Top

ಅವತಾರ​ ಪುರುಷನ ದರ್ಶನಕ್ಕೆ ಮುಹೂರ್ತ ಫಿಕ್ಸ್

ಏಕಕಾಲದಲ್ಲಿ 2 ಭಾಗಗಳ ಶೂಟಿಂಗ್​ ಕಂಪ್ಲೀಟ್

ಅವತಾರ​ ಪುರುಷನ ದರ್ಶನಕ್ಕೆ  ಮುಹೂರ್ತ ಫಿಕ್ಸ್
X

ಸ್ಯಾಂಡಲ್​ವುಡ್​ ಅಧ್ಯಕ್ಷ ಶರಣ್​ ಅಭಿನಯದ ಸಿನಿಮಾ ಅವತಾರ​ ಪುರುಷ ಟೀಸರ್ನಿಂದ್ಲೇ ಸಿನಿಮಾ ಮೇಲೆ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿದೆ. ಸಿನಿಮಾ ರಿಲೀಸ್​ ಯಾವಾಗ ಅಂತ ಕಾಯ್ತಿದ್ದ ಸಿನಿಪ್ರಿಯರಿಗೆ ಇದೀಗ ಸರ್​ಪ್ರೈಸ್ ಸುದ್ದಿ ಕೊಟ್ಟಿದೆ ಚಿತ್ರತಂಡ.

ಅವತಾರ ಪುರುಷ. ಟೈಟಲ್​ ಪೋಸ್ಟರ್ ಮತ್ತು ಟ್ಯಾಗ್ಲೈನ್​ನಿಂದ ಸಖತ್​ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಸಿನಿಮಾ. ಇನ್ನು ಚಿತ್ರದ ನಾಯಕ ಶರಣ್ ಅಂದ್ಮೇಲೆ, ಚಿತ್ರದ ಟೀಸರ್ ನೋಡಿದ್ಮೇಲೆ ಇದೊಂದು ಔಟ್ ಆಂಡ್ ಔಟ್ ಕಾಮಿಡಿ ಸಿನಿಮಾ ಅನ್ನೋದು ಕನ್ಫರ್ಮ್​. ವೆಬ್​​ಸೀರಿಸ್​ಗಾಗಿ ಮಾಡಿದ ಕಥೆಯನ್ನು ನಂತರ ಸಿನಿಮಾ ಮಾಡಿದ ಚಿತ್ರತಂಡ, ಈ ಚಿತ್ರದಲ್ಲಿರೋ ಎಂಟರ್​ಟೈನ್ಮೆಂಟ್ ಮಿಸ್ ಆಗಬಾರ್ದು ಅಂತ 2 ಭಾಗಗಳಲ್ಲಿ ಸಿನಿಮಾ ರಿಲೀಸ್​ ಮಾಡೋ ಪ್ಲಾನ್​ ಮಾಡಿದ್ದು ಗೊತ್ತೇಯಿದೆ.

ಆದರೆ, ಇದೀಗ ಚಿತ್ರತಂಡದಿಂದ ಸರ್​ಪ್ರೈಸ್ ಸುದ್ದಿಯೊಂದು ಹೊರಬಿದ್ದಿದೆ. ಅವತಾರ ಪುರುಷ ಭಾಗ 1 ರಿಲೀಸ್​ಗೂ ಮುನ್ನವೇ ಭಾಗ ಎರಡರ ಶೂಟಿಂಗ್​ ಕಂಪ್ಲೀಟ್ ಆಗಿದೆ. ಅವತಾರ ಪುರುಷ ಎರಡು ಭಾಗಗಳ ಶೂಟಿಂಗ್​ನ್ನ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕೊರೊನಾ ಮತ್ತು ಲಾಕ್​ಡೌನ್​ನಿಂದ ಸಮಸ್ಯೆಯಿಂದ ಬೇಸತ್ತಿದ್ದ ಚಿತ್ರತಂಡ ಹೆಚ್ಚು ಟೈಮ್ ವೇಸ್ಟ್ ಮಾಡದೆ, ಸಿಕ್ಕ ಸಮಯವನ್ನ ಸದುಪಯೋಗ ಪಡಿಸಿಕೊಂಡಿದೆ. ಈಗಾಗಲೇ ಚಿತ್ರೀಕರಣದ ಕೊನೆಯ ಹಂತ ತಲುಪಿದೆ ಚಿತ್ರತಂಡ.

ಅಂದ್ಹಾಗೇ ಅವತಾರ ಪುರುಷ ಭಾಗ ಒಂದಕ್ಕೆ ಅಷ್ಟದಿಗ್ಬಂದನ ಮಂಡಲಕ ಅಂತ ಟ್ಯಾಗ್​ಲೈನ್​ ಇದ್ರೆ, 2 ನೆ ಭಾಗಕ್ಕೆ ತ್ರಿಶಂಕು ಅಂತ ಟ್ಯಾಗ್​ಲೈನ್​ ಫಿಕ್ಸ್​ ಆಗಿದೆ. 2 ಭಾಗಗಳು 2 ಗಂಟೆ 20 ನಿಮಿಷದ ಸಿನಿಮಾ ಆಗಿರಲಿದೆ. ಅಂದ್ಹಾಗೇ ಈ ತಿಂಗಳ ಕೊನೆಯಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಜನವರಿ 14 ಕ್ಕೆ ಚಿತ್ರವನ್ನ ತೆರೆಗೆ ತರೋ ಯೋಚನೆಯಲ್ಲಿದೆ ಚಿತ್ರತಂಡ.

ಇನ್ನು ಅವತಾರ ಪುರುಷ 2 ಭಾಗಗಳು ತಿಂಗಳುಗಟ್ಟಲೇ, ಅಥವಾ ವರ್ಷಗಟ್ಟಲೇ ಗ್ಯಾಪ್​ ಬಿಟ್ಟು ತೆರೆಗೆ ಬರದೇ ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗಲಿದೆ ಅನ್ನೋದು ವಿಶೇಷ. ಅಂದ್ಹಾಗೇ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವೇ ಇದ್ದು, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ,ಸಾಯಿಕುಮಾರ್, ಸುಧಾರಾಣಿಮ ತರಾ, ಭವ್ಯ ಮುಂತಾದವ್ರಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಸಂಕ್ರಾಂತಿ ಹಬ್ಬಕ್ಕೆ ಅವತಾರ ಪುರುಷ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದ್ದಾನೆ.

Next Story

RELATED STORIES