Top

ಜಗ್ಗೇಶ್ ರೋಷದಲ್ಲಿ ಮಾತನಾಡಿದಂತೆ ದರ್ಶನ್ ಮಾತನಾಡಿದ್ರೆ ಹೇಗೆ - ನಿರ್ಮಾಪಕ ಸಂದೇಶ ನಾಗರಾಜ್

ಇದರಲ್ಲಿ ದರ್ಶನದು ಯಾವ ಪಾತ್ರವೂ ಇಲ್ಲ. ಅವರಿಗೆ ನಾನೆ ಹೇಳುತ್ತೇನೆ, ಒಂದು ಹೇಳಿಕೆ ನೀಡಿ ವಿವಾದ ಸ್ಟಾಪ್ ಮಾಡಿ ಅಂತ.

ಜಗ್ಗೇಶ್ ರೋಷದಲ್ಲಿ ಮಾತನಾಡಿದಂತೆ ದರ್ಶನ್ ಮಾತನಾಡಿದ್ರೆ ಹೇಗೆ - ನಿರ್ಮಾಪಕ ಸಂದೇಶ ನಾಗರಾಜ್
X

ಮೈಸೂರು: ಸಿನಿಮಾಗೆ ಯಾವ ಜಾತಿ, ಪಕ್ಷ ಸಮುದಾಯ ಇಲ್ಲ. ಜಗ್ಗೇಶ್, ದರ್ಶನ್ ಅಣ್ಣತಮ್ಮಂದಿರಿದ್ದಂತೆ. ದರ್ಶನ್ ಈವರೆಗೂ ಎಲ್ಲೂ ಮಾತನಾಡಿಲ್ಲ. ಆದರೆ, ಜಗ್ಗೇಶ್ ಸುಮ್ಮನಿರದೆ ನಾನು ರಾಯರ ಭಕ್ತ ಹಾಗೆ ಹೀಗೆ ಅಂತ ಹೇಳುವುದು ತಪ್ಪು ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ದರ್ಶನ್​ ಪರ ಬ್ಯಾಟಿಂಗ್​ ಮಾಡಿದ್ದಾರೆ.

ದರ್ಶನ್​ ಫ್ಯಾನ್ಸ್​ ವಸರ್ಸ್​ ಜಗ್ಗೇಶ್ ನಡುವಿನ ವಾಗ್ವಾದ ಬಗ್ಗೆ ಮಾತನಾಡಿದ ಅವರು, ಅಭಿಮಾನಿಗಳು ಜಗ್ಗೇಶ್​ಗೆ ಮುತ್ತಿಗೆ ಹಾಕುವುದು ದರ್ಶನ್​ಗೆ ಗೊತ್ತಿರಲಿಲ್ಲ. ಗೊತ್ತಿದ್ರೆ ಮಾಡಬೇಡಿ ಅಂತ ಹೇಳುತ್ತಿದರು. ಈ ವಿಚಾರ ಇಲ್ಲಿಗೆ ಕೈಬಿಡಿ ಅಂತ ಇವತ್ತು ಜಗ್ಗೇಶ್​ಗೆ ಮನವಿ ಮಾಡುತ್ತೇನೆ. ಇಬ್ಬರನ್ನೂ ಕೂರಿಸಿ ನಾನು ಪ್ರೆಸ್ಮೀಟ್ ಮಾಡುಸ್ತೀನಿ ಎಂದಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೇಟಿ ಬೇಕು. ಶಿವರಾಜ್​ಕುಮಾರ್ ಸದ್ಯಕ್ಕೆ ಮೇಟಿ ಸ್ಥಾನ ವಹಿಸಿಕೊಂಡಿದ್ದಾರೆ. ಅವರು ಕೂಡ ಈ ರೀತಿ ಆಗಬಾರದಿತ್ತು ಅಂತ ಹೇಳಿದ್ದಾರೆ. ಶೀಘ್ರದಲ್ಲೇ ದರ್ಶನ್, ಜಗ್ಗೇಶ್ ಇಬ್ಬರನ್ನೂ ಕೂರಿಸಿ ಪ್ರೆಸ್ಮೀಟ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸದ್ಯ ಇದರಲ್ಲಿ ದರ್ಶನದು ಯಾವ ಪಾತ್ರವೂ ಇಲ್ಲ. ಅವರಿಗೆ ನಾನೆ ಹೇಳುತ್ತೇನೆ, ಒಂದು ಹೇಳಿಕೆ ನೀಡಿ ವಿವಾದ ಸ್ಟಾಪ್ ಮಾಡಿ ಅಂತ. ಜಗ್ಗೇಶ್ ರೋಷದಲ್ಲಿ ಮಾತನಾಡಿದಂತೆ ದರ್ಶನ್ ಮಾತನಾಡಿದ್ರೆ ಹೇಗೆ(?) ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಾ(?) ಎಂದು ಹೇಳಿದರು.

ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ಮೇಯರ್ ಚುನಾವಣೆಗೆ ಅಹ್ವಾನ ನೀಡರಲಿಲ್ಲ. ಯಾರಿಗೆ ಓಟ್ ನೀಡಬೇಕು ಅಂತಾ ಗೊತ್ತಿರಲಿಲ್ಲ. ಈ ಕಾರಣದಿಂದ ನಾನು ಚುನಾವಣೆಗೆ ಹೋಗಲಿಲ್ಲ. ಕಳೆದ ದಿನಗಳ ಹಿಂದೆ ಬಿಜೆಪಿ ಯವರು ಪರಿಷತ್​ನಲ್ಲಿ ಬೆಂಬಲ ನೀಡಿದರು. ಈಗ ಕಾಂಗ್ರೆಸ್​​ಗೆ ಮತ ನೀಡಿ ಅಂದ್ರೆ ಅರ್ಥ ಏನು(?) ಎಂದು ಅವರು ಪ್ರಶ್ನೆ ಮಾಡಿದರು.

Next Story

RELATED STORIES