Top

'ಕಸ್ತೂರಿ ಮಹಲ್​' ಚಿತ್ರದಿಂದ ಡಿಂಪಲ್​ ಕ್ವೀನ್ ರಾಚಿತ್​ ರಾಮ್​ ಔಟ್​!

ರಚ್ಚು ಅಭಿನಯದ10 ಸಿನಿಮಾಗಳಲ್ಲಿ ಒಂದು ಮೈನಸ್.!

ಕಸ್ತೂರಿ ಮಹಲ್​ ಚಿತ್ರದಿಂದ ಡಿಂಪಲ್​ ಕ್ವೀನ್ ರಾಚಿತ್​ ರಾಮ್​ ಔಟ್​!
X
Sandalwood Actress Rachita Ram

ಸ್ಯಾಂಡಲ್​ವುಡ್​ನ ಡಿಂಪಲ್​ಕ್ವೀನ್​ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು. ರಚಿತಾ ರಾಮ್​ ಬರೋಬ್ಬರಿ ಹತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ಈ ಲಿಸ್ಟ್​ನಲ್ಲಿ ಒಂದು ಸಿನಿಮಾ ಕಮ್ಮಿಯಾಗಿದೆ. ಯಾವುದು ಆ ಸಿನಿಮಾ(?) ಈ ಚಿತ್ರವನ್ನ ರಚ್ಚು ಕೈ ಬಿಟ್ಟಿದ್ಯಾಕೆ ಗೊತ್ತಾ(?)

ಡಿಂಪಲ್​ ಕ್ವೀನ್​ ರಚಿತಾರಾಮ್​ ಸದ್ಯ ಸ್ಯಾಂಡಲ್​ವುಡ್​ನ ಬ್ಯುಸಿಯೆಸ್ಟ್ ನಟಿ. ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿತ್ತು ಆದರೆ ಈಗ ಈ ಲಿಸ್ಟ್​ನಲ್ಲಿ ಹೊಸ ಸಿನಿಮಾ ಕಸ್ತೂರಿ ಮಹಲ್​ ಕೈ ಬಿಟ್ಟು ಹೋಗಿದೆ. ಅರ್ಥಾತ್​ ರಚಿತಾ ಈ ಸಿನಿಮಾದಿಂದ ಹೊರ ಬಂದಿದ್ದಾರೆ.

ರೀಸೆಂಟಾಗಿ ರಚಿತಾರಾಮ್ ಒಪ್ಪಿಕೊಂಡ ಹೊಸ ಸಿನಿಮಾ ಕಸ್ತೂರಿ ಮಹಲ್. ಅದ್ದೂರಿಯಾಗಿ ಚಿತ್ರ ಕೂಡ ಸೆಟ್ಟೇರಿತ್ತು. ಹಿರಿಯ ನಿರ್ದೇಶಕ ದಿನೇಶ್​ ಬಾಬು ಆ್ಯಕ್ಷನ್​ ಕಟ್ ಹೇಳುತ್ತಿರೋ 50ನೇ ಸಿನಿಮಾ ಇದಾಗಿತ್ತು. ಅಷ್ಟೇಅಲ್ಲ, ಈ ಚಿತ್ರದ ರಚಿತಾ ರಾಮ್​ ಲುಕ್​ ಅಂಡ್ ಗೆಟಪ್​ ಕೂಡ ಗಮನ ಸೆಳೆದಿತ್ತು. ಇದೆಲ್ಲದರ ನಡುವೆ ಕಸ್ತೂರಿ ನಿವಾಸ ಅನ್ನೋ ಟೈಟಲ್​ ಕಾಂಟ್ರೋವರ್ಸಿ ಆಗಿದ್ದು ಗೊತ್ತೇಯಿದೆ.

ಆದರೆ, ಇದೀಗ ರಚಿತಾ ರಾಮ್​ ಕಸ್ತೂರಿ ಮಹಲ್​ ಚಿತ್ರದಿಂದ ಹೊರಬಂದಿದ್ದಾರೆ. ಅಷ್ಟು ಖುಷಿಯಿಂದ ಒಪ್ಪಿಕೊಂಡ ಚಿತ್ರವನ್ನ ರಚ್ಚು ಕೈ ಬಿಟ್ಟಿದ್ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ, ರಚ್ಚು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಡೇಟ್ ಕ್ಲಾಶ್​ ಆಗುತ್ತಿರೋದೇ ಸದ್ಯ ಈ ನಿರ್ಧಾರಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಆದರೆ, ಮತ್ತೊಂದು ಮೂಲಗಳ ಪ್ರಕಾರ ರಚ್ಚು ಮತ್ತು ಚಿತ್ರತಂಡದ ನಡುವೆ ಹೊಂದಾಣಿಕೆ ಇಲ್ಲ ಹಾಗಾಗಿ ಈ ಪ್ರಾಜೆಕ್ಟ್​ ಟೇಕಾಫ್​ ಆಗುತ್ತಿಲ್ಲ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ.

ಕಸ್ತೂರಿ ನಿವಾಸದಿಂದ, ಕಸ್ತೂರಿ ಮಹಲ್​ ಅಂತ ಟೈಟಲ್​ ಬದಲಿಸಿ, ಕಾಂಟ್ರೋವರ್ಸಿಗೆ ತೆರೆ ಎಳೆದು, ಇನ್ನೇನು ಶೂಟಿಂಗ್​ ಶುರುಮಾಡಬೇಕು ಅನ್ನುವಷ್ಟರಲ್ಲಿ ಚಿತ್ರದ ನಾಯಕಿ ರಚಿತಾ ರಾಮ್​ ಹೊರಬಂದಿದ್ದಾರೆ. ಸದ್ಯ ರಚ್ಚು ಜಾಗಕ್ಕೆ ಮತ್ಯಾವ ನಟಿಯನ್ನು ಹುಡುಕಿ ತರಲಿದ್ದಾರೆ ಚಿತ್ರತಂಡ ಅನ್ನೋದು ಸದ್ಯದ ಕುತೂಹಲ.

Next Story

RELATED STORIES