Top

ಯುವ ರಣಧೀರ ಕಂಠೀರವನ ಕಂಡು ಮೆಗಾಸ್ಟಾರ್ ಸ್ಟಾರ್ ಫಿದಾ

ಇದೀಗ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಯುವ ಟೀಸರ್ ನೋಡಿ ಶಹಬ್ಬಾಸ್ ಅಂದಿದ್ದಾರೆ

ಯುವ ರಣಧೀರ ಕಂಠೀರವನ ಕಂಡು ಮೆಗಾಸ್ಟಾರ್ ಸ್ಟಾರ್ ಫಿದಾ
X

ಸ್ಯಾಂಡಲ್​ವುಡ್​ ಯುವರಾಜ್​ಕುಮಾರ್ ಅಭಿನಯದ ಯುವ ರಣಧೀರ ಕಂಠೀರವ ಲಾಂಚ್ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ. ಯುವ ಎಂಟ್ರಿಗೆ ಇಡೀ ಸ್ಯಾಂಡಲ್​ವುಡ್ ಫಿದಾ ಆಗಿದ್ದು, ಇದೀಗ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ, ಯುವ ಎಂಟ್ರಿ ಟೀಸರ್ ನೋಡಿ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೊಡ್ಮನೆ ಮನೆ ಕುಡಿ ಯುವರಾಜ್​ಕುಮಾರ್ ಸ್ಯಾಂಡಲ್​ವುಡ್​ಗೆ ಎಂಟ್ರಿಯಾಗ್ತಾರೆ ಅಂದಾಗ್ಲೇ ಭಾರಿ ನಿರೀಕ್ಷೆ ಇತ್ತು. ಅದರಂತೆ ನವೆಂಬರ್ 1 ಕನ್ನಡ ರಾಜ್ಯೊತ್ಸವಕ್ಕೆ ಯುವ ರಣಧೀರ ಕಂಠೀರವ ಲಾಂಚ್​ ವಿಡಿಯೋ ರಿಲೀಸ್ ಆಯ್ತು. ಲಾಂಚಿಂಗ್ ಟೀಸರ್ನಲ್ಲಿ ಯುವ ಲುಕ್, ಡೈಲಾಗ್ ಡೆಲಿವರಿ, ಸಾಹಸ ನೋಡಿದ ಇಡೀ ಸ್ಯಾಂಡಲ್​​ವುಡ್​ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಯುವ ರಣಧೀರ ಕಂಠೀರವ ಟೀಸರ್ ನೋಡಿ ಕನ್ನಡದ ಖ್ಯಾತ ನಿರ್ದೇಶಕರಾದ ಉಪೇಂದ್ರ, ಪ್ರಶಾಂತ್​ ನೀಲ್ , ಅಷ್ಟೇ ಅಲ್ಲ ಟಾಲಿವುಡ್ ಹಿಟ್ ಡೈರೆಕ್ಟರ್ಸ್​ ಕೂಡ ಮೆಚ್ಚಿ ಕೊಂಡಾಡಿದರು.

ಇದೀಗ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಯುವ ಟೀಸರ್ ನೋಡಿ ಶಹಬ್ಬಾಸ್ ಅಂದಿದ್ದಾರೆ. ''ಯುವ ರಾಜ್ ಕುಮಾರ್ ತಯಾರಿ ನಿಜಕ್ಕೂ ಅದ್ಭುತವಾಗಿದೆ. ರಾಜ್ ಕುಮಾರ್ ಅವರ ಮೊಮ್ಮಗ ಎಂಬ ದೊಡ್ಡ ಜವಾಬ್ದಾರಿ ಅವರ ಮೇಲಿದೆ ಅದಕ್ಕೆ ತಕ್ಕಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರ ಡೈಲಾಗ್ ಡೆಲವರಿ, ಸಾಹಸ, ಆಕ್ಟಿಂಗ್ ನೋಡಿದ್ರೆ ಇಂಡಸ್ಟ್ರಿಯಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸುತ್ತಾರೆ ಅನ್ನಿಸುತ್ತೆ' ಅಂತ ಮೆಗಾಸ್ಟಾರ್ ಹೇಳಿದ್ದಾರೆ.

ಅಂದ್ಹಾಗೇ ಅಣ್ಣಾವರ ಕಾಲದಿಂದಲೂ, ಡಾ. ರಾಜ್​ ಕುಟುಂಬಕ್ಕೂ ಮತ್ತು ಚಿರಂಜೀವಿ ಕುಟುಂಬಕ್ಕೂ ಉತ್ತಮ ಬಾಂಧ್ಯವಿದೆ. ಇಬ್ಬರ ಮನೆಯಲ್ಲಿ ಯಾವುದೇ ಶುಭಕಾರ್ಯವಾಗಲಿ, ಸಿನಿಮಾ ಕಾರ್ಯಕ್ರಮವಾಗಲಿ ಪರಸ್ಪರ ಭಾಗವಹಿಸೋದು ವಾಡಿಕೆ. ಡಾ.ರಾಜ್​ ಮತ್ತು ಚಿರಂಜೀವಿಯವರ ನಡುವೆ ಉತ್ತಮ ಒಡನಾಟವಿತ್ತು. ಅದರಂತೆ ಇಂದು ಶೀವಣ್ಣ, ಪುನೀತ್​ ಕೂಡ ಚಿರಂಜೀವಿ ಮತ್ತು ರಾಮ್​ ಚರಣ್​ ಜೊತೆ ಅಷ್ಟೇ ಉತ್ತಮ ಸಂಬಂಧ ಹೊಂದಿದ್ದಾರೆ. ಅದೇ ರೀತಿ ಯುವರಾಜ್​ಕುಮಾರ್ ಮದುವೆಗೂ ನಟ ಚಿರಂಜೀವಿ ಬಂದಿದ್ದು ಗೊತ್ತೇಯಿದೆ.

ಸದ್ಯ ಯುವರಾಜ್​ಕುಮಾರ್ ಕೇವಲ ಸ್ಯಾಂಡಲ್​ವುಡ್​​ ಮಾತ್ರವಲ್ದೆ ಟಾಲಿವುಡ್​​ ಸಿನಿಮಾಮಂದಿಯ ಗಮನ ಸೆಳೆದಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್​ ಶುರುವಾಗಲಿದೆ.

Next Story

RELATED STORIES