Top

ಕಬ್ಜ ಅಖಾಡದಲ್ಲಿ ಕಿಚ್ಚನ ಎಂಟ್ರಿಗೆ ಮುಹೂರ್ತ ಫಿಕ್ಸ್

ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್​ ಮಾಡುತ್ತಿದ್ದು, ಆರ್​ ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಕಬ್ಜ ಅಖಾಡದಲ್ಲಿ ಕಿಚ್ಚನ ಎಂಟ್ರಿಗೆ ಮುಹೂರ್ತ ಫಿಕ್ಸ್
X

ಪ್ಯಾನ್​ ಇಂಡಿಯನ್​ ಕಬ್ಜ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸ್ತಿರೋ ಸಿನಿಮಾ. ಕಬ್ಜ ಚಿತ್ರದಲ್ಲಿ ರಿಯಲ್​ ಸ್ಟಾರ್​ ಸ್ಯಾಂಡಲ್​ವುಡ್​ ಬಾದ್ಶಾ ಸ್ಕ್ರೀನ್​ ಶೇರ್ ಮಾಡ್ತಿರೋದು ಗೊತ್ತೇಯಿದೆ. ಆದರೆ, ಕಿಚ್ಚ, ಕಬ್ಜ ಅಖಾಡಕ್ಕೆ ಇಳಿಯೋದು ಯಾವಾಗ ಸಿನಿಪ್ರಿಯರು ಕಾಯ್ತಾ ಇದರು. ಅದಕ್ಕೀಗ ಟೈಮ್ ಕೂಡಿ ಬಂದಿದೆ.

ಮುಕುಂದ ಮುರಾರಿ ಅಂದಾಕ್ಷಣ ನೆನಪಾಗೋದೇ ರಿಯಲ್​ ಸ್ಟಾರ್ ಉಪ್ಪಿ ಮತ್ತು ಕಿಚ್ಚ ಸುದೀಪ್​. ಮುಕುಂದ ಮುರಾರಿ ಚಿತ್ರದಲ್ಲಿ ರಿಯಲ್​ ಸ್ಟಾರ್ ಉಪೇಂದ್ರ ಮುಕುಂದನಾದ್ರೆ, ಮುರಾರಿ ಪಾತ್ರದಲ್ಲಿ ಮಿಂಚಿದ್ದು ಕಿಚ್ಚ ಸುದೀಪ್. ಇದೀಗ ಮತ್ತೊಮ್ಮೆ ಈ ಜೋಡಿ ಕಬ್ಜ ಚಿತ್ರದಲ್ಲಿ ಒಂದಾಗುತ್ತಿದೆ.

ಈಗಾಗಲೇ ಸುದೀಪ್ ಪಾತ್ರದ ಟೀಸರ್ ಬಿಡುಗಡೆ ಆಗಿದ್ದು, ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ಭಾರ್ಗವ್ ಬಕ್ಷಿ. 70-80ರ ದಶಕದ ಅಂಡರ್​ವಲ್ಡ್ ಡಾನ್ ಆಗಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಕಿಚ್ಚನ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಅಂದ್ಹಾಗೇ ಕಬ್ಜ ಚಿತ್ರ 2 ಭಾಗಗಳಲ್ಲಿ ತಯಾರಾಗ್ತಿದ್ದು, ಮೊದಲ ಭಾಗದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಅದ್ದೂರಿ ಸೆಟ್​​ಗಳಲ್ಲಿ ಸತತವಾಗಿ ಆ್ಯಕ್ಷನ್​ ಸೀಕ್ವೆನ್ಸ್​ಗಳ ಚಿತ್ರೀಕರಣ ಶುರುವಾಗಿದೆ. ರೀಸೆಂಟಾಗಿ ಹೊಸ ಶೆಡ್ಯೂಲ್​ ಶೂಟಿಂಗ್​ ಶುರುಮಾಡಿರೋ ಕಬ್ಜ, ಕಿಚ್ಚನ ಎಂಟ್ರಿಗೆ ಅಖಾಡ ರೆಡಿಮಾಡಿದೆ. ಮುಂದಿನ ತಿಂಗಳು ಸುದೀಪ್, ಕಬ್ಜ ಶೂಟಿಂಗ್​ನಲ್ಲಿ ಭಾಗವಹಿಸಲಿದ್ದಾರೆ.

ಅಂದ್ಹಾಗೇ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್​ ಮಾಡುತ್ತಿದ್ದು, ಆರ್​ ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್​ಗಳು ಸಖತ್​ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿದೆ. ಚಿತ್ರದಲ್ಲಿ ಕಿಚ್ಚನ ಎಂಟ್ರಿ ಕೂಡ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕಬ್ಜ ಚಿತ್ರ ಎರಡು ಭಾಗಗಳಲ್ಲಿ ತಯಾರಾಗ್ತಿದ್ದು, ಮೊದಲ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Next Story

RELATED STORIES