Top

ವಿಶ್ವದ ಎತ್ತರ ಕಟ್ಟಡದಲ್ಲಿ ರಿಲೀಸ್​ ಆಗಲಿದೆ ಫ್ಯಾಂಟಮ್​ ಝಲಕ್

ಬುರ್ಜ್ ಖಲೀಫಾದಲ್ಲಿ ಅನಾವರಣಗೊಳ್ಳಲಿದೆ ಫ್ಯಾಂಟಮ್​ ಪ್ರಪಂಚ

ವಿಶ್ವದ ಎತ್ತರ ಕಟ್ಟಡದಲ್ಲಿ ರಿಲೀಸ್​ ಆಗಲಿದೆ ಫ್ಯಾಂಟಮ್​ ಝಲಕ್
X

ಸ್ಯಾಂಡಲ್​ವುಡ್​ನಲ್ಲಿ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಬಿಲ್ಡ್​​ ಮಾಡ್ತಿರೋ ಸಿನಿಮಾ ಫ್ಯಾಂಟಂ. ಇದೀಗ ಫ್ಯಾಂಟಂ ರಿಲೀಸ್​ಗೂ ಮೊದಲೇ ದಾಖಲೆ ಬರೆಯೋಕ್ಕೆ ರೆಡಿಯಾಗಿದೆ.

ಫ್ಯಾಂಟಮ್​, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್​ಫೆಕ್ಟ್​​ಟೆಡ್​ ಸಿನಿಮಾ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಫಸ್ಟ್​ ಲುಕ್​ನಿಂದ ಹಿಡಿದು ಪಾತ್ರಗಳನ್ನು ಪರಿಚಯ ಮಾಡುವರೆಗೂ ಚಿತ್ರತಂಡ ವಿಭಿನ್ನ ಕಾನ್ಸೆಪ್ಟ್​ ಪ್ಲಾನ್​ ಮಾಡ್ತಾ ಬಂದಿದೆ. ಫ್ಯಾಂಟಮ್ ಪ್ರಪಂಚದ ಈ ಹೊಸ ಕ್ರಿಯಿಟಿವಿಗಳನ್ನು ನೋಡಿ ಫ್ಯಾನ್ಸ್​ ಕೂಡ ಫಿದಾ ಆಗಿದರು. ಇದೀಗ ಫ್ಯಾಂಟಮ್​​​ ಮತ್ತೊಮ್ಮೆ ಸುದ್ದಿಯಲ್ಲಿದೆ. ಫ್ಯಾಂಟಮ್​ ಸಿನಿ ಬಳಗದಿಂದ ಬ್ರೇಕಿಂಗ್ ನ್ಯೂಸ್​ವೊಂದು ಹೊರ ಬಿದ್ದಿದೆ. ಇದನ್ನು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಖುರ್ಜ್​​​​​​​​ ಖಲೀಫಾ ವಿಶ್ವದ ಅತ್ಯಂತ ಎತ್ತರದ ಕಟ್ಟಡ. ದುಬೈನಲ್ಲಿರುವ ಈ ಕಟ್ಟಡದಲ್ಲಿ ಇದೀಗ ಕನ್ನಡದ ಫ್ಯಾಂಟಮ್ ಪ್ರಪಂಚ ಅನಾವರಣಗೊಳ್ಳಲಿದೆ. ವರ್ಲ್ಡ್​ ಆಫ್ ಫ್ಯಾಂಟಮ್ ಝಲಕ್ ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಲಿದೆ. ಅಲ್ಲಿಗೆ ಬುರ್ಜ್​ ಖಲೀಫಾ ಹತ್ತಿದ ಮೊದಲ ಕನ್ನಡ ಚಿತ್ರ ಅನ್ನೋ ಖ್ಯಾತಿಗೆ ಫ್ಯಾಂಟಮ್​ ಪಾತ್ರವಾಗಲಿದೆ. ಈ ಹಿಂದೆ ಬುರ್ಜ್ ಖಲೀಫಾದಲ್ಲಿ ಹಾಲಿವುಡ್‌ನ ಸಿನಿಮಾಗಳಾದ 'ವಂಡರ್‌ ವುಮನ್‌- 1984', 'ಮಾರ್ವೆಲ್‌' ಸೇರಿದಂತೆ ಕೆಲ ಸಿನಿಮಾಗಳ ಟೀಸರ್‌ ಮತ್ತು ಟ್ರೇಲರ್‌ಗಳು ಪ್ರದರ್ಶನವಾಗಿದ್ದವು. ಇವುಗಳ ಸಾಲಿಗೆ ಈಗ ಕನ್ನಡದ ಸಿನಿಮಾ ಸಹ ಸೇರಿಕೊಂಡಿದೆ.ಅಂದ್ಹಾಗೇ ಫ್ಯಾಂಟಂ ಚಿತ್ರದ ಸಾಂಗ್​ ಅಥವಾ ಟೀಸರ್ ಯಾವುದು ರಿಲೀಸ್ ಆಗಲಿದೆ ಅನ್ನೋದೇ ಸರ್​ಪ್ರೈಸ್.

