Top

ಸಲಾರ್​​​​​ಗೆ ಎಂಟ್ರಿಯಾಗ್ತಾರಾ ಕಾಲಿವುಡ್​ ಸ್ಟಾರ್ ಹೀರೋ..?

ಬಾಹುಬಲಿ ಎದುರು ವಿಲನ್​ ಆಗಿ ಅಬ್ಬರಿಸ್ತಾರಾ ಸೇತುಪತಿ

ಸಲಾರ್​​​​​ಗೆ  ಎಂಟ್ರಿಯಾಗ್ತಾರಾ ಕಾಲಿವುಡ್​ ಸ್ಟಾರ್ ಹೀರೋ..?
X

ಸಲಾರ್, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ರೀಸೆಂಟಾಗಿ ಹೈದ್ರಾಬಾದ್​ನಲ್ಲಿ ಮುಹೂರ್ತ ಅದ್ದೂರಿ ಮುಹೂರ್ತ ಕೂಡ ನೆರವೇರಿದೆ. ಇದೀಗ ಟಾಲಿವುಡ್​ ಸ್ಟಾರ್ ಪ್ರಭಾಸ್​ ಜೊತೆ ಸ್ಕ್ರೀನ್​ ಶೇರ್ ಮಾಡೋಕ್ಕೆ ಕಾಲಿವುಡ್​​ ಸ್ಟಾರ್ ಒಬ್ರ ಎಂಟ್ರಿಯಾಗ್ತಿದ್ಯಂತೆ.

ಒಂದು ಕಡೆ ಬಾಹುಬಲಿ ಮೂಲಕ ತೆಲುಗು ಚಿತ್ರರಂಗದ ಮಾರುಕಟ್ಟೆಯನ್ನ ಜಾಗತಿಕ ‌ಮಟ್ಟಕ್ಕೆ ಏರಿಸಿದ ನಟ, ಇನ್ನೊಂದು ಕಡೆ ಕರ್ನಾಟಕಕಷ್ಟೇ ಸಿಮೀತ ಅನಿಸಿಕೊಂಡಿದ್ದ ಚಿತ್ರರಂಗವನ್ನು ನ್ಯಾಷನಲ್‌ ಲೆವಲ್ ಗೆ ಕೊಂಡೊಯ್ದ ನಿರ್ದೇಶಕ. ಇವರಿಬ್ಬರು ಈಗ ಒಟ್ಟಾಗಿ ಮಾಡ್ತಿರೋ ಸಿನಿಮಾನೆ ಸಲಾರ್.

ರೀಸೆಂಟಾಗಿ ಹೈದ್ರಾಬಾದ್​ನಲ್ಲಿ ಸಲಾರ್ ಚಿತ್ರಕ್ಕೆ ಅದ್ದೂರಿ ಮುಹೂರ್ತ ನೆರವೇರಿತ್ತು. ಚಿತ್ರತಂಡದ ಜೊತೆಗೆ ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿತ್ತು. ಮುಹೂರ್ತ ಕಾರ್ಯಕ್ರಮದಲ್ಲಿ ಪ್ರಭಾಸ್​ ಜೊತೆಗೆ ರಾಕಿಂಗ್​ ಸ್ಟಾರ್ ಯಶ್ ಕೂಡ ಭಾಗಿಯಾಗಿದ್ದು ಗೊತ್ತೇಯಿದೆ.

ಇದೀಗ ಸಲಾರ್​​ ಸಿನಿಮಾ ಬಗ್ಗೆ ಮತ್ತೊಂದು ಸಖತ್ ಸುದ್ದಿ ಹರಿದಾಡ್ತಿದೆ. ಕಾಲಿವುಡ್​ ಸ್ಟಾರ್ ನಟ ವಿಜಯ್ ಸೇತುಪತಿ ಸದ್ಯದಲ್ಲೇ ಸಲಾರ್ ಟೀಂ ಸೇರಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ ವಿಜಯ್​ ಸೇತುಪತಿ ವಿಲನ್​ ಅಗಿ ಅಬ್ಬರಿಸಲಿದ್ದಾರಂತೆ. ಶೂಟಿಂಗ್ ಶುರುವಾಗೋದೇ ಪ್ರಭಾಸ್​ ಮತ್ತು ವಿಜಯ್​ ಸೇತುಪತಿ ಕಾಂಬಿನೇಷನ್​ ನಿಂದ ಸೀನ್​​ಗಳಿಂದ ಅಂತ್ಲೂ ಹೇಳಲಾಗ್ತಿದೆ. ಯಾವುದೇ ಬ್ರೇಕ್​ ಇಲ್ಲದೇ ಒಂದೇ ಶಡ್ಯೂಲ್​ನಲ್ಲಿ ವಿಜಯ್​ ಸೇತುಪತಿ ದೃಶ್ಯಗಳನ್ನ ಚಿತ್ರಿಕರಿಸೋ ಪ್ಲಾನ್​ ಮಾಡಿಕೊಂಡಿದ್ದಾರಂತೆ.

ಸದ್ಯ ವಿಜಯ್ ಸೇತುಪತಿ, ದಳಪತಿ ವಿಜಯ್​ ಎದುರು ಖಳನಾಯಕನಾಗಿ ,ಮಾಸ್ಟರ್ ಚಿತ್ರದಲ್ಲಿ ಅಬ್ಬರಿಸ್ತಾ ಇದ್ದಾರೆ. ವಿಜಯ್​ ಸೇತುಪತಿ ಹೀರೋ ಆಗಿ ಸಿನಿಮಾಗಳನ್ನ ಮಾಡಿದ್ರು, ಒಂದೇ ಇಮೇಜ್​ ಬಿಲ್ಡ್​ ಮಾಡಿಕೊಳ್ಳದೇ ಹೊಸ ಹೊಸ ಭೀನ್ನ ವಿಭಿನ್ನ ಪಾತ್ರಗಳನ್ನ ಟ್ರೈ ಮಾಡ್ತಾ, ಎಲ್ಲ ರೀತಿಯ ಪಾತ್ರಗಳಲ್ಲೂ ಅಭಿನಯಿಸಿ ಸೈ ಅನ್ನಿಸಿಕೊಂಡಿರೋ ನಟ. ಇನ್ನು ಸಲಾರ್​ನಲ್ಲಿ ಪ್ರಭಾಸ್​ ಎದುರು ಸೇತುಪತಿ ವಿಲನ್​ ಅನ್ನೋ ವಿಚಾರವನ್ನ ಅಫಿಶಿಯಲ್​ ಚಿತ್ರತಂಡ ಅನೌನ್ಸ್​ ಮಾಡೋವರೆಗೂ ಕ್ಯೂರಿಯಾಸಿಟಿ ಇದ್ದೇ ಇರುತ್ತೆ.

ಅದೇನೆ ಇರ್ಲಿ ಈವರೆಗೂ ಸಲಾರ್ ಸಿನಿಮಾ ಬಗ್ಗೆ , ಕಥೆ ಬಗ್ಗೆ ಚಿತ್ರತಂಡ ಕೊಂಚವೂ ಮಾಹಿತಿ ಬಿಟ್ಟುಕೊಡದೇ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. ಜೊತೆಗೆ ಒಂದೊಂದೇ ಸರ್ಪ್ರೈಸ್​ ಸುದ್ದಿಗಳು ಹೊರಬೀಳ್ತಿವೆ. ಮುಂದಿನ ದಿನಗಳಲ್ಲಿ ಸಲಾರ್​ನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳು ಕಾದಿದ್ಯೋ ಅನ್ನೋ ಕುತೂಹಲವಂತೂ ಸಿನಿಪ್ರಿಯರಲ್ಲಿ ಇದ್ದೇ ಇದೆ.

Next Story

RELATED STORIES