ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ ಕೆಜಿಎಫ್-2 ಟೀಸರ್
ಕೆಜಿಎಫ್ ಜಾತ್ರೆಗೆ ಅಭಿಮಾನಿಗಳಿಂದ ಭರ್ಜರಿ ಪ್ರಿಪರೇಷನ್..!

ಕೆಜಿಎಫ್ 2 ಟೀಸರ್ ರಿಲೀಸ್ಗೆ ಇನ್ನು ಕೆಲಗಂಟೆಗಳಷ್ಟೇ ಬಾಕಿ. ಈ ಅದ್ದೂರಿ ಟೀಸರ್ನ್ನ ಬರಮಾಡಿಕೊಳ್ಳೋಕ್ಕೆ ಅಭಿಮಾನಿಗಳಂತೂ ಸಖತ್ ಪ್ರಿಪರೇಷನ್ ಮಾಡಿಕೊಂಡಿದ್ದಾರೆ. ಕೆಜಿಎಫ್ 2 ಟೀಸರ್ಗೆ ಹೇಗಿದೆ ಕ್ರೇಜ್ ಅಂದ್ರೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಥಿಯೇಟರ್ಗಳಲ್ಲಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ.
ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಎಲ್ಲಿ ನೋಡಿದ್ರೂ ಕೆಜಿಎಫ್. ಕಾಶ್ಮೀರದಲ್ಲೂ ಕೆಜಿಎಫ್. ಬೆಂಗಳೂರಿನಲ್ಲೂ ಕೆಜಿಎಫ್, ಕನ್ನಡದಲ್ಲೂ ಕೆಜಿಎಫ್, ಹಿಂದಿಯಲ್ಲೂ ಕೆಜಿಎಫ್, ಫೇಸ್ಬುಕ್, ಟ್ವಿಟರ್ನಲ್ಲೂ ಕೆಜಿಎಫ್. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಇಡೀ ಭಾರತವೇ ಕೆಜಿಎಫ್ ಅನ್ನೋ ಮೂರಕ್ಷರದ ಪದವನ್ನು ಗುನುಗುತ್ತಿದೆ. ಕಾರಣ ಕೆಜಿಎಫ್ ಚಾಪ್ಟರ್ 2ನ ಟೀಸರ್ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಇಡೀ ದೇಶವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಕ್ಷಣಕ್ಕೆ ಇನ್ನು ಗಂಟೆಗಳು ಮಾತ್ರ ಬಾಕಿ.

ಈ ರೀತಿಯ ಕ್ರೇಜ್ ಸ್ಯಾಂಡಲ್ವುಡ್ ಹಿಂದೆಂದೂ ಕಂಡಿಲ್ಲ, ಕೇಳಿಲ್ಲ, ಸಿನಿಮಾ ರಿಲೀಸ್ ಆಗೋ ಟೈಮಲ್ಲಿ ಅಭಿಮಾನಿಗಳಲ್ಲಿ ಈ ರೀತಿಯ ಕ್ರೇಜ್ ಇರೋದು ಸಾಮಾನ್ಯ ಆದರೆ ಒಂದು ಟೀಸರ್ ರಿಲೀಸ್ಗೆ ಈ ರೀತಿಯ ವಾತಾವರಣ ಸೃಷ್ಟಿಯಾಗಿರೋದು ಬಹುಶಃ ಇದೇ ಮೊದಲು. ಕೆಜಿಎಫ್ 2 ರೀತಿ ಇದುವರೆಗೂ ಯಾವ ಟೀಸರ್ ಕೂಡ ರಿಲೀಸ್ ಆಗಿಲ್ಲ. ಹಿಂದೆಂದೂ ಆಗಿಲ್ಲ. ಮುಂದೆ ಆಗುತ್ತೆ ಅನ್ನೋ ಗ್ಯಾರೆಂಟಿ ಇಲ್ಲ.
ಇದು ಕೇವಲ ಟೀಸರ್ ರಿಲೀಸ್ ಕಾರ್ಯಕ್ರಮ ಅಲ್ಲ. ಇದೊಂದು ಹಬ್ಬ. ದೊಡ್ಡಬಳ್ಳಾಪುರದಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ಗೆ ಅಭಿಮಾನಿಗಳು ಭರ್ಜರಿ ಪ್ರಿಪರೇಷನ್ ಮಾಡಿಕೊಂಡಿದ್ದಾರೆ. ಯಶ್ ಹುಟ್ಟುಹಬ್ಬ ಮತ್ತು ಟೀಸರ್ ರಿಲೀಸ್ ಕಾರ್ಯಕ್ರಮವನ್ನ ಅದ್ಧೂರಿಯಾಗಿ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ಉಚಿತವಾಗಿ ಟೀಸರ್ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರವಿ ಡಿ ಚೆನ್ನಣ್ಣವರ್ ಮತ್ತು ಕೆಜಿಎಫ್ ಖ್ಯಾತಿಯ ಗರುಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇದು ದೊಡ್ಡಬಳ್ಳಾಪುರದ ಅಭಿಮಾನಿಗಳ ಕ್ರೇಜ್ ಆದರೆ ಇತ್ತ ಬೆಂಗಳೂರಿನಲ್ಲೂ ಅಭಿಮಾನಿಗಳು ಭರ್ಜರಿಯಾಗಿ ತಯಾರಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಗೌಡನಪಾಳ್ಯ ಚಿತ್ರಮಂದಿರದಲ್ಲಿ ಅದ್ದೂರಿ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಮುಗಿದ ತಕ್ಷಣ ಸಿಹಿ ಹಂಚಿಕೆ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಈ ಗರುಡ ಅತಿಥಿಯಾಗಿ ಆಗಮಿಸಲಿದ್ದಾರೆ. ಹೀಗೆ ಹಲವು ಕಡೆಗಳಲ್ಲಿ ಅದ್ಧೂರಿಯಾಗಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಭರ್ಜರಿ ಪ್ರಿಪರೇಷನ್ ಮಾಡಿಕೊಳ್ಳಲಾಗಿದೆ.
ಇದು ಅಭಿಮಾನಿಗಳ ಕ್ರೇಜ್ ಆದ್ರೆ ಚಿತ್ರತಂಡ ಕೂಡ ಟೀಸರ್ ಆಗುವ ಕ್ಷಣಕ್ಕೆ ಕಾತರದಿಂದ ಎದುರು ನೋಡುತ್ತಿದೆ. ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಅಂತೂ ಸೂಪರ್ ಎಕ್ಸೈಟ್ ಆಗಿದ್ದಾರೆ. ಪ್ರತಿದಿನ ಕೌಂಟ್ಡೌನ್ ಪೋಸ್ಟರ್ ರಿಲೀಸ್ ಮಾಡುತ್ತಿರುವ ಪ್ರಶಾಂತ್ ನೀಲ್, ಇಂದು ಕೂಡ ಹೊಸ ಪೋಸ್ಟರ್ ಅನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಎಂದಿನಂತೆ ಕೆಜಿಎಫ್ ಪೇಪರ್ ರಿಲೀಸ್ ಆಗಿದೆ. ಈ ಪೇಪರ್ಗೆ ಅಧೀರ ಹೇಗೆ ಬದುಕಿ ಉಳಿದ ಅನ್ನೋ ಟೈಟಲ್ ಕೊಡಲಾಗಿದೆ. ಇದು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.