Top

ಕಿತ್ತಾಟದ ನಡುವೆಯೂ ವೃತ್ತಿಪರತೆ ಮೆರೆದ ನವರಸ ನಾಯಕ

ತೋತಾಪುರಿ ಸೆಟ್ನಲ್ಲಿ ಮದುಮಗನಾಗಿ ಮಿಂಚಿದ ಜಗ್ಗೇಶ್

ಕಿತ್ತಾಟದ ನಡುವೆಯೂ ವೃತ್ತಿಪರತೆ ಮೆರೆದ ನವರಸ ನಾಯಕ
X

ನವರಸನಾಯಕ ಜಗ್ಗೇಶ್​ ಕಳೆದ ಕೆಲ ದಿನಗಳಿಂದ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಆದ್ರೀಗ ವಿವಾದದ ನಡುವೆಯೂ ತೋತಾಪುರಿ ಶೂಟಿಂಗ್​ ಕಂಪ್ಲೀಟ್ ಮಾಡಿದ್ದಾರೆ.

ನವರಸನಾಯಕ ಜಗ್ಗೇಶ್. ಕಳೆದ ನಾಲ್ಕೈದು ದಿನಗಳಿಂದ ಈ ಹೆಸರು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ನವರಸ ನಾಯಕ ಜಗ್ಗೇಶ್ ದರ್ಶನ್ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸ್ಯಾಂಡಲ್​ವುಡ್​ನಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಈ ವಿವಾದ ಬೆಂಕಿಯಾಡುತ್ತಿರುವಾಗಲೇ ಜಗ್ಗೇಶ್ ತಮ್ಮ ವೃತ್ತಿ ಪರತೆ ಮೆರೆದಿದ್ದಾರೆ. ಸೋಮವಾರ ಮೈಸೂರಿನಲ್ಲಿ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದರು. ಆನಂತರ ಅದು ಬೇರೊಂದು ಸ್ವರೂಪ ಪಡೆದುಕೊಂಡಿತ್ತು. ಮಂಗಳವಾರ ಬೆಳ್ಳಂಬೆಳಗ್ಗೆ ನಟ ಜಗ್ಗೇಶ್ ಕೂಡ ಟ್ವಿಟರ್​ನಲ್ಲಿ ಲೈವ್ ಬಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಮಧ್ಯೆ ಕೂಡ ಜಗ್ಗೇಶ್ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

ಹೊರಗೆ ಎಷ್ಟೇ ವಾದ-ವಿವಾದ ನಡೆಯುತ್ತಿದ್ದರೂ, ಮೈಸೂರಿನ ಕಲ್ಯಾಣಮಂಟಪವೊಂದರಲ್ಲಿ ನಡೆಯುತ್ತಿದ್ದ 'ತೋತಾಪುರಿ' ಚಿತ್ರದ ಮದುವೆ ಸೀನ್​ನಲ್ಲಿ ಮದುಮಗನಾಗಿ ಕಂಗೊಳಿಸುತ್ತಿದ್ದಾರೆ. ತೋತಾಪುರಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಸಹಕಾರಿಯಾಗಿದ್ದಾರೆ. ಮೈಸೂರಿನಲ್ಲಿ ತೋತಪುರಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ರು. ಇದೆಲ್ಲದ್ರ ನಡುವೆ ಕೂಡ ಜಗ್ಗೇಶ್ ಚಿತ್ರೀಕರಣ ಭಾಗಿಯಾಗಿದ್ದಾರೆ. ಮದುವೆ ಶೂಟಿಂಗ್ ದೃಶ್ಯದಲ್ಲಿ ಮದುಮಗನಾಗಿ ಮಿಂಚಿದ್ದಾರೆ.

ಮೈಸೂರಿನಲ್ಲಿ ನಡೆದ ತೋತಪುರಿ ಚಿತ್ರದ ಕೊನೆಯ ದಿನದ ಶೂಟಿಂಗ್​ನಲ್ಲಿ ಮದುವೆಯ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ಜಗ್ಗೇಶ್​ಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲ ಸುಮನ್ ರಂಗನಾಥ್, ಹಿರಿಯ ನಟ ದತ್ತಣ್ಣ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದರು. ಜಗ್ಗೇಶ್ ಅವರು ಶೂಟಿಂಗ್ ಭಾಗಿಯಾಗಿದ್ದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಗ್ಗೇಶ್ ಡೆಡಿಕೇಶನ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತೋತಪುರಿ ಸಿನಿಮಾಗೆ ನೀರ್ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದು. ಸದ್ಯ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈ ಮಧ್ಯೆ ಜಗ್ಗೇಶ್ ವಿವಾದಕ್ಕೆ ಸಿಲುಕಿ ಕೊಂಡಿದ್ರೂ ಚಿತ್ರೀಕರಣಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡಿರೋದು ಮೆಚ್ಚುಗೆಗೆ ಪಾತ್ರವಾಗಿದೆ.

Next Story

RELATED STORIES