Top

ಸ್ಯಾಂಡಲ್​ವುಡ್​ಗೆ 'ಅಶ್ವ' ಚಿತ್ರದ ಮೂಲಕ ಹೊಸ ಪ್ರತಿಭೆ ಎಂಟ್ರಿ

ಕೆಲವು ಹೊಸ ಕಲಾವಿದರು ಎಂಟ್ರಿ ಕೊಡ್ತಾನೇ ಸಖತ್​ ಸೌಂಡ್ ಮಾಡಿಕೊಂಡು ಬರ್ತಾರೆ. ಅಂತದ್ದೇ ಒಂದು ಚಿತ್ರ ಅಶ್ವ.

ಸ್ಯಾಂಡಲ್​ವುಡ್​ಗೆ ಅಶ್ವ ಚಿತ್ರದ ಮೂಲಕ ಹೊಸ ಪ್ರತಿಭೆ ಎಂಟ್ರಿ
X

ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಹೊಸಬರ ಸಿನಿಮಾಗಳು ಸೆಟ್ಟೇರ್ತಾನೆ ಇರುತ್ತೆ. ಹೊಸ ನಟ ನಟಿಯರ ಎಂಟ್ರಿ ಆಗ್ತಾನೇ ಇರುತ್ತೆ. ಆದರೆ, ಕೆಲವು ಸಿನಿಮಾಗಳು, ಕೆಲವು ಹೊಸ ಕಲಾವಿದರು ಎಂಟ್ರಿ ಕೊಡ್ತಾನೇ ಸಖತ್​ ಸೌಂಡ್ ಮಾಡಿಕೊಂಡು ಬರ್ತಾರೆ. ಅಂತದ್ದೇ ಒಂದು ಚಿತ್ರ ಅಶ್ವ.

ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಚಿತ್ರರಂಗವೇ ತತ್ತರಿಸಿ ಹೋಗಿತ್ತು. ಇದರಿಂದ ಹೊಸಬರ ಸಿನಿಮಾಗಳು ಬರೋದು ಕಷ್ಟ. ಹೊಸ ನಿರ್ಮಾಪಕರು ಚಿತ್ರರಂಗದಲ್ಲಿ ಬಂಡವಾಳ ಹಾಕೋದೇ ಡೌಟು ಅಂತೆಲ್ಲಾ ಮಾತುಗಳು ಕೇಳಿ ಬರ್ತಿತ್ತು. ಆದರೆ, ಸಾಕಷ್ಟು ಸಾಲು ಸಾಲು ಹೊಸಬರ ಚಿತ್ರಗಳು ಸೆಟ್ಟೇರ್ತಿದೆ. ಅದರಲ್ಲೊಂದು ಅಶ್ವ.

ಅಶ್ವ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಹೊಸ ಪ್ರತಿಭೆ ವಿವಾನ್​ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಹೀರೋ ಇಂಟ್ರೋಡಕ್ಷನ್​ ಟ್ರೇಲರ್​ ಕೂಡ ರಿಲೀಸ್ ಆಗಿದ್ದು, ಟ್ರೈಲರ್​​ ನೋಡುತ್ತಿದ್ದರೆ ವಿವಾನ್​, ಸ್ಯಾಂಡಲ್​ವುಡ್​ನ ಭರವಸೆಯ ನಟನಾಗೋದು ಗ್ಯಾರೆಂಟಿ ಅನ್ನಿಸುತ್ತೆ.

ಅಂದ್ಹಾಗೇ ಚಿತ್ರದ ಪ್ರಮುಖ​ ಪಾತ್ರಗಳಲ್ಲಿ ನಟ ಪವನ್​ ಕುಮಾರ್, ನಾಗೇಂದ್ರ ಅರಸ್​ ಹೀಗೆ ಸಾಕಷ್ಟು ಕಲಾವಿದರಿದ್ದು, ಇನ್ನಷ್ಟೇ ನಾಯಕಿಯ ಆಯ್ಕೆಯಾಗಬೇಕಿದೆ. ಸುಮಾರು 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ, ಸಹಾಯಕ ನಿರ್ದೇಶಕ, ಸಹ ನಿರ್ದೇಶಕನಾಗಿ ಹಾಗೂ ಡೈಲಾಗ್​ ರೈಟರ್ ಆಗಿ ಕೆಲಸ ಮಾಡಿರುವ ಎ.ಆರ್ ಸಾಯಿರಾಮ್​ ಅಶ್ವ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಇನ್ನು ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಮ್ಯೂಸಿಕ್​ ಮಾಡಿದ್ದಾರೆ.

ಅಂದ್ಹಾಗೇ ಅಶ್ವ ಕ್ಲಾಸ್​ಅಂಡ್ ಮಾಸ್ ಆಡಿಯನ್ಸ್​​ಗೆ ಇಷ್ಟವಾಗುವಂತೆ, ಲವ್​, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಇರುವ ಯೂತ್ ಓರಿಯೆಂಟೆಡ್​ ಸಬ್ಜೆಕ್ಟ್ ಆಗಿದ್ದು, ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇನ್ನು ಕೆ.ಕೆ.ಎಂಟರ್ಟೈನ್ಮೆಂಟ್ಸ್ ಮಾಲೀಕರಾದ ಕೋಲಾರು ಕೇಶವ್​ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

Next Story

RELATED STORIES