Top

ಬಾಲಿವುಡ್ ಸಿನಿಮಾಗಳ ಬಜೆಟ್​ ಮೀರಿಸಿದ ಸಲ್ಲುಮಿಯಾ​ ಸಂಭಾವನೆ

ಕೊರೊನಾ ಅಟ್ಟಹಾಸದ ನಡುವೆಯೂ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳ ಶೂಟಿಂಗ್​ಗೆ ಸರ್ಕಾರ ಅನುಮತಿ ನೀಡಿದೆ.

ಬಾಲಿವುಡ್ ಸಿನಿಮಾಗಳ ಬಜೆಟ್​ ಮೀರಿಸಿದ ಸಲ್ಲುಮಿಯಾ​ ಸಂಭಾವನೆ
X

ಸಿನಿಮಾವೊಂದಕ್ಕೆ ಈ ಹೀರೋ ಇಷ್ಟು ಕೋಟಿ ಚಾರ್ಜ್​ ಮಾಡ್ತಾರಂತೆ. ಆ ಚಿತ್ರಕ್ಕೆ ಆ ಹೀರೋ ಅಷ್ಟು ಕೋಟಿ ರೆಮ್ಯೂನರೇಷನ್​ ತಗೋತಾರಂತೆ. ಸಂಭಾವನೆ ಲೆಕ್ಕಾಚಾರದಲ್ಲಿ ನಂಬರ್​ ವನ್​ ಹೀರೋ ಇವರಂತೆ. ಹೀಗೆ ಪದೇ ಪದೇ ​ಸ್ಟಾರ್​ಗಳ ರೆಮ್ಯೂನರೇಷನ್​​​ ಸುದ್ದಿ ಕೇಳ್ತಾನೇ ಇರ್ತೀವಿ. ಆದರೆ, ಬಿಗ್ಬಾಸ್​​ ಹೊಸ ಸೀಸನ್​ ಹೋಸ್ಟ್​ ಮಾಡೋಕ್ಕೆ ಸಲ್ಲು ಪಡೀತ್ತಿರೋ ಸಂಭಾವನೆ ಕೇಳಿ ಎಲ್ಲರೂ ದಂಗಾಗಿದ್ದಾರೆ.

ಇಂಗ್ಲೀಷ್ ಬಿಗ್​ ಬ್ರದರ್​​ ಹಿಂದಿ ಅವತರಣಿಕೆ ಬಿಗ್​ಬಾಸ್​​ ಶೋ 13 ವರ್ಷಗಳಿಂದ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಾ ಬರ್ತಿದೆ. ಒಂದು ವಿವಾದಗಳ ನಡುವೆಯೂ ಬಿಗ್​ಬಾಸ್​​ ಶೋ ಸೀಸನ್​ನಿಂದ ಸೀಸನ್​ಗೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ. ಹಿಂದಿ ನಂತರ ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್​ಬಾಸ್​​ ಶೋ ಶುರುವಾಗಿ ಸಕ್ಸಸ್​ ಕಂಡಿದೆ. ಇದೀಗ ಬಿಗ್​ಬಾಸ್​ ಸೀನ್​ 14ಗೆ ದಿನಗಣನೆ ಶುರುವಾಗಿದೆ.

ಕೊರೊನಾ ಅಟ್ಟಹಾಸದ ನಡುವೆಯೂ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳ ಶೂಟಿಂಗ್​ಗೆ ಸರ್ಕಾರ ಅನುಮತಿ ನೀಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಗ್​ಬಾಸ್​​ ಶೋ ನಡೆಯಲಿದೆ. ಕಳೆದ ಸೀಸನ್​ಗಳ ರೀತಿಯಲ್ಲೇ ಈ ಬಾರಿಯೂ ಬಿಗ್​ಬಾಸ್​ ಸ್ಪರ್ಧಿಗಳ ವಾರದ ಕಥೆ ಕೇಳೋಕ್ಕೆ ಸಲ್ಮಾನ್​ ಖಾನ್​ ಬರ್ತಿದ್ದಾರೆ. ಅಕ್ಟೋಬರ್​ನಲ್ಲಿ ಕಿರಿತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 14 ಶುರುವಾಗಲಿದೆ. ವಿಶೇಷ ಅಂದ್ರೆ, ಕಾರ್ಯಕ್ರಮ ನಿರೂಪಣೆಗೆ ಸಲ್ಮಾನ್​ ಖಾನ್​ 250 ಕೋಟಿ ಸಂಭಾವನೆ ಪಡಿತ್ತಿದ್ದಾರಂತೆ.

ಕೇಳೋಕ್ಕೆ ಅಚ್ಚರಿ ಅನ್ನಿಸಿದ್ರು, ಇದು ನಿಜ ಅಂತಿವೆ ಬಾಲಿವುಡ್​ ಮೂಲಗಳು. ಬಿಗ್​ಬಾಸ್​ ಕಾರ್ಯಕ್ರಮ ನಡೆಸಿಕೊಡಲು ಸಲ್ಮಾನ್​ ಖಾನ್ ಬರೋಬ್ಬರಿ 250 ಕೋಟಿ ಸಂಭಾವನೆ ಜೇಬಿಗಿಳಿಸ್ತಿದ್ದಾರೆ. ಭಾರತೀಯ ಕಿರುತೆರೆ ಇತಿಹಾಸದಲ್ಲೇ ಇದು ಹೊಸ ದಾಖಲೆ ಅಂತ ಹೇಳಲಾಗುತ್ತಿದೆ.

ಎಲ್ಲರಿಗೂ ಗೊತ್ತಿರುವಂತೆ ಸಲ್ಮಾನ್​ ಖಾನ್​ ಶನಿವಾರ ಮತ್ತು ಭಾನುವಾರ ಮಾತ್ರ ವೇದಿಕೆಯಲ್ಲಿ ನಿಂತು, ಬಿಗ್​ಬಾಸ್​ ಮನೆಯೊಳಗಿರುವ ಸ್ಪರ್ಧಿಗಳ ಜೊತೆ ಮಾತನಾಡ್ತಾರೆ. ಅಂದ್ರೆ, ವಾರದಲ್ಲಿ ಎರಡು ಸಂಚಿಕೆ. ಒಂದೇ ದಿನ ಎರಡೂ ಸಂಚಿಕೆಗಳ ಚಿತ್ರೀಕರಣ ನಡೆಯುತ್ತೆ. 12 ವಾರಗಳ ಚಿತ್ರೀಕರಣಕ್ಕೆ 250 ಕೋಟಿ ಸಂಭಾವನೆ ಅಂತ ಹೇಳಲಾಗುತ್ತಿದೆ. ಅಂದ್ರೆ, ಒಂದು ದಿನದ ಶೂಟಿಂಗ್​ಗೆ ಬರೋಬ್ಬರಿ 20.50 ಕೋಟಿ ಅಂತ ಲೆಕ್ಕ ಹಾಕಿದ್ರೆ ಪ್ರತಿ ಸಂಚಿಕೆಗೆ 10.25 ಕೋಟಿ ಸಂಭಾವನೆ ಸಲ್ಲುಗೆ ಸಿಗಲಿದೆ.

ಹಿಂದಿನ ಸೀಸನ್​ನಲ್ಲಿ ವಾರಕ್ಕೆ 12ರಿಂದ 14 ಕೋಟಿ ಸಲ್ಮಾನ್​ ಖಾನ್​ ಚಾರ್ಜ್​ ಮಾಡುತ್ತಿದರು. ಈ ಬಾರಿ ಬಿಗ್​ಬಾಸ್​ ಶೋ ಕಳೆದ ಬಾರಿಗಿಂತ ಬಹಳ ಭಿನ್ನವಾಗಿರಲಿದೆ. ಕೊರೊನಾ ಹಾವಳಿ ಹಿನ್ನಲೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ. ಈಗಾಗಲೇ ಬಿಗ್​ಬಾಸ್​ ಶೋಗಾಗಿ ಸೆಟ್​ ನಿರ್ಮಾಣದ ಕೆಲಸ ನಡೀತಿದೆ.

ಬಾಲಿವುಡ್​ನ ದೊಡ್ಡ ದೊಡ್ಡ ಸಿನಿಮಾಗಳ ಬಜೆಟ್ 150 ರಿಂದ 200 ಕೋಟಿ ದಾಟೋದಿಲ್ಲ. ಸಲ್ಮಾನ್​ ಖಾನ್​ ಸಿನಿಮಾಗಳ ಬಜೆಟ್​ ಕೂಡ 250 ಕೋಟಿ ಹತ್ತಿರ ಸುಳಿವುದಿಲ್ಲ. ಅಂತಾದರಲ್ಲಿ ಕೇವಲ 12 ದಿನಗಳ ಶೂಟಿಂಗ್​ಗೆ ಸಲ್ಮಾನ್​ ಖಾನ್​ 250 ಕೋಟಿ ಜೇಬಿಗಿಳಿಸ್ತಾರಾ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಈಗಾಗಲೇ ಆನ್​ಲೈನ್​ ಮೂಲಕ ಸ್ಪರ್ಧಿಗಳ ಆಯ್ಕೆ ನಡೀತಿದ್ದು, ಅಕ್ಟೋಬರ್​ನಲ್ಲಿ ಬಿಗ್ಬಾಸ್​​ ಸೀಸನ್​ 14 ಶುರುವಾಗಲಿದೆ.

Next Story

RELATED STORIES