ಫ್ಯಾಂಟಮ್​ ಚಿತ್ರತಂಡ ಚಿತ್ರಿಕರಣದಲ್ಲಿ ಫುಲ್ ಬ್ಯುಸಿಯಾಗಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಕೊರೊನಾ ಲಾಕ್​ಡೌನ್ ಬಳಿಕ ಚಿತ್ರೀಕರಣ ಶುರು ಮಾಡಿದ ಮೊದಲ ಸ್ಟಾರ್ ಚಿತ್ರ ಎಂಬ ಹೆಗ್ಗಳಿಕೆಗೆ ಫ್ಯಾಂಟಮ್​ ಟೀಮ್ ಪಾತ್ರವಾಗಿತ್ತು. ಕರ್ನಾಟಕದಿಂದ ನೂರಾರು ಜನ ಕಾರ್ಮಿಕರನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಚಿತ್ರೀಕರಣ ಮಾಡಿದ ಖ್ಯಾತಿಯನ್ನೂ ಪಡೆದಿದೆ.

ಅನೂಪ್‌ ಭಂಡಾರಿ ಮೊದಲ ಬಾರಿಗೆ ಕಿಚ್ಚ ಸುದೀಪ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಹೈದರಾಬಾದ್‌ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಕಾಡಿನ ದೊಡ್ಡ ಸೆಟ್‌ ಹಾಕಲಾಗಿತ್ತು. ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದಕ್ಕೆ ಇಷ್ಟು ದೊಡ್ಡ ಕಾಡಿನ ಸೆಟ್‌ ಹಾಕಲಾಗಿತ್ತು.

ಬುರ್ಜ್ ಖಲೀಫಾದಲ್ಲಿ ಸಿನಿಮಾದ ಝಲಕ್ ರಿಲೀಸ್‌ ಮಾಡುವ ಬಗ್ಗೆ ಈಗಾಗಲೇ ತೀರ್ಮಾನವಾಗಿದ್ಯಂತೆ ಮತ್ತು ಅನುಮತಿ ಕೂಡ ಸಿಕ್ಕಿದ್ಯಂತೆ. ಇಷ್ಟೆಲ್ಲಾ ಆಗುವಾಗ ಜಗತ್ತಿನಾದ್ಯಂತ ಕೊರೊನಾ ಹೊಸ ಅಟ್ಟಹಾಸ ಶುರು ಮಾಡಿದೆ. ದುಬೈ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಕೊರೊನಾ ಆರ್ಭಟ ಮುಂದುವರಿದ್ರೆ ಪರಿಸ್ಥಿತಿ ಏನಾಗುತ್ತೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಫ್ಯಾಂಟಮ್ ಕನಸಿಗೆ ಕೊರೊನಾ ಚಾಪ್ಟರ್-2 ಅಡ್ಡಗಾಲಿಡುತ್ತಾ ಅನ್ನೋ ಅನುಮಾನ ಕೂಡ ದಟ್ಟವಾಗುತ್ತಿದೆ.

ಕಿಚ್ಚ ಸುದೀಪ್​​​​​​​​​ ಸಿನಿಯಾನಕ್ಕೆ 25 ವರ್ಷ ತುಂಬಿದೆ. ಸುದೀಪ್ ಸಿನಿಯಾನದ ಬೆಳ್ಳಿ ಹಬ್ಬದ ಸಂಭ್ರಮ ಕೂಡ ಬುರ್ಜ್​ ಖಲೀಫಾದಲ್ಲೇ ನಡೆಯುತ್ತಾ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ. ಇದೇ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಫ್ಯಾಂಟಂ ಪ್ರಪಂಚ ಅನಾವರಣಗೊಳ್ಳುತ್ತಾ ಅನ್ನೋ ಚರ್ಚೆಗಳು ಆರಂಭವಾಗಿದೆ.

ವಿಶ್ವದ ಅತ್ಯಂತ ಎತ್ತರದ ಕಟ್ಟಡ ಕನ್ನಡ ಕಂಪು ಪಸರಿಸಲಿದೆ.ಎಲ್ಲಾ ಅಂದುಕೊಂಡಂತೆ ಆದ್ರೆ ಬುರ್ಜ್ ಖಲೀಫಾದಲ್ಲಿ ಫ್ಯಾಂಟಮ್​ ಅನಾವರಣಗೊಳ್ಳಲಿದೆ. ಆ ಕ್ಷಣಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Next Story

RELATED STORIES