Top

ಬುಡಕಟ್ಟು ಜನಾಂಗದವರಿಗೆ ರಾಣಾ ದಗ್ಗುಬಾಟಿ ನೆರವಿನ ಹಸ್ತ

400 ಬುಡಕಟ್ಟು ಕುಟುಂಬಗಳಿಗೆ ಮೂಲಭೂತ ವಸ್ತು ಒದಗಿಸಿದ ರಾಣಾ

ಬುಡಕಟ್ಟು ಜನಾಂಗದವರಿಗೆ ರಾಣಾ ದಗ್ಗುಬಾಟಿ ನೆರವಿನ ಹಸ್ತ
X

ಕೊರೊನಾ ವಿರುದ್ಧ ಇಡೀ ಮನುಕುಲವೇ ಹೋರಾಡ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉಳ್ಳವರು ಇಲ್ಲದವರಿಗೆ ಆಸರೆಯಾಗ್ತಿದ್ದಾರೆ. ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳು ಕೂಡ ತಮ್ಮ ನೆಲದಲ್ಲಿ ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ..ಇದೀಗ ಟಾಲಿವುಡ್​ ಸ್ಟಾರ್ ರಾಣಾ ದಗ್ಗುಬಾಟಿ ಕೂಡ ಬುಡಕಟ್ಟು ಜನಾಂಗವರಿಗೆ ನೆರವಾಗಿದ್ದಾರೆ.

ಕೊರೊನಾ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಹಳಷ್ಟು ಜನರಿಗೆ ಅನೇಕ ಸ್ಟಾರ್‌ಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಕೂಡ ಜನರಿಗೆ ನೆರವಾಗ್ತಿದ್ದಾರೆ. ಸುಮಾರು 400 ಬುಡಕಟ್ಟು ಕುಟುಂಬಗಳಿಗೆ ರಾಣಾ ದಗ್ಗುಬಾಟಿ ಸಹಾಯ ಹಸ್ತ ಚಾಚಿದ್ದಾರೆ.

ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿರುವ ಬುಡಕಟ್ಟು ಕುಟುಂಬಗಳಿಗೆ ಬೇಕಾಗಿರುವ ಅವಶ್ಯಕ ಮೂಲಭೂತ ವ್ಯವಸ್ಥೆಯನ್ನು ರಾಣಾ ದಗ್ಗುಬಾಟಿ ಕಲ್ಪಿಸಿದ್ದಾರೆ. ಅಲ್ಲಿನ ಎಲ್ಲಾ ಹಳ್ಳಿಗಳಿಗೂ ದಿನಸಿ ಸಾಮಗ್ರಿಗಳು ಹಾಗೂ ಅತ್ಯವಶ್ಯಕ ಔಷಧಿಗಳನ್ನು ರಾಣಾ ದಗ್ಗುಬಾಟಿ ತಂಡ ಒದಗಿಸಿದೆ. ಸಹಾಯ ಪಡೆದ ಬುಡಕಟ್ಟು ಜನಾಂಗದವರು ರಾಣಾಗೆ ಧನ್ಯವಾದ ತಿಳಿಸಿದ್ದಾರೆ.

ಅಂದ್ಹಾಗೇ ರೀಸೆಂಟಾಗಿ ರಾಣಾ ಅಭಿನಯದ ಅರಣ್ಯ ಸಿನಿಮಾ ತೆರೆಗೆ ಬಂದಿದ್ದು ಗೊತ್ತೇಯಿದೆ..ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಸಮಯ ಕಾಡಿನಲ್ಲೇ ಕಳೆದಿದ್ದ ರಾಣಾಗೆ, ಅಲ್ಲಿನ ಜನರ ಪರಿಸ್ಥಿತಿಗಳ ಅರಿವಾಗಿತ್ತಂತೆ. ಹಾಗಾಗಿ ಅಲ್ಲಿನ ಜನರಿಗೆ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರಂತೆ.

ಇನ್ನು ರಾಣಾ ದಗ್ಗುಬಾಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ 'ವಿರಾಟ ಪರ್ವಂ' ಹಾಗೂ ರೀಮೇಕ್ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದ ನಂತ್ರ ಈ ಎರಡೂ ಚಿತ್ರಗಳ ಶೂಟಿಂಗ್ ಶುರುವಾಗಲಿದೆ.

ಒಟ್ಟಿನಲ್ಲಿ ಸಿನಿಮಾ ನಟರು ಇಂತಹ ಸಮಯದಲ್ಲಿ ಕಣ್ಣುಮುಚ್ಚಿ ಕೂರದೇ ತಮ್ಮ ಕೈಲಾದ ಸಹಾಯ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ.

ವರದಿ- ಅರ್ಚನಾಶರ್ಮಾ

Next Story

RELATED STORIES