Top

ಫ್ಯಾನ್ಸ್​ಗೆ ಪ್ರಾಣಾಯಾಮ ಪಾಠ ಮಾಡಿದ ನಟಿ ಮಲೈಕಾ ಅರೋರ

ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡ ಬಾಲಿವುಡ್​ ಸ್ಟಾರ್​

ಫ್ಯಾನ್ಸ್​ಗೆ ಪ್ರಾಣಾಯಾಮ ಪಾಠ ಮಾಡಿದ ನಟಿ ಮಲೈಕಾ ಅರೋರ
X

ಬಾಲಿವುಡ್​ ನಟಿ ಮಲೈಕಾ ಅರೋರ ಫಿಟ್​ನೆಸ್​ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್. ಯೋಗ, ಪ್ರಾಣಾಯಾಮ, ಸಿಪಂಲ್ ಸರಳ ವ್ಯಾಯಾಮ ಹೀಗೆ ಅನೇಕ ಉಪಯುಕ್ತವಾದ ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಕೊರೊನಾ ಸಮಯವಾಗಿದ್ದು, ಅನೇಕ ಸೆಲಬ್ರೆಟಿಗಳು ಕೊರೊನಾದಿಂದ ಬಚಾವ್​ ಆಗುವ ಹಾಗೂ ದೇಹದ ಆರೋಗ್ಯ ಕಾಪಾಡುವ ಅನೇಕ ಟಿಪ್ಸ್​​ ನೀಡುತ್ತಿರುತ್ತಾರೆ. ಹೆಚ್ಚಿನವರು ಈ ವಿಡಿಯೋಗಳನ್ನು ನೋಡಿ ಸುಮ್ಮನಾದರೆ ಕೆಲ ಅಭಿಮಾನಿಗಳು ತಮ್ಮ ಇಷ್ಟದ ಸ್ಟಾರ್​ ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಾರೆ.

ಅದೇ ರೀತಿ ಮಲೈಕಾ ಅರೋರ ಕೂಡ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಯಿಂದ ಬಚಾವ್​ ಆಗಲು ಪ್ರಾಣಾಯಾಮದ ಮಾರ್ಗ ಅನುಸರಿಸುವಂತೆ ತಿಳಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಪ್ರಾಣಾಯಾಮವನ್ನು ಸರಿಯಾದ ರೀತಿ ಹೇಗೆ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.

Next Story

RELATED STORIES