Top

'ಯುವರತ್ನ' ಚಿತ್ರದ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ ಚಿತ್ರ ತಂಡ

ಇನ್ನು ಈ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಯುವರತ್ನ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ ಚಿತ್ರ ತಂಡ
X

ಬೆಂಗಳೂರು: ಸ್ಯಾಂಡಲ್​ವುಡ್​ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ 'ಯುವರತ್ನ' ಚಿತ್ರ ತಂಡದಿಂದ ದೊಡ್ಡ ಅನೌನ್ಸ್​ಮೆಂಟ್ ಹೊರಬಿದ್ದಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳಿದ್ದ ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಹೊಂಬಾಳೆ ಫಿಲ್ಮ್ಸ್ ಇಂದು ರಿಲೀಸ್ ಡೇಟ್ ಬಹಿರಂಗಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.

ಹೊಸ ವರ್ಷಕ್ಕೆ 'ಯುವರತ್ನ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಸಿನಿಮಾತಂಡ ಈಗಾಗಲೇ ಬಹಿರಂಗಪಡಿಸಿತ್ತು. ಈ ಮಾತಿನಂತೆ ಹೊಸ ವರ್ಷದ ಮೊದಲ ದಿನವೇ ಸಿಹಿ ಸುದ್ದಿ ನೀಡುವ ಮೂಲಕ ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿವಂತೆ ಮಾಡಿದೆ.

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್​ ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಈ ಚಿತ್ರ 'ಏಪ್ರಿಲ್ 1'ಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಕೊರೊನಾ ಲಾಕ್​ಡೌನ್ ಬಳಿಕ ಕನ್ನಡದಲ್ಲಿ ಬಿಗ್ ಬಜೆಟ್​ನ ಬಿಗ್ ಸ್ಟಾರ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೊದಲ ಸಿನಿಮಾ ಇದಾಗಿದೆ.

ಸದ್ಯ ಮಾಹಿತಿ ಪ್ರಕಾರ; ಇದುವರೆಗೂ ಬಿಗ್​​ ಬಜೆಟ್​ನ ಬಿಗ್ ಸ್ಟಾರ್ ಸಿನಿಮಾಗಳ ರಿಲೀಸ್ ಬಗ್ಗೆ ಯಾರು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಯುವರತ್ನ ಸಿನಿಮಾ ಹೊಸ ವರ್ಷಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸ್ಯಾಂಡಲ್​ವುಡ್​ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ಇನ್ನು ಈ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.


Next Story

RELATED STORIES