Top

ಸ್ಕ್ರಿಪ್ಟ್​ನಲ್ಲಿ ನೋ ಚೇಂಜ್​, ಅಕ್ಟೋಬರ್​ನಲ್ಲೇ ಕೆಜಿಎಫ್​ 2 ಕಂಪ್ಲೀಟ್

ಸ್ಕ್ರಿಪ್ಟ್​ನಲ್ಲಿ ಯಾವುದೇ ಚೇಂಜ್​​​ ಆಗೋದಿಲ್ಲ. ಪ್ರಶಾಂತ್ ನೀಲ್ ಯಾವ ರೀತಿ ಅಂದುಕೊಂಡಿದ್ರೂ ಅದೇ ರೀತಿ ಕೆಜಿಎಫ್​-2 ತೆರೆಮೇಲೆ ಬರಲಿದೆ ಎಂದಿದೆ ಚಿತ್ರತಂಡ.

ಸ್ಕ್ರಿಪ್ಟ್​ನಲ್ಲಿ ನೋ ಚೇಂಜ್​, ಅಕ್ಟೋಬರ್​ನಲ್ಲೇ ಕೆಜಿಎಫ್​ 2 ಕಂಪ್ಲೀಟ್
X

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡ್ತಿರೋ ಸಿನಿಮಾ ಕೆಜಿಎಫ್ 2. ಆದರೆ, ಕೆಜಿಎಫ್​ 2 ಸಿನಿಮಾ ಬಗ್ಗೆ ಒಂದಷ್ಟು ಊಹಾಪೋಹಗಳು ಹುಟ್ಟಿಕೊಂಡಿದೆ. ಸಂಜಯ್ ದತ್​ ಅನಾರೋಗ್ಯದ ಕಾರಣ ,ಕೆಜಿಎಫ್​ 2 ಶೂಟಿಂಗ್​ ಕಂಪ್ಲೀಟ್ ಆಗೋದು ಲೇಟ್ ಆಗುತ್ತಂತೆ. ಇಲ್ಲವಾದ್ರೆ, ಸ್ಕ್ರಿಪ್ಟ್​​ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಸಿನಿಮಾ ಶೂಟಿಂಗ್​ ಕಂಪ್ಲೀಟ್ ಮಾಡ್ತಾರಂತೆ. ಹಾಗೇ ಹೀಗೆ ಅನ್ನೋ ಅಂತೆ ಕಂತೆ ಸುದ್ದಿಗಳು ಶುರುವಾಗಿವೆ.

ಎಲ್ಲಾ ಸರಿ ಇದ್ದಿದ್ರೆ ಇಷ್ಟು ಹೊತ್ತಿಗೆ ಅಭಿಮಾನಿಗಳಲ್ಲಿ ಕೆಜಿಎಫ್ ಜ್ವರ ನೆತ್ತಿಗೇರ್ತಾ ಇತ್ತು. ಭಾರತೀಯ ಚಿತ್ರರಂಗದ ಬಾಕ್ಸ್​ಆಫೀಸ್ ಕೊಳ್ಳೆ ಹೊಡೆದ ಕೆಜಿಎಫ್​​ನ ಚಾಪ್ಟರ್ 2 ರಿಲೀಸ್​ಗೆ ಕೌಂಟ್​ಡೌನ್​​ ಶುರುವಾಗ್ತಾ ಇತ್ತು. ಕರ್ನಾಟಕಕ್ಕೆ ಕರ್ನಾಟಕವೇ ಕೆಜಿಎಫ್ ಜಾತ್ರೆಯಲ್ಲಿ ಮಿಂದೆಳುತ್ತಿತ್ತು. ಆದರೆ, ಕೊರೊನಾ ಅನ್ನೋ ವಿಷಗಾಳಿ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿದೆ. ಅಕ್ಟೋಬರ್​​​​ನಲ್ಲಿ ತೆರೆಗೆ ಅಪ್ಪಳಿಸಬೇಕಿದ್ದ ಕೆಜಿಎಫ್​-2, ದರ್ಶನವಾಗಬೇಕು ಅಂದ್ರೆ ಇನ್ನು ತುಂಬಾ ದಿನ ಕಾಯಬೇಕು.

ಲಾಕ್​​ಡೌನ್​ ಮುಗಿದ ನಂತರ ಇನ್ನೇನೂ ಶೂಟಿಂಗ್​ಗೆ ಇಳಿಬೇಕು ಅನ್ನೋವಷ್ಟರಲ್ಲಿ ಕೆಜಿಎಫ್​​​​-2 ಚಿತ್ರತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿತ್ತು. ಕೆಜಿಎಫ್​ನ ರಣಕ್ರೂರಿ ಅಧೀರ ಅನಾರೋಗ್ಯಕ್ಕೆ ತುತ್ತಾಗಿ ಬಿಟ್ರು. ಸಂಜಯ್​ ದತ್​ ಕಾನ್ಸರ್ ತುತ್ತಾಗಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದಪ್ಪಳಿಸಿತ್ತು. ಮುಂದೆ ಬಂದಿದೆಲ್ಲ ಅಂತೆ ಕಂತೆ ಸುದ್ದಿ.

ಸಂಜಯ್ ದತ್ ಅನಾರೋಗ್ಯಕ್ಕೆ ತುತ್ತಾಗಿರೋದ್ರಿಂದ ಕೆಜಿಎಫ್​​ ಶೂಟಿಂಗ್​ ಕಂಪ್ಲೀಟ್​ ಆಗೋದು ಲೇಟ್ ಆಗುತ್ತೆ. ಸಂಜಯ್​ ದತ್ ಕ್ಲೈ ಮಾಕ್ಸ್​ ಸೀನ್ ಶೂಟಿಂಗ್​​​​​ ಬಾಕಿ ಇದೆ. ಮುಂದೆ ಸಂಜಯ್ ದತ್​ ಶೂಟಿಂಗ್​ಗೆ ವಾಪಸ್​ ಆಗೋದು ಕಷ್ಟ. ಅದಕ್ಕಾಗಿ ಚಿತ್ರತಂಡ ಸ್ಕ್ರಿಪ್ಟ್​ ಅನ್ನೇ ಚೇಂಜ್ ಮಾಡುತ್ತೆ. ಯಾವುದಕ್ಕೂ ಕಾಂಪ್ರಮೈಸ್ ಮಾಡಿಕೊಳ್ಳದ ಪ್ರಶಾಂತ್ ನೀಲ್​​​ ಈ ಬಾರಿ ಸ್ಕ್ರಿಪ್ಟ್ ಚೇಂಜ್ ಮಾಡ್ತಾರೆ ಅನ್ನೋ ಹಲವು ಉಹಾಪೋಹಗಳು ಹರಿದಾಡಲು ಶುರುವಾಗಿದೆ.

ಕೆಜಿಎಫ್​​​​​ 2ನ ಸ್ಕ್ರಿಪ್ಟ್​ನಲ್ಲಿ ಯಾವುದೇ ಚೇಂಜ್​​​ ಆಗೋದಿಲ್ಲ. ಪ್ರಶಾಂತ್ ನೀಲ್ ಯಾವ ರೀತಿ ಅಂದುಕೊಂಡಿದ್ರೂ ಅದೇ ರೀತಿ ಕೆಜಿಎಫ್​-2 ತೆರೆಮೇಲೆ ಬರಲಿದೆ. ಚಿತ್ರತಂಡ ಖುದ್ದು ಈ ಬಗ್ಗೆ ಟಿವಿ5ಗೆ ಕ್ಲಾರಿಟಿ ಕೊಟ್ಟಿದೆ. ಸಂಜಯ್​​​​​​​​ ದತ್​ ಶೂಟ್ ಪೋರ್ಶನ್​​ ಈಗಾಗಲೇ ಕಂಪ್ಲೀಟ್ ಆಗಿ ಮುಗಿದಿದೆ. ಹೀಗಾಗಿ ಸ್ಕ್ರಿಪ್ಟ್​ ಚೇಂಜ್ ಮಾಡೋ ಪ್ರಮೇಯವೇ ಬರೋದಿಲ್ಲ. ಹಾಗಾಗಿ ಅಂದುಕೊಂಡದ್ದನ್ನೇ ತೆರೆಮೇಲೆ ತರ್ತಿವಿ ಅಂತಿದೆ ಚಿತ್ರತಂಡ.

ಇನ್ನು ಕೆಜಿಎಫ್​-2ನ ಚಿತ್ರಿಕರಣ ಬಹುತೇಕವಾಗಿ ಮುಕ್ತಾಯ​ ಆಗಿದೆ. ಅಕ್ಟೋಬರ್​ನಲ್ಲೇ ಶೂಟಿಂಗ್​ ಕಂಪ್ಲೀಟ್​ ಕೂಡ ಆಗುತ್ತೆ. ನಂತರ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮಾತ್ರ ಉಳಿಯುತ್ತೆ. ದಸರಾ ಟೈಮ್​ನಲ್ಲಿ ಅಭಿಮಾನಿಗಳಿಗೆ ಟೀಸರ್ ಮೂಲಕ ಗಿಫ್ಟ್​ ಕೊಡೋದಕ್ಕೆ ಕೂಡ ಕೆಜಿಎಫ್​ ಟೀಮ್ ರೆಡಿಯಾಗಿದೆ ಎನ್ನಲಾಗ್ತಿದೆ. ಈ ಮೂಲಕ ನಿರಾಸೆಯಲ್ಲಿದ್ದ ಕೆಜಿಎಫ್ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಂತಾಗುತ್ತೆ.

Next Story

RELATED STORIES