Top

ನೂರು ಕೋಟಿ ಬಜೆಟ್​ನಲ್ಲಿ ರೆಡಿಯಾಗಲಿದೆ 'ಪುಣ್ಯಕೋಟಿ'

ಪುಣ್ಯಕೋಟಿ ಕಥೆ ಹೇಳ್ತಾರೆ ಸಿಂಪಲ್​​​ ಸ್ಟಾರ್ ರಕ್ಷಿತ್​ ಶೆಟ್ಟಿ

ನೂರು ಕೋಟಿ ಬಜೆಟ್​ನಲ್ಲಿ ರೆಡಿಯಾಗಲಿದೆ ಪುಣ್ಯಕೋಟಿ
X

ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ ಪುಣ್ಯಕೋಟಿ ಕಥೆ ಹೇಳ್ತಾರೆ ಅನ್ನೋದು ಹಳೆ ಸುದ್ದಿನೇ ಆದ್ರು ಸಿನಿಮಾ ಬಗ್ಗೆ ಬಿಗ್ ಅಪ್​ಡೇಟ್ ಒಂದು ಸಿಕ್ಕಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾಗಳ ಆಯ್ಕೆಯಲ್ಲಿ ಸಖತ್‌ ಚ್ಯೂಸಿ. ಇತ್ತೀಚಿನ ವರ್ಷಗಳಲ್ಲಿ ರಕ್ಷಿತ್​ ಶೆಟ್ಟಿ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ಅವನೇ ಶ್ರೀಮನ್ನನಾರಯಣನ ದರ್ಶನವಾಗಿ ಒಂದು ವರ್ಷ ಕಳೆದಿದೆ. ಈ ಮಧ್ಯೆ ಚಾರ್ಲಿ ಜೊತೆ ಒಂದು ರೌಂಡ್ ಹೊಡೆದು ಸಪ್ತಸಾಗರದಾಚೆ ಹೋಗಿ ಬಂದಿದ್ದಾರೆ. ಈ ಸಿನಿಮಾದ ಬಳಿಕ ರಕ್ಷಿತ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಪ್ರಶ್ನೆಗೆಇದೀಗ ಉತ್ತರ ಸಿಕ್ಕಿದೆ.

ಸಪ್ತಸಾಗರದಾಚೆ ಎಲ್ಲೋ ಚಿತ್ರೀಕರಣ ಆರಂಭವಾಗೋ ಮೊದಲೇ ರಕ್ಷಿತ್ ಶೆಟ್ಟಿ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಬ್ರೇಕಿಂಗ್ ನ್ಯೂಸ್​ವೊಂದು ಹೊರಬಿದ್ದಿದೆ. ಕರುನಾಡಿನ ಮೂಲದ ಸೌಥ್​ ಸಿನಿ ದುನಿಯಾದ ಬಿಗ್​ ಮೂವಿ ಕಂಪನಿ ರಕ್ಷಿತ್​ಶೆಟ್ಟಿಯ ಆ ಡ್ರೀಮ್ ಪ್ರಾಜೆಕ್ಟ್​​​ಗೆ ಹಣಹೂಡುತ್ತಿದೆ. ಅಂದಹಾಗೆ ರಕ್ಷಿತ್ ಶೆಟ್ಟಿ ಡ್ರೀಮ್ ಪ್ರಾಜೆಕ್ಟ್ ಬೇರೆ ಯಾವುದು ಅಲ್ಲ ಪುಣ್ಯಕೋಟಿ.

ಸಿಂಪಲ್​ ಸ್ಟಾರ್​​ ರಕ್ಷಿತ್ ಶೆಟ್ಟಿ ಕಥೆ ಹೆಣೆದಿರುವ ಪುಣ್ಯಕೋಟಿ ಚಿತ್ರಕ್ಕೆ ಹೊಂಬಾಳೆ ಫಿಲ್ಮಸ್ ಹಣ ಹೂಡುತ್ತಿದೆ ಅನ್ನೋ ಮಾತುಗಳು ಸೈಲೆಂಟ್​ ಆಗಿ ಸದ್ದು ಮಾಡುತ್ತಿದೆ. ಪುಣ್ಯ ಕೋಟಿ ಒಂದು ಬಿಗ್​ಬಜೆಟ್ ಸಿನಿಮಾ. ಬರೋಬ್ಬರಿ ನೂರು ಕೋಟಿ ಬಜೆಟ್​​​ನಲ್ಲಿ ಪುಣ್ಯಕೋಟಿ ಸಿನಿಮಾ ಸಿದ್ಧವಾಗಿ ನಿಲ್ಲಲಿದೆಯಂತೆ. ಸಲಾರ್​, ಬಘೀರ ಸಿನಿಮಾಗಳ ಜೊತೆಗೆ ಪುಣ್ಯಕೋಟಿ ಸಿನಿಮಾ ಹೊಂಬಾಳೆ ಬ್ಯಾನರ್​ನಲ್ಲಿ ಮೂಡಿಬರಲಿರುವ ಸಾಧ್ಯತೆ ಇದೆ. ಫೆಬ್ರವರಿ ತಿಂಗಳಲ್ಲಿ ಪುಣ್ಯಕೋಟಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪುಣ್ಯಕೋಟಿ ಕಥೆ ಎಲ್ಲರಿಗೂ ಗೊತ್ತು. ಆದರೆ, ಈ ಕಥೆಯಲ್ಲಿ ಎರಡು ಕಥೆಗಳಿವೆ. ಪುಣ್ಯಕೋಟಿ ಚಿತ್ರವನ್ನು 300 ವರ್ಷಗಳ ಹಿಂದೆ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ರೂಪಿಸಲಾಗುತ್ತಿದೆ. ಮತ್ತೊಂದು ಹುಲಿ ಮತ್ತು ಗೋವಿನ ಕತೆಯನ್ನು ಹೇಳುವ ಪುಣ್ಯಕೋಟಿಯ ಪದ್ಯವನ್ನೂ ಸಹ ಈ ಕತೆಗೆ ಅಳವಡಿಸಕೊಳ್ಳಲಾಗಿದೆ. ಒಂದು ಯುದ್ಧ ಮತ್ತು ಒಂದು ಪದ್ಯವನ್ನು ಒಳಗೊಂಡ ಸಿನಿಮಾ ಇದಾಗಿದೆ ಅಂತ ಹೇಳಲಾಗುತ್ತಿದೆ.

Next Story

RELATED STORIES