Top

ಫ್ಯಾಂಟಂ ಸೆಟ್​ಗೆ ಹೊಸ ಗೆಸ್ಟ್, ರಘುರಾಮ್​ ಜೊತೆ ಕಿಚ್ಚನ ಹೆಜ್ಜೆ

ಕೇರಳದಲ್ಲಿ ಫ್ಯಾಂಟಮ್ ಕೊನೆಯ ಹಂತದ ಚಿತ್ರೀಕರಣ

ಫ್ಯಾಂಟಂ ಸೆಟ್​ಗೆ ಹೊಸ ಗೆಸ್ಟ್, ರಘುರಾಮ್​ ಜೊತೆ ಕಿಚ್ಚನ ಹೆಜ್ಜೆ
X

ಬಾದ್ಶಾ ಕಿಚ್ಚ ಸುದೀಪ್​ ಫ್ಯಾಂಟಮ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕಿಚ್ಚನ ಜೊತೆ ಸ್ಕ್ರೀನ್​ ಶೇರ್​ ಮಾಡೋಕ್ಕೆ ವಿಶೇಷ ಅತಿಥಿ ಅವ್ರೇ ರಘುರಾಮ್ ಚಿತ್ರತಂಡಕ್ಕೆ ಜಾಯ್ನ್ ಆಗಿದ್ದಾರೆ.

'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸದ್ಯ ಫ್ಯಾಂಟಂನಲ್ಲಿ ಬ್ಯುಸಿಯಾಗಿದ್ದಾರೆ. ದಿನದಿಂದ ದಿನಕ್ಕೆ ಫ್ಯಾಂಟಂ ಬಗ್ಗೆ ಕುತೂಹಲ ಹೆಚ್ಚಾಗ್ತಾನೇ ಇದೆ. ಸದ್ಯ ಫ್ಯಾಂಟಂ ಸೆಟ್​ಗೆ ಹೊಸ ಅತಿಥೀಯೊಬ್ಬರ ಎಂಟ್ರಿ ಆಗಿದೆ. ಈ ಹೊಸ ಗೆಸ್ಟ್​ ಜೊತೆಗೆ ಹೆಜ್ಜೆ ಹಾಕೋಕ್ಕೆ ಕಿಚ್ಚ ಸುದೀಪ್​ ಸಖತ್​ ಎಕ್ಸೈಟ್ ಆಗಿದ್ದಾರಂತೆ.

ಈ ಅತಿಥೀ ಮೂಲತಃ ಕೇರಳದವರು. ಇವರು ಹೆಸರು ರಘುರಾಮ್. ಸುಮಾರು 40 ವರ್ಷ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲೂ ಆ್ಯಕ್ಟ್ ಮಾಡಿದ್ದಾರೆ. ಆ ಗೆಸ್ಟ್ ಮತ್ಯಾರು ಅಲ್ಲ. ಕೇರಳದ ಜನಪ್ರಿಯ ಆನೆ. ಫ್ಯಾಂಟಮ್ ಚಿತ್ರದ ಹಾಡಿನಲ್ಲಿ ಈ ಆನೆಯನ್ನು ಬಳಸಿಕೊಳ್ಳಲಾಗಿದೆ. ಕಂಪ್ಲೀಟ್ ಸಾಂಗ್​ನಲ್ಲಿ ಕಿಚ್ಚನ ಜೊತೆ ರಘುರಾಮ್ ಆನೆಯನ್ನ ನೋಡ್ಬಹುದಾಗಿದ್ಯಂತೆ. ಈ ವಿಚಾರವನ್ನ ಸ್ವತಃ ಕೊರಿಯೊಗ್ರಫರ್ ಜಾನಿ ಮಾಸ್ಟರ್ ರಿವೀಲ್ ಮಾಡಿದ್ದಾರೆ.

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಆನೆಯನ್ನ ಪರಿಚಯಿಸಿ, ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಅಂದ್ಹಾಗೇ ಫ್ಯಾಂಟಮ್ ಸಿನಿಮಾದಲ್ಲಿ ಬಳಸಿದ ಈ ರಘುರಾಮ್​ಗೆ ಒಂದು ದಿನಕ್ಕೆ ಬರೋಬ್ಬರಿ 1.2 ಲಕ್ಷ ರೂ. ನೀಡುತ್ತಿದ್ದಾರೆ. ಗ್ರಾಫಿಕ್ಸ್ ಮೊರೆ ಹೋಗದೇ, ಈ ಹಾಡಿಗೆ ಆನೆಯ ಅವಶ್ಯಕತೆ ಹೆಚ್ಚಿದ್ದ ಕಾರಣ ದುಬಾರಿಯಾದರೂ ರಿಯಲ್​ ಆನೆಯನ್ನೆ ಬಳಸಲಾಗ್ತಿದ್ಯಂತೆ.

ಇನ್ನೂ ಈ ಚಿತ್ರದ ಈ ಸ್ಪೆಷಲ್​ ಸಾಂಗ್​ನ್ನ 5 ದಿನಗಳ ಕಾಲ ಕಾಡು, ಮಳೆಯ ನಡುವೆ ಶೂಟ್ ಮಾಡಲಾಗುತ್ತಂತೆ. ಈಗಾಗಲೇ ಡಿಸೆಂಬರ್ 9ರಿಂದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು, ಸದ್ಯದಲ್ಲೇ ಫ್ಯಾಂಟಮ್​ಗೆ ಕುಂಬಳಕಾಯಿ ಹೊಡೆಯಲಿದ್ದಾರೆ.

Next Story

RELATED STORIES