Top

ಸಖತ್​ ಸುದ್ದಿ ಮಾಡುತ್ತಿದೆ ಆಪ್ತ ಗೆಳೆಯರ ಹೊಸ ವೆಂಚರ್

ಮತ್ತೆ ಒಂದಾದ ತರುಣ್​​-ಶರಣ್​​​, ಡಿ.21ಕ್ಕೆ ಟೈಟಲ್​ ರಿವೀಲ್

ಸಖತ್​ ಸುದ್ದಿ ಮಾಡುತ್ತಿದೆ ಆಪ್ತ ಗೆಳೆಯರ ಹೊಸ ವೆಂಚರ್
X

ಸ್ಯಾಂಡಲ್​ವುಡ್​ನ ಆಪ್ತ ಗೆಳೆಯರಾದ ಶರಣ್​ ಮತ್ತು ತರುಣ್​ ಸುಧೀರ್​ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ವಿಷ್ಹಲ್ ಪೋಸ್ಟರ್​ ಮೂಲಕ, ಸಖತ್​ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿದ್ದ ಶರಣ್, ಸದ್ಯದಲ್ಲೇ ಟೈಟಲ್​ ರಿವೀಲ್​ ಮಾಡಲಿದ್ದಾರೆ.

ರ್ಯಾಂಬೋ ಸಿನಿಮಾ ಮೂಲಕ ನಾಯಕನಟನಾಗಿ ಶರಣ್​ ಎಂಟ್ರಿ ಕೊಟ್ಟಾಗಿದಿನಿಂದ, ಸಿನಿಮಾ ವಿಚಾರವಾಗಿ ಸಾಥ್​ ಕೊಡ್ತಾ ಬರ್ತಿದ್ದಾರೆ ತರುಣ್​ ಸುಧೀರ್. ಸಿನಿಮಾ ಹೊರತು ಪಡಿಸಿಯೂ, ಇವರಿಬ್ಬರೂ ಆತ್ಮೀಯ ಗೆಳೆಯರು. ಇದೀಗ ಒಟ್ಟಾಗಿ ಸಿನಿಮ ಮಾಡೋಕ್ಕೆ ರೆಡಿಯಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಟ ಶರಣ್​​, ವಿಷ್ಹಲ್​ ಸಿಂಬಲ್ ಇರುವಂತಹ ಪೋಸ್ಟರ್​ ಒಂದನ್ನ ಬಿಡುಗಡೆ ಮಾಡಿದರು. ಅಷ್ಟೇಅಲ್ಲ, ಏನೇ ಮಾತನಾಡಿಸಿದ್ರೂ ವಿಸಲ್​ನಲ್ಲೇ ಉತ್ತರ ಕೊಡುವ ವಿಡಿಯೋವೊಂದನ್ನ ಹರಿಬಿಟ್ಟು, ಎಲ್ಲರನ್ನೂ ಕುತೂಹಲ ಮೂಡಿಸಿದರು.

ಪೋಸ್ಟರ್ ನೋಡಿದವರೆಲ್ಲಾ ವಿಷ್ಹಲ್ ಅನ್ನೊದೇ ಚಿತ್ರದ ಟೈಟಲ್​ ಅಂತ ಊಹೆ ಮಾಡಿದರು. ಆದರೆ, ಇದೀಗ ಇದೇ ಡಿಸೆಂಬರ್ 21ಕ್ಕೆ ಟೈಟಲ್​ ರಿವೀಲ್​ ಮಾಡೋದಾಗಿ ಹೇಳಿದ್ದಾರೆ ಶರಣ್. ''ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಟೈಟಲ್​ನ್ನ ಡಿಸೆಂಬರ್ 21ರಂದು ಅನಾವರಣಗೊಳಿಸಲಾಗುವುದು'' ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಂದ್ಹಾಗೇ ಮೊದಲ ಬಾರಿಗೆ ಶರಣ್​ ಮತ್ತು ತರುಣ್​ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡುತ್ತಿರೋದೇ ಆದ್ರೂ, ಈ ಹಿಂದೆ ಶರಣ್​ ಅಭೀನಯದ ರ್ಯಾಂಬೋ ಚಿತ್ರಕ್ಕೆ ರೈಟರ್ ಆಗಿ, ವಿಕ್ಟರಿ 2 ಚಿತ್ರಕ್ಕೆ ಸ್ಟೋರಿ ಮತ್ತು ಸ್ಕ್ರೀನ್​ ಪ್ಲೇ ಮಾಡಿದ್ದಾರೆ ತರುಣ್.

ಅಂದ್ಹಾಗೆ, ಚಿತ್ರಕ್ಕೆ ಜಗದೀಶ್ ಹಂಪಿ ಆ್ಯಕ್ಷನ್​ ಕಟ್ ಹೇಳ್ತಿದ್ದು, ಸದ್ಯದಲ್ಲೇ ಉಳಿದ ಮಾಹಿತಿ ಹೊರಬೀಳಲಿದೆ.

Next Story

RELATED STORIES