Top

ಭಾರತದೊಂದಿಗೆ ವ್ಯಾಕ್ಸಿನ್ ಹಂಚಿಕೊಳ್ಳುವಿರಾ..? ಅಮೇರಿಕಾ ಅಧ್ಯಕ್ಷರಿಗೆ ಪ್ರಿಯಾಂಕ ಚೋಪ್ರಾ ಮನವಿ

ಅಮೇರಿಕದಲ್ಲಿದ್ದು ಭಾರತದ ಸಂಕಷ್ಟಕ್ಕೆ ಮರುಗಿದ ನಟಿ ಹೃದಯ

ಭಾರತದೊಂದಿಗೆ ವ್ಯಾಕ್ಸಿನ್ ಹಂಚಿಕೊಳ್ಳುವಿರಾ..? ಅಮೇರಿಕಾ ಅಧ್ಯಕ್ಷರಿಗೆ ಪ್ರಿಯಾಂಕ ಚೋಪ್ರಾ ಮನವಿ
X

ಎಲ್ಲೆಲ್ಲೂ ಕೊರೊನಾ 2ನೇ ಅಲೆ ಅಬ್ಬರ ಜೋರಾಗಿದೆ. ಜನ ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹದಗೆಟ್ಟಿದೆ. ಇದೆಲ್ಲವನ್ನ ನೋಡಿ ಬಾಲಿವುಡ್​ ಸ್ಟಾರ್ ಪ್ರಿಯಾಂಕ ಚೋಪ್ರಾ ಕಂಗಾಲಾಗಿದ್ದಾರೆ. ನಮ್ಮ ದೇಶಕ್ಕೆ ಸಹಾಯ ಮಾಡಿ ಅಂತ ಅಮೇರಿಕಾಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಜಗತ್ತಿನಾದ್ಯಂತ ಕೊರೊನಾ 2 ನೇ ಅಲೆ ಭಯಾನಕವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ ಇಲ್ಲ. ಆಕ್ಸಿಜನ್ ಇಲ್ಲ ಅಂತ ಪರದಾಡ್ತಿದ್ದಾರೆ. ಒಂದಷ್ಟು ಸೆಲೆಬ್ರೆಟಿಗಳು ತಮ್ಮ ಕೈಲಾದ ಸಹಾಯವನ್ನ ಮಾಡ್ತಿದ್ದಾರೆ. ಆದ್ರೀಗ ಬಾಲಿವುಡ್​ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಮೇರಿಕಾಗೆ ಮನವಿ ಮಾಡಿಕೊಂಡಿದ್ದಾರೆ..

ಸದ್ಯ ಪ್ರಿಯಾಂಕ ಚೋಪ್ರಾ, ಪತಿ ನಿಕ್​ಜೋನಸ್​​ ಜೊತೆ ಅಮೇರಿಕಾದಲ್ಲೇ ನೆಲೆಸಿದ್ದಾರೆ. ಆದ್ರೆ ಕೊರೊನಾದಿಂದ ಭಾರತೀಯರು ನರಳುತ್ತಿರುವುದನ್ನು ನೋಡಿ ಪ್ರಿಯಾಂಕಾ ಅಮೆರಿಕ ಅಧ್ಯಕ್ಷರಿಗೆ ಟ್ವೀಟ್ ಮೂಲಕ ಸಹಾಯ ಕೋರಿದ್ದಾರೆ. ನನ್ನ ಹೃದಯ ಒಡೆದು ಹೋಗಿದೆ. ಭಾರತ ಸಂಕಷ್ಟದಲ್ಲಿದೆ. ಆದ್ರೆ ಅಮೇರಿಕಾ ಹೆಚ್ಚಿನ ಲಸಿಕೆಗೆ ಬೇಡಿಕೆ ಇಟ್ಟಿದೆ. ಈ ಲಸಿಕೆಯನ್ನ ಭಾರತದ ಜೊತೆ ಹಂಚಿಕೊಳ್ಳುತ್ತಿರ ಅಂತ ಟ್ವೀಟ್ ಮಾಡಿದ್ದು, ಅಮೇರಿಕಾದ ಅಧ್ಯಕ್ಷರಾದ ಜೋ ಬೈಡನ್​ಗೆ ಟ್ಯಾಗ್​ ಮಾಡಿದ್ದಾರೆ. ಇನ್ನು ಲಸಿಕೆ ಸಮಾನತೆ ಬಗ್ಗೆ ದನಿಯೆತ್ತಿರು ವ ಪ್ರಿಯಾಂಕ ಟ್ವೀಟ್​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Next Story

RELATED STORIES