Top

ಪುಟ್ಟ ಬಾಲಕನ 'ಬಬ್ರುವಾಹನ' ಡೈಲಾಗ್​ಗೆ ಪವರ್​ಸ್ಟಾರ್ ಫಿದಾ

'ಅಭಿಮಾನಿಗಳೇ ದೇವ್ರು' ಅಣ್ಣಾವ್ರ ಮಾತನ್ನ ಸ್ಮರಿಸಿದ ದೊಡ್ಮನೆ ಹುಡುಗ.

ಪುಟ್ಟ ಬಾಲಕನ ಬಬ್ರುವಾಹನ ಡೈಲಾಗ್​ಗೆ  ಪವರ್​ಸ್ಟಾರ್ ಫಿದಾ
X

ವರನಟ ಡಾ.ರಾಜ್​ಕುಮಾರ್​ ಅಭಿನಯದ ಬಬ್ರುವಾಹನ ಸಿನಿಮಾ ಯಾರಿಗೆ ಗೊತ್ತಿಲ್ಲ. ಆ ಚಿತ್ರದ ಮೋಸ್ಟ್​ ಪಾಪ್ಯುಲರ್​ ಡೈಲಾಗ್​ ಮರೆಯೋಕ್ಕೆ ಸಾಧ್ಯಾನಾ(?) ಸದ್ಯ ಈ ಡೈಲಾಗ್​ನ್ನ 4 ವರ್ಷದ ಪುಟ್ಟ ಬಾಲಕನ ಬಾಯಲ್ಲಿ ಕೇಳಿ ಸಖತ್​ ಥ್ರಿಲ್​ ಆಗಿದ್ದಾರೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್. ಸ್ವತಃ ಈ ವಿಡಿಯೋನ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿರೋ ಅಪ್ಪು, ಆ ಪುಟ್ಟ ಹುಡುಗನಿಗೆ ಧನ್ಯವಾದ ಹೇಳಿದ್ದಾರೆ.

ವರನಟ ಡಾ.ರಾಜ್​ಕುಮಾರ್​​ ಅಭಿನಯದ ಸಿನಿಮಾಗಳೇ ಹಾಗೇ. ಮಕ್ಕಳು ದೊಡ್ಡವರು ಅಂತಲ್ಲದೇ ಮನೆಮಂದಿಯೆಲ್ಲಾ ಕೂತು ನೋಡುವಂತಹ ಸಿನಿಮಾ. ಐತಿಹಾಸಿಕ , ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಹೀಗೆ ಯಾವುದೇ ಸಿನಿಮಾ ಆದ್ರೂ ಸಿನಿಪ್ರಿಯರ ಮನಮುಟ್ಟುವಂತಿರುತ್ತವೆ ಆ ಸಿನಿಮಾಗಳು..ಅಂತದ್ದೇ ಒಂದು ಡಾ.ರಾಜ್​ ಸಿನಿಮಾ ಅಂದ್ರೆ ಬಬ್ರುವಾಹನ.

ಬಬ್ರುವಾಹನ ಸಿನಿಮಾ ಯಾರಿಗೆ ಗೊತ್ತಿಲ್ಲ. ಆ ಚಿತ್ರದ ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಸಂಭಾಷಣೆ ಯಾರ್​ ತಾನೇ ಕೇಳಿಲ್ಲ. ಇಂಥ ಒಂದು ಅದ್ಬುತ, ಅಚ್ಚಕನ್ನಡದ ಸಂಭಾಷಣೆಯನ್ನ 4 ವರ್ಷದ ಪುಟ್ಟ ಬಾಲಕನೊಬ್ಬ ತಪ್ಪಿಲ್ಲದೇ ಹೇಳ್ತಾನೇ ಅಂದರೆ ಅಣ್ಣಾವ್ರ ಸಿನಿಮಾಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಿರಬಹುದು ಅಲ್ವಾ(?) ಆಕಾಶ್ ಭಟ್ ಎಂಬ ಪುಟ್ಟ ಹುಡುಗನೊಬ್ಬ ಬಬ್ರುವಾಹನ ಚಿತ್ರದ ಡೈಲಾಗ್ ಮತ್ತು ಚಿತ್ರದ ಹಾಡಿನ ಬಿಟ್​ಗಳನ್ನ ಹಾಡಿದ್ದಾನೆ. ಈ ವಿಡಿಯೋನಾ ಸ್ವತಃ ಪವರ್​ಸ್ಟಾರ್ ತಮ್ಮ ಇನ್ಸ್​ಟಾಗ್ರಾಂ ಅಕೌಂಟ್​ನಲ್ಲಿ ಶೇರ್ ಮಾಡಿದ್ದು, ಆ ಮಗುವಿಗೆ ಧನ್ಯವಾದ ತಿಳಿಸಿದ್ದಾರೆ. ಅಣ್ಣಾವ್ರ ಹೇಳ್ತಿದ್ದ ಅಭಿಮಾನಿಗಳೇ ದೇವರು ಅಂತಿದ್ದ ಮಾತನ್ನ ಮತ್ತೊಮ್ಮೆ ಸ್ಮರಿಸಿದ್ದಾರೆ.

ಅಣ್ಣಾವ್ರ ಸಿನಿಮಾಗಳೇ ಹಾಗೇ ಆ ಕಾಲದಿಂದ ಈಗಿನ ಜನರೇಶನ್​ವರೆಗೂ ಎಲ್ರೂ ಇಷ್ಟಪಟ್ಟು ನೋಡುವಂತಹ ಸಿನಿಮಾಗಳು. ಅಣ್ಣಾವ್ರ ಒಂದಷ್ಟು ಸಿನಿಮಾಗಳನ್ನ ನೋಡಿ, ತಮ್ಮ ಜೀವನಶೈಲಿಯನ್ನೇ ಬದಲಿಸಿಕೊಂಡವ್ರು ಅದೆಷ್ಟೋ ಮಂದಿ. ಅಂತದ್ದೊಂದು ಶಕ್ತಿ ವರನಟ ಡಾ.ರಾಜ್​ ಸಿನಿಮಾಗಳಿಗಿದೆ..ಅದಕ್ಕೆ ಮತ್ತೊಂದು ಸಾಕ್ಷಿಯೆಂಬಂತಿದೆ ಈ ಪುಟ್ಟ ಬಾಲಕನ ಬಬ್ರುವಾಹನ ಡೈಲಾಗ್​ ವಿಡಿಯೋ.


Next Story

RELATED STORIES