Top

ಉಪ್ಪಿ 'ಕಬ್ಜ' ಬೆನ್ನಿಗೆ ನಿಂತ ರಾಮ್​ಗೋಪಾಲ್​ ವರ್ಮಾ

  • ಬಾಕ್ಸಾಫೀಸ್​ ದೋಚಲು ಆರ್​. ಚಂದ್ರು- ಉಪ್ಪಿ ಜೋಡಿ ರೆಡಿ
  • ಶೀಘ್ರದಲ್ಲೇ ಪುನರಾರಂಭವಾಗಲಿದೆ 'ಕಬ್ಜ' ಸಿನಿಮಾ ಶೂಟಿಂಗ್.
  • ರಿಯಲ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್​ ಗಿಫ್ಟ್.

ಉಪ್ಪಿ ಕಬ್ಜ ಬೆನ್ನಿಗೆ ನಿಂತ ರಾಮ್​ಗೋಪಾಲ್​ ವರ್ಮಾ
X

ಅದ್ಧೂರಿತನ ಅಂದ್ರೆ, ಆರ್​ ಚಂದ್ರು, ಆರ್​. ಚಂದ್ರು ಅಂದ್ರೆ ಅದ್ಧೂರಿತನ. ಉಪ್ಪಿ ಮತ್ತು ಆರ್​. ಚಂದ್ರು ಕಾಂಬಿನೇಷನ್​ನಲ್ಲಿ ಬರ್ತಿರೋ ಕಬ್ಜ ಸಿನಿಮಾ ಸೆಟ್ಟೇರಿದ ದಿನದಿಂದಲೂ ಬೇಜಾನ್​ ಸೌಂಡ್​ ಮಾಡುತ್ತಿದೆ. ಕೊರೊನಾ ಅಟ್ಟಹಾಸದ ನಡುವೆಯೂ ಸಿನಿಮಾ ಹವಾ ಕಮ್ಮಿಯಾಗದಂತೆ ಪ್ರಮೋಷನ್​ ಮಾಡ್ತಿದ್ದಾರೆ ಆರ್​. ಚಂದ್ರು. ಇದೀಗ ಕಬ್ಜ ಚಿತ್ರಕ್ಕೆ ಸ್ಟಾರ್​ ಡೈರೆಕ್ಟರ್​ ಆರ್​ಜಿವಿ ಸಾಥ್​ ಸಿಕ್ತಿದೆ.

ಕೆಜಿಎಫ್​ ಮಾದರಿಯಲ್ಲಿ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ನಿರ್ಮಾಣವಾಗಿರೋ ಅದ್ಧೂರಿ ಸಿನಿಮಾ ಕಬ್ಜ. ಬರೋಬ್ಬರಿ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್​ಗೆ ಪ್ಲಾನ್ ಮಾಡಲಾಗ್ತಿದೆ. 70- 80ರ ದಶಕದ ರೆಟ್ರೋ ಸ್ಟೈಲ್​​ ಡಾನ್​ ಅವತಾರದಲ್ಲಿ ರಿಯಲ್​ ಸ್ಟಾರ್​ ಉಪೇಂದ್ರ ದರ್ಶನ ಕೊಟ್ಟಿದ್ದು, ಕೊರೊನಾ ಹಾವಳಿ ಹಿನ್ನಲೆ ಶೂಟಿಂಗ್​ಗೆ ಬ್ರೇಕ್​ ಬಿದ್ದಿದೆ.. ಆದ್ರೆ ಹಾಲಿವುಡ್​ ಸ್ಟೈಲ್​ನಲ್ಲಿ ಇಡೀ ಚಿತ್ರವನ್ನ ಸೆರೆ ಹಿಡಿಯಲಾಗ್ತಿದೆ.

ಕಬ್ಜ ಅನ್ನೋ ನೆಕ್ಸ್ಟ್​ ಲೆವೆಲ್​ ಸಿನಿಮಾ ಸಾರಥ್ಯ ವಹಿಸಿರೋ ಆರ್​. ಚಂದ್ರು, ನ್ಯಾಷನಲ್​ ಲೆವೆಲ್​ನಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾ ಅಂದ್ಮೇಲೆ ನ್ಯಾಷನಲ್​​ ಲೆವೆಲ್​​​​​​​​ನಲ್ಲಿ ಸಿನಿಮಾನ ರೀಚ್​ ಮಾಡಿಸಬೇಕು. ಅದಕ್ಕಾಗಿ ಆರ್​. ಚಂದ್ರು ಭಿನ್ನ ವಿಭಿನ್ನ ಪ್ಲಾನ್​ ಮಾಡುತ್ತಿದ್ದಾರೆ. ಹೊಸ ಹೊಸ ಪ್ರಮೋಷನ್​ ಕಾನ್ಸೆಪ್ಟ್​ ಟ್ರೈ ಮಾಡುತ್ತಿದ್ದಾರೆ. ಇತ್ತೀಚೆಗೆ ಕಬ್ಜ ಚಿತ್ರದ ಎಕ್ಸ್​​ಕ್ಲೂಸಿವ್ ವೆಬ್​ಸೈಟ್ ಲಾಂಚ್​ ಮಾಡಲಾಗಿತ್ತು. ದೊಡ್ಡ ಕಾರ್ಯಕ್ರಮದಲ್ಲಿ ಕಬ್ಜ ತಂಡದ ಪ್ರಯತ್ನಕ್ಕೆ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಸಾಥ್​ ಕೊಟ್ಟಿದರು.

ಕಬ್ಜ ವೆಬ್​ಸೈಟ್​ ಲಾಂಚ್​ ನಂತರ ಈಗ ಥೀಮ್​ ಪೋಸ್ಟರ್​ ರಿಲೀಸ್​ ಮಾಡೋಕ್ಕೆ ಆರ್​. ಚಂದ್ರು ಮುಂದಾಗಿದ್ದಾರೆ. ಸೆಪ್ಟೆಂಬರ್​ 18ಕ್ಕೆ ರಿಯಲ್​ ಸ್ಟಾರ್​ ಬರ್ತ್​ಡೇ. ಇದೇ ಸಂಭ್ರಮದಲ್ಲಿ ಕಬ್ಜ ಸಿನಿಮಾ ಥೀಮ್​ ಏನು ಅನ್ನೋದನ್ನ ಸಾರಿ ಹೇಳುವ ಪೋಸ್ಟರ್​ ಡಿಸೈನ್​ ಮಾಡಲಾಗಿದೆ. ಈ ಪೋಸ್ಟರ್​​ನ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ರಿವೀಲ್​ ಮಾಡಲಿದ್ದಾರೆ. ಸೆಪ್ಟೆಂಬರ್ 17ರ ಸಂಜೆ 5 ಗಂಟೆಗೆ ಸೋಷಿಯಲ್​ ಮೀಡಿಯಾದಲ್ಲಿ ಆರ್​ಜಿವಿ ಕಬ್ಜ ಥೀಮ್​ ಪೋಸ್ಟರ್ ಶೇರ್​ ಮಾಡಲಿದ್ದಾರೆ.

ಕಬ್ಜ ಚಿತ್ರದ ಏಳು ಭಾಷೆಗಳ ಥೀಮ್ ಪೋಸ್ಟರ್​ನ ಆರ್​ಜಿವಿ ರಿಲೀಸ್​ ಮಾಡಲಿದ್ದಾರೆ. ಆ ಮೂಲಕ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನ ಬೂಸ್ಟ್​ ಮಾಡುವ ಕೆಲಸಕ್ಕೆ ಚಿತ್ರತಂಡ ಕೈ ಹಾಕಿದೆ. ಅದ್ಧೂರಿ ಸೆಟ್​ಗಳನ್ನ ನಿರ್ಮಿಸಿ, ನೂರಾರು ಸಹಕಲಾವಿದರು ಮತ್ತು ತಂತ್ರಜ್ಞರನ್ನ ಬಳಸಿಕೊಂಡು ಚಿತ್ರೀಕರಣ ನಡೆಸಲಾಗ್ತಿತ್ತು. ಕೊರೊನಾ ಹಾವಳಿಯಿಂದ ನಿಂತಿರುವ ಸಿನಿಮಾ ಚಿತ್ರೀಕರಣವನ್ನ ಮತ್ತೆ ಪುನರಾರಂಭಿಸಲು ಆರ್​. ಚಂದ್ರು ಅಂಡ್​ ಟೀಮ್​ ಪ್ಲಾನ್​ ಮಾಡುತ್ತಿದೆ. ರೆಟ್ರೋ ಸ್ಟೈಲ್​ನಲ್ಲಿ ಗ್ಯಾಂಗ್​ಸ್ಟರ್​ ಆಗಿ ಅಬ್ಬರಿಸೋಕ್ಕೆ ಉಪ್ಪಿ ಕೂಡ ಕಾಯ್ತಿದ್ದಾರೆ.

ಮಾಜಿ ಸಚಿವರಾದ ಎಂ. ಟಿ. ಬಿ ನಾಗರಾಜ್,​ ಅರ್ಪಿಸುವ ಶ್ರೀ ಸಿದ್ದೇಶ್ವರ ಎಂಟರ್​ಪ್ರೈಸಸ್​ ಲಾಂಛನದಲ್ಲಿ ಆರ್​. ಚಂದ್ರು ಕಬ್ಜ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸ್ರೂರು ಮ್ಯೂಸಿಕ್, ಎ. ಜೆ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.. ಕನ್ನಡ ಮಾತ್ರವಲ್ಲದೇ ಪರಭಾಷೆಯ ಖ್ಯಾತ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಒಟ್ನಲ್ಲಿ ಕಬ್ಜ ಸಿನಿಮಾ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿ ಬರ್ತಿದೆ. ಮುಂದಿನ ವರ್ಷ ರಿಯಲ್​ ಸ್ಟಾರ್​ ಬಾಕ್ಸಾಫೀಸ್​ ಕಬ್ಜ ಮಾಡಲಿದ್ದಾರೆ.

Next Story

RELATED STORIES