Top

ಹೊಸಪೇಟೆಯಲ್ಲಿ ಸಲಗ ಪ್ರೀ ರಿಲೀಸ್ ಇವೆಂಟ್

ಏಪ್ರಿಲ್​ 5ರಂದು ಸಲಗ ಪ್ರಮೋಶನಲ್​ ಸಾಂಗ್​ ರಿಲೀಸ್​ ಆಗಲಿದೆ. ಅದೇ ದಿನ ಪ್ರೀ ರಿಲೀಸ್​ ಇವಂಟ್​ ಡೇಟ್ ಅನೌನ್ಸ್​ ಮಾಡಲಿದೆ ಚಿತ್ರತಂಡ.

ಹೊಸಪೇಟೆಯಲ್ಲಿ ಸಲಗ ಪ್ರೀ ರಿಲೀಸ್ ಇವೆಂಟ್
X

ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್ ಸ್ಟಾರ್ಸ್​ ಸಿನಿಮಾಗಳು ರಿಲೀಸ್​ ಆಗುತ್ತಿದ್ದು, ರಿಲೀಸ್​ಗೂ ಮುನ್ನ ಅದ್ದೂರಿ ಫ್ರೀ ರಿಲೀಸ್​ ಇವೆಂಟ್​​ ಕೂಡ ನಡೀತಿದೆ. ರಾಬರ್ಟ್​ ಆಯ್ತು. ಯುವರತ್ನ ಆಯ್ತು. ಇದೀಗ ಸಲಗ ಸರದಿ. ಹಾಗಾದ್ರೆ ಸಲಗಪ್ರೀ ರಿಲೀಸ್ ಇವೆಂಟ್​ ನಡೆಯಲಿದೆ.

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಡೆಡ್​ ಸಲಗ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸ್ತಿದೆ. ಒಂದಲ್ಲ ಒಂದು ವಿಶೇಷತೆಗಳಿಂದ ಸುದ್ದಿ ಮಾಡ್ತಾನೇ ಇದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್​ ಸಖತ್​ ಸೌಂಡ್ ಮಾಡುತ್ತಿದೆ. ಇನ್ನು ದುನಿಯಾ ವಿಜಯ್​ ಅಭಿಮಾನಿಗಳ ಮೈ ಮೇಲೆ ಸಲಗ ಟ್ಯಾಟೂಗಳು ರಾರಾಜಿಸುತ್ತಿವೆ.

ಈಗಾಗಲೇ ಸಲಗ ರಿಲೀಸ್​ಗೆ ರೆಡಿಯಾಗಿದ್ದು ರಿಲೀಸ್​ಗೂ ಮುನ್ನ ಅದ್ದೂರಿ ಪ್ರೀ ರಿಲೀಸ್​ ಇವೆಂಟ್​ಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಪ್ರೀ ರಿಲೀಸ್​ ಇವೆಂಟ್​ಗಳು ಸಖತ್​ ಟ್ರೆಂಡ್​ ಆಗಿದ್ದು, ಇದು ಕೂಡ ಸಿನಿಮಾ ಪ್ರಮೋಶನ್ ಒಂದು ಭಾಗವಾಗಿದೆ. ಈಗಾಗಲೇ ​ ರಾಬರ್ಟ್​ ಹುಬ್ಬಳ್ಳಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್​ ಮಾಡಿದ್ದು ಗೊತ್ತೇಯಿದೆ. ಸದ್ಯ ಇದೀಗ ಎಲ್ಲೆಲ್ಲೂ ಸದ್ಯ ಯುವರತ್ನ ಹವಾ. ನಂತರ ಕೋಟಿಗೊಬ್ಬ 3 ಚಿತ್ರತಂಡ ಚಿತ್ರದುರ್ಗದಲ್ಲಿ ಪ್ರೀ ರಿಲೀಸ್​ ಇವೆಂಟ್​ಗೆ ರೆಡಿಯಾಗುತ್ತಿದೆ.

ಈ ಮಧ್ಯೆ ಸಲಗ ಚಿತ್ರತಂಡ ಕೂಡ ಪ್ರಮೋಶನ್​ ಶುರುಮಾಡಿದೆ. ಇದರ ಮೊದಲ ಹೆಜ್ಜೆಯೇ ಪ್ರೀ ರಿಲೀಸ್​ ಇವೆಂಟ್. ಏಪ್ರಿಲ್​ 15 ರಂದು ಸಿನಿಮಾ ತೆರೆಗೆ ಬರೋ ಪ್ಲಾನ್​ ಆಗಿದ್ದು, ಏಪ್ರಿಲ್​ 10ರಂದು ಹೊಸಪೇಟೆಯಲ್ಲಿ ಈ ಕಾರ್ಯಕ್ರಮ ಮಾಡೋ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೆಂಚೂರಿ ಸ್ಟಾರ್ ಶಿವಣ್ಣ ಅಥವಾ ಪವರ್ ಸ್ಟಾರ್ ಆಗಮಿಸಲಿದ್ದಾರೆ.

ಅಂದ್ಹಾಗೇ ಈ ಹಿಂದೆ ನಿರ್ಮಾಪಕ ಕೆ.ಪಿ ಶ್ರೀಕಾಂತ್​ ತಮ್ಮ ಮೊದಲ ನಿರ್ಮಣದ ಟಗರು ಚಿತ್ರದ ಆಡಿಯೋ ರಿಲೀಸ್​ ಹೊಸಪೇಟೆಯಲ್ಲಿ ಮಾಡಿದರಿಂದ, ಆ ಸೆಂಟಿಮೆಂಟ್​ನಿಂದ 2ನೇ ಚಿತ್ರದ ಇವೆಂಟ್​ನ್ನ ಕೂಡ ಅದೇ ಊರಿನಲ್ಲಿ ಪ್ಲಾನ್​ ಮಾಡಿದ್ದಾರಂತೆ. ಇನ್ನು ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಲಗ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ ನೃತ್ಯ ತಂಡಗಳು.

ಇನ್ನು ಫ್ರೀ ರಿಲೀಸ್​ ಇವೆಂಟ್​​ಗೂ ಮುನ್ನ ಏಪ್ರಿಲ್​ 5ರಂದು ಸಲಗ ಪ್ರಮೋಶನಲ್​ ಸಾಂಗ್​ ರಿಲೀಸ್​ ಆಗಲಿದೆ. ಅದೇ ದಿನ ಪ್ರೀ ರಿಲೀಸ್​ ಇವಂಟ್​ ಡೇಟ್​ನ್ನ ಅಪಿಶೀಯಲ್​ ಆಗಿ ಅನೌನ್ಸ್​ ಮಾಡಲಿದೆ ಚಿತ್ರತಂಡ.

Next Story

RELATED STORIES