Top

ಹೊಸ ವರ್ಷಕ್ಕೆ ಮದಗಜ ತೆಲುಗು ಟೀಸರ್‌ ಲಾಂಚ್‌

ತೆಲುಗಿನಲ್ಲೂ ಶುರುವಾಗಲಿದೆ ಮದಗಜ ರಣಘರ್ಜನೆ

ಹೊಸ ವರ್ಷಕ್ಕೆ ಮದಗಜ ತೆಲುಗು ಟೀಸರ್‌ ಲಾಂಚ್‌
X

ಸ್ಯಾಂಡಲ್​ವುಡ್​ನಲ್ಲಿ ಸಖತ್​ ರೋರ್​ ಮಾಡುತ್ತಿದ್ದ ಮದಗಜ ಈಗ ತೆಲುಗಿನಲ್ಲೂ ಘರ್ಜಿಸೋಕ್ಕೆ ರೆಡಿಯಾಗುತ್ತಿದೆ. ಕನ್ನಡದಲ್ಲಿ ಮಿಲಿಯನ್​ಗಟ್ಟಲೆ ವೀವ್ಸ್ ಪಡೆದ ಮದಗಜ ಟೀಸರ್​ ಸದ್ಯ, ಟಿಟೌನ್​ನಲ್ಲಿ ರಿಲೀಸ್​ ಆಗುತ್ತಿದೆ.

ಉಗ್ರಂ ಶ್ರೀಮುರಳಿ. ಸ್ಯಾಂಡಲ್‌ವುಡ್‌ನ ಬೆಂಕಿಯ ಕಿಡಿ. 'ಭರಾಟೆ'ಯ ನಂತರ ಮತ್ತೊಂದು ಅದ್ಧೂರಿ ಚಿತ್ರ 'ಮದಗಜ'ನ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳ್ತಿರೋ, ಈ ಚಿತ್ರದ ಕೂತೂಹಲಕಾರಿ ಫಸ್ಟ್ ಲುಕ್‌ ಟೀಸರ್‌ವೊಂದು ಸ್ಯಾಂಡಲ್‌ವುಡ್‌ನಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಿಲಿಯನ್​ ಗಟ್ಟಲೇ ವಿವ್ಸ್‌ ಪಡೆದುಕೊಂಡಿದೆ. ಈ ನಡುವೆ ಚಿತ್ರತಂಡ ಮತ್ತೊಂದು ಸರ್‌ಪ್ರೈಸ್‌ ನೀಡಿದೆ.

ಫಸ್ಟ್ ಲುಕ್‌ ಟೀಸರ್‌ ಸ್ಯಾಂಡಲ್​​ವುಡ್​ನಲ್ಲಿ ಸೌಂಡ್ ಮಾಡುತ್ತಿರುವಾಗಲೇ​, ಶ್ರೀಮುರುಳಿ ಸೈಲೆಂಟ್‌ ಆಗಿ ಡಬ್ಬಿಂಗ್​​ ಮುಗಿಸಿದ್ದಾರೆ. ಡಬ್ಬಿಂಗ್‌ ಸ್ಟುಡಿಯೋದಲ್ಲಿ ನಿರ್ದೇಶಕ ಮಹೇಶ್ ಕುಮಾರ್​ ಜೊತೆಗೆ ಪೋಸ್‌ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ನೋಡಿ ಚಂದವನದಲ್ಲಿ ಹಲವು ಚರ್ಚೆಗಳು ನಡೆದಿದ್ವು. ಏನಿದು ಈಗಷ್ಟೆ ಫಸ್ಟ್ ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಅಷ್ಟರಲ್ಲೇ ಡಬ್ಬಿಂಗ್‌ ಮಾಡುತ್ತಿದ್ದಾರಾ ಅಂತ. ಆದರೆ, ಈ ಪ್ರಶ್ನೆಗೆ ಉತ್ತರ ನೀಡಿದ ಚಿತ್ರತಂಡ ಇನ್ನೊಂದು ಟೀಸರ್‌ ರಿಲೀಸ್‌ಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ರಿವೀಲ್‌ ಮಾಡ್ತೀವಿ ಅಂತ ಹೇಳಿಕೊಂಡಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದಿದೆ.


ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಮದಗಜ' ಟೀಸರ್ ತೆಲುಗಿನಲ್ಲೂ ರಿಲೀಸ್‌ ಆಗಲಿದೆ. ಟೀಸರ್ ಲಾಂಚ್ ದಿನಾಂಕವನ್ನು ಮದಗಜ ಚಿತ್ರತಂಡ ಕ್ರಿಸ್ ಮಸ್ ದಿನ ಅನೌನ್ಸ್ ಮಾಡಿದೆ. ಮದಗಜ ಕನ್ನಡ ಫಸ್ಟ್ ಲುಕ್ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ವೀಕ್ಷಣೆ ಪಡೆದಿದೆ. ಈ ರೆಸ್ಪಾನ್ಸ್‌ ನೋಡಿ ಕೇವಲ ಪ್ರೇಕ್ಷಕರು ಮಾತ್ರ ಅಲ್ಲ. ಚಿತ್ರತಂಡ ಕೂಡ ಥ್ರಿಲ್‌ ಆಗಿದೆ. ಹೀಗಾಗಿ ತೆಲುಗಿನಲ್ಲೂ ಸಿನಿಮಾ ಬಿಡುಗಡೆಗೆ ಪ್ಲಾನ್‌ ಮಾಡಿಕೊಂಡಿದೆ. ಹೊಸ ವರ್ಷಕ್ಕೆ ಅಂದರೆ ಜನವರಿ 1 ರಂದು ಟೀಸರ್ ಲಾಂಚ್ ಮಾಡಲು ಸಿನಿಮಾ ಟೀಮ್‌ ಡಿಸೈಡ್‌ ಮಾಡಿದೆ. ಜನವರಿ 1 ರಂದು 10.10ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್‌ನಲ್ಲಿ ತೆಲುಗು ಟೀಸರ್ ಬಿಡುಗಡೆಯಾಗಲಿದೆ.

ಹೊಸ ವರ್ಷದ ಪ್ರಯುಕ್ತ ಮದಗಜ ಸಿನಿಮಾದ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ ಎಂದು ಸ್ವತಃ ಶ್ರೀಮುರಳಿ ಟ್ವಿಟ್​ ಮಾಡಿ ಅನೌನ್ಸ್‌ ಮಾಡಿದ್ದಾರೆ. ಅಲ್ಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ತೆಲುಗಿನಲ್ಲಿ ಅಬ್ಬರಿಸಲಿದೆ. ಕನ್ನಡದಲ್ಲಿ ಸದ್ದು ಮಾಡ್ತಿದ್ದ ಮದಗಜ ಈಗ ಗಡಿರಾಜ್ಯ ಆಂಧ್ರ-ತೆಲಂಗಾಣದಲ್ಲಿ ಘರ್ಜಿಸಲಿದೆ.

ಮದಗಜ ತೆಲುಗು ಭಾಷೆಯಲ್ಲಿ ಸ್ವತಃ ಶ್ರೀಮುರಳಿ ಅವರೇ ಹಿನ್ನೆಲೆ ಧ್ವನಿ ನೀಡಿದ್ದಾರೆ. ತೆಲುಗು ಡಬ್ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ತಂಡ, ಅಂತಿಮ ಹಂತದ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ, ಜಗಪತಿ ಬಾಬು ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ತಮಿಳು ನಟಿ ದೇವಯಾನಿ ಬೆಳ್ಳಿತೆರೆಗೆ ಮತ್ತೆ ಪ್ರವೇಶಿಸುತ್ತಿದ್ದಾರೆ. ರವಿ ಬಸ್ರೂರ್ ಸಿನಿಮಾಗೆ ಸಂಗೀತ ನೀಡಿದ್ದಾರೆ.

Next Story

RELATED STORIES