Top

ಸೋಶಿಯಲ್​ ಮೀಡಿಯಾದಲ್ಲಿ ರಾಬರ್ಟ್​ ಟೀಸರ್ ಹವಾ

  • 5 ಮಿಲಿಯನ್​​​ ವೀವ್ಸ್​ , ಫ್ಯಾನ್ಸ್​ಗೆ ಧನ್ಯವಾದ ಹೇಳಿದ ದಚ್ಚು.
  • ಅಕ್ಟೋಬರ್ 9 ಕ್ಕೆ ರಾಬರ್ಟ್​ ಹೊಸ ಪೋಸ್ಟರ್ ರಿಲೀಸ್​
  • ಪೋಸ್ಟರ್​ನಲ್ಲಿ ಹೇಗಿರುತ್ತೆ ಚಾಲೆಂಜಿಂಗ್​ ಸ್ಟಾರ್ ಲುಕ್..?

ಸೋಶಿಯಲ್​ ಮೀಡಿಯಾದಲ್ಲಿ ರಾಬರ್ಟ್​ ಟೀಸರ್ ಹವಾ
X

ಅಕ್ಟೋಬರ್ 15ಕ್ಕೆ ಥಿಯೇಟರ್ ರೀ ಓಪನ್​ಅಂತಿದ್ದ ಹಾಗೇ. ರಾಬರ್ಟ್​ ಸಿನಿಮಾ ರಿಲೀಸ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಡಿ ಫ್ಯಾನ್ಸ್. ಆದರೆ, ಸದ್ಯಕ್ಕಂತೂ ರಾಬರ್ಟ್​ ರಿಲೀಸ್​ ಡೇಟ್ ಅನೌನ್ಸ್ ಆಗಿಲ್ಲ. ಆದರೂ ಡಿ ಫ್ಯಾನ್ಸ್​ಗೆ ಒಂದು ಗುಡ್​ ನ್ಯೂಸ್ ಅಂತೂ ಇದ್ದೇ ಇದೆ. ಈ ಗುಡ್​ ನ್ಯೂಸ್​ಗೆ ಸ್ವತಃ ಚಾಲೆಂಜಿಂಗ್​ ಸ್ಟಾರೇ ಖುಷಿಯಾಗಿದ್ದಾರೆ.

ಸ್ಯಾಂಡಲ್​ವುಡ್​ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಅಂಡ್ ಬಿಗ್​ ಬಜೆಟ್ ಸಿನಿಮಾ ರಾಬರ್ಟ್​. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟು ಹೊತ್ತಿಗೆ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಕೊರೊನಾ ಮತ್ತು ಲಾಕ್​ಡೌನ್​ ಇದಕ್ಕೆಲ್ಲಾ ಬ್ರೇಕ್​ ಹಾಕಿತ್ತು. ಆದ್ರೀಗ ಅಕ್ಟೋಬರ್​ 15 ರಿಂದ ಥಿಯೇಟರ್​ ರೀ ಓಪನ್​ಗೆ ಪರ್ಮಿಶನ್​ ಸಿಕ್ಕಿದೆ. ಪರ್ಮಿಶನ್​ ಸಿಕ್ಕಿದ್ದೇ ತಡ ರಾಬರ್ಟ್​ ರಿಲೀಸ್​ ಯಾವಾಗ ಅಂತ ಡಿ ಫ್ಯಾನ್ಸ್​ ಕಾತುರದಿಂದ ಕಾಯುತ್ತಿದ್ದಾರೆ.

ಆದರೆ, ಸದ್ಯ ರಾಬರ್ಟ್​ ಚಿತ್ರದ ರಿಲೀಸ್​ ಡೇಟ್ ಅನೌನ್ಸ್ ಆಗಿಲ್ಲ ಅಂದ್ರೂ, ಒಂದು ಗುಡ್​ ನ್ಯೂಸ್ ಆಂತೂ ಇದ್ದೆ ಇದೆ. 7 ತಿಂಗಳ ಹಿಂದೆ ರಿಲೀಸ್ ಆಗಿದ್ದ ರಾಬರ್ಟ್​ ಅಫೀಶಿಯಲ್​ ಟೀಸರ್ ಸದ್ಯ ಯೂಟ್ಯೂಬ್​ನಲ್ಲಿ 5 ಮಿಲಿಯನ್​ ವೀವ್ಸ್​ ಪಡೆದು ದಾಖಲೆ ಬರೆದಿದೆ. ರಾಬರ್ಟ್​ ದಾಖಲೆಗೆ ಡಿ ಫ್ಯಾನ್ಸ್​ ದಿಲ್​ ಖುಷ್ ಆಗಿದ್ದಾರೆ.

ಅಂದ್ಹಾಗೇ ರಾಬರ್ಟ್​ ಟೀಸರ್ ದಾಖಲೆ ಬಗ್ಗೆ ಸ್ವತ: ಚಾಲೆಂಜಿಂಗ್​ ಸ್ಟಾರ್ ಸಂತಸ ವ್ಯಕ್ತಪಡಿಸಿದ್ದು, ರಾಬರ್ಟ್ ಚಿತ್ರದ ಟೀಸರ್ ಐದು ಮಿಲಿಯನ್​ ವಿವ್ಸ್​​ಗೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ನಿಮ್ಮ ದಾಸ ದರ್ಶನ್' ಅಂತ ಟ್ವಿಟ್​ ಮಾಡಿದ್ದಾರೆ.

ಈಗಾಗಲೇ ರಾಬರ್ಟ್​ ಚಿತ್ರದ ಡಿಫ್ರೆಂಟ್ ಡಿಫ್ರೆಂಟ್ ಪೋಸ್ಟರ್ಸ್​ ಮ್ತತು ಸ್ಯಾಂಪಲ್ಸ್​ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇದೀಗ ರಾಬರ್ಟ್​ ಚಿತ್ರ ನಿರ್ದೇಶಕ ತರುಣ್​ ಸುಧೀರ್​ ಹುಟ್ಟುಹಬ್ಬಕ್ಕೆ ಅಂದ್ರೆ ಅಕ್ಟೋಬರ್ 9 ಕ್ಕೆ ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಆಗ್ತಿದೆ. ಈ ಹಿಂದೆ ರಾಮ ಭಕ್ತ ಹನುಮ ಹಾಗೂ ರಾಕ್​ಸ್ಟಾರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿರೋ ದಚ್ಚು,,ಮುಂದಿನ ಪೋಸ್ಟರ್​ನಲ್ಲಿ ಯಾವ ಲುಕ್​ನಲ್ಲಿ ಇರ್ತಾರೆ ಅನ್ನೋ ಕುತೂಹಲ ಶುರುವಾಗಿದೆ.

ತರುಣ್​ ಸುಧೀರ್ ನಿರ್ದೆಶನದ ರಾಬರ್ಟ್​ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್​ ಬಂಡವಾಳ ಹಾಕಿದ್ದು, ಈಗಾಗ್ಲೇ ಚಿತ್ರದ ಟೀಸರ್ ಸಾಂಗ್ಸ್, ಮೇಕಿಂಗ್ ನೋಡುತ್ತಿದ್ರೆ, ಸಿನಿಮಾ ಅದ್ದೂರಿಯಾಗಿ ಮೂಡಿಬಂದಿರೋದರಲ್ಲಿ ಡೌಟೇ ಇಲ್ಲ. ಇನ್ನು ಥಿಯೇಟರ್​ ರೀ ಓಪನ್​ ನಂತ್ರ ತೆರೆಕಾಣಲಿರೋ ಮೊದಲ ಬಿಗ್​ ಬಜೆಟ್ ಸಿನಿಮಾ ರಾಬರ್ಟ್​ ಆಗಲಿದೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ. ಸದ್ಯದಲ್ಲೇ ಚಿತ್ರತಂಡ ಈ ಪ್ರಶ್ನೆಗೆ ಉತ್ತರ ಕೊಡಲಿದೆ.

Next Story

RELATED STORIES