Top

ಸೋಶಿಯಲ್ ಮೀಡಿಯಾದಲ್ಲಿ 'ಮದಗಜ' ಬಿರುಗಾಳಿ

‘ಮದಗಜ’ ‘ಮಿಂಚಿನ ಓಟ’ಕ್ಕೆ ಸ್ಯಾಂಡಲ್​​ವುಡ್​​ ವೈಬ್ರೇಷನ್

ಸೋಶಿಯಲ್ ಮೀಡಿಯಾದಲ್ಲಿ ಮದಗಜ ಬಿರುಗಾಳಿ
X

ರೋರಿಂಗ್​ ಫ್ಯಾನ್ಸ್​ ಕಾತುರದಿಂದ ಕಾಯ್ತಿದ್ದ, ಮದಗಜ ಫಸ್ಟ್ ಲುಕ್​ ಟೀಸರ್​ ರಿಲೀಸ್​ ಆಗಿದ್ದೇ ತಡ, ಘರ್ಜನೆ ಶುರುವಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಮದಗಜ ಟೀಸರ್ ಹವಾ ಜೋರಾಗಿದ್ದು, ಹೊಸ ದಾಖಲೆ ಬರೆದಿದೆ.

ಮದಗಜ ಘೀಳಿಟ್ಟು ಘರ್ಜಿಸಿದ್ದಾನೆ. ಮದಗಜನ ರಣಘರ್ಜನೆಗೆ ಸ್ಯಾಂಡಲ್​ವುಡ್​ನ ರೆಕಾರ್ಡ್​ಗಳು ಉಡೀಸ್​ ಆಗಿದೆ. ಬಿಡುಗಡೆಯಾದ 24 ಗಂಟೆಯಲ್ಲೇ ಮದಗಜ ಫಸ್ಟ್​ಲುಕ್ ಟೀಸರ್ ದಾಖಲೆಗಳ ದರ್ಬಾರ್​​ಮಾಡಿದೆ. ರೋರಿಂಗ್ ಸ್ಟಾರ್ ಆರ್ಭಟಕ್ಕೆ ಸ್ಯಾಂಡಲ್​​​ವುಡ್​​ನ ಹಳೆ ರೆಕಾರ್ಡ್​ಗಳು ಧೂಳಿಪಟವಾಗಿದೆ. ಚಂದನವನದಲ್ಲಿ ಮದಗಜ ಟೀಸರ್​ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಮದಗಜ ಬಿರುಗಾಳಿಯೇ ಎದ್ದಿದೆ. ಬಿಡುಗಡೆಯಾಗುತ್ತಿದಂತೆ ಮದಗಜ ಟೀಸರ್​ ಯ್ಯೂಟೂಬ್​ಗೆ ಬೆಂಕಿ ಹಚ್ಚಿತ್ತು. ಟೀಸರ್​ ಬಿಡುