Top

ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೇ ಉಪ್ಪಿ ಗ್ರೀನ್​ ಸಿಗ್ನಲ್​

ಹೊಸ ನಿರ್ಮಾಪಕ ಮುನಿರಾಜು ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಶುರು ಮಾಡೋ ಪ್ಲಾನ್​ನಲ್ಲಿದೆ ಲಗಾಮ್​ ಟೀಂ

ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೇ ಉಪ್ಪಿ ಗ್ರೀನ್​ ಸಿಗ್ನಲ್​
X

ಸ್ಯಾಂಡಲ್​ವುಡ್​ನ ರಿಯಲ್​ ಸ್ಟಾರ್ ಉಪೇಂದ್ರ ಕಬ್ಜ ಸಿನಿಮಾ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸೌಂಡ್​ ಮಾಡೋಕ್ಕೆ ರೆಡಿಯಾಗಿರೋದು ಗೊತ್ತೇಯಿದೆ. ಆದರೆ, ಕಬ್ಜ ರಿಲೀಸ್​ಗೂ ಮುನ್ನ ಮತ್ತೊಂದು ಪ್ಯಾನ್​ ಇಂಡಿಯನ್​ ಸಿನಿಮಾಗೇ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಉಪ್ಪಿ​.

ರಿಯಲ್​ ಸ್ಟಾರ್ ಉಪೇಂದ್ರ ಕೈಯ್ಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕಬ್ಜ. ಬುದ್ದಿವಂತ 2, ಹೋಂ ಮಿನಿಸ್ಟರ್, ತ್ರಿಶೂಲಂ ಹೀಗೆ ಸಾಕಷ್ಟು ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿದೆ. ಅಷ್ಟಲ್ಲದೇ ಇನ್ನು ಸಾಕಷ್ಟು ನಿರ್ದೇಶಕರ ಚಿತ್ರಗಳಿಗೆ ಸಹಿ ಮಾಡಿದ್ದಾರೆ ಉಪ್ಪಿ. ಅವುಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿರೋದು ಪ್ಯಾನ್​ ಇಂಡಿಯನ್​ ಸಿನಿಮಾ ಕಬ್ಜ. ಆದರೆ ಕಬ್ಜಾ ಕಂಪ್ಲೀಟ್ ಆಗೋಕ್ಕೂ ಮೊದಲೇ ಮತ್ತೊಂದು ಪ್ಯಾನ್​ ಇಂಡಿಯನ್​ ಸಿನಿಮಾಗೇ ಉಪ್ಪಿ ಸಹಿ ಮಾಡಿದ್ದಾರೆ.

ಈ ಹೊಸ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿದ್ದು, ಚಿತ್ರಕ್ಕೆ ಲಗಾಮ್ ಅಂತ ಟೈಟಲ್​ ಫಿಕ್ಸ್​ ಆಗಿದೆ. ಚಿತ್ರದಲ್ಲಿ ನಾಯಕ ಸಮಾಜದ ಭ್ರಷ್ಟಾಚಾರಕ್ಕೆ ಲಗಾಮು ಹಾಕುವ ಕಥಾಹಂದರವಿರೋದ್ರಿಂದ ಈ ಟೈಟಲ್​ನ್ನ ಇಡಲಾಗಿದ್ಯಂತೆ. ಅಂದ್ಹಾಗೇ ಚಿತ್ರದಲ್ಲಿ ಉಪ್ಪಿ 3 ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಉಪ್ಪಿಗೆ ಹರಿಪ್ರಿಯಾ ಜೋಡಿಯಾಗಲಿದ್ದಾರೆ.

ಈ ಹಿಂದೆ ಗಜ, ಬೃಂದಾವನ ರಾಮ್​ ಸಿನಿಮಾಗಳಿಗೆ ಆ್ಯಕ್ಷನ್​ ಕಟ್ ಹೇಳಿದ್ದ ಕೆ. ಮಾದೇಶ್​ ಈ ಚಿತ್ರಕ್ಕೆ ಸಾರಥಿ. ಸಾಧುಕೋಕಿಲ ಮತ್ತು ಪುತ್ರ ಸುರಾಗ್​ ಲಗಾಮ್​ಗೆ ಮ್ಯೂಸಿಕ್​ ಮಾಡಲಿದ್ದು, ಐದು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಹೊಸ ನಿರ್ಮಾಪಕ ಮುನಿರಾಜು ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಶುರು ಮಾಡೋ ಪ್ಲಾನ್​ನಲ್ಲಿದೆ ಲಗಾಮ್​ ಟೀಂ.

Next Story

RELATED STORIES