ಮನೆ ಅಭಿಮಾನಿಗಳು ಬೆಂಗಳೂರಿಗೆ ಬಂದು ದೊಡ್ಮನೆ ಕುಡಿಯನ್ನ ಭೇಟಿ ಮಾಡಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಅಭಿಮಾನಿಗಳು ಜೊತೆಗೂಡಿ,ಯುವರಾಜ್​ಕುಮಾರ್​ಗೆ ಹೂಗುಚ್ಚ ನೀಡಿ, ಕೆಜಿಗಟ್ಟಲೆ ಹೂವಿನ ಹಾರಗಳನ್ನ ಹಾಕಿ, ಹೂವಿನ ಅಭಿಷೇಕ ಮಾಡಿ, ಸ್ಯಾಂಡಲ್​ವುಡ್​ ಅದ್ದೂರಿ ಎಂಟ್ರಿ ಕೊಡುವಂತೆ ಶುಭ ಹಾರೈಸಿದ್ದಾರೆ.

ಇನ್ನು ಬೆಂಗಳೂರಿನ ನಂದಿ ಲಿಂಕ್​ ಗ್ರೌಂಡ್​ನಲ್ಲಿ ಸುಮಾರು 3 ರಿಂದ 4 ಗಂಟೆಗಳ ಕಾಲ ಅಭೀಮಾನಿಗಳ ಜೊತೆ ಕಾಲ ಕಳೆದ ಯುವರಾಜ್​ಕುಮಾರ್​ ಒಂದಷ್ಟು ವಿಚಾರಗಳನ್ನ ಚರ್ಚೆ ಮಾಡಿ, ಮುಂದಿನ ದಿನಗಳಲ್ಲಿ ತಮ್ಮ ಹೊಸ ಹೆಜ್ಜೆಗೆ ಇದೇ ರೀತಿ ಪ್ರೋತ್ಸಾಹ ಇರುವಂತೆ ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿದ್ದಾರೆ. ಆದಷ್ಟು ಬೇಗ ಯುವರಾಜ್​ಕುಮಾರ್​ರ ಗ್ರ್ಯಾಂಡ್​ ಎಂಟ್ರಿಗೆ ಫ್ಯಾನ್ಸ್ ಕಾಯುತ್ತಿದ್ದಾರೆ.

Next Story

RELATED STORIES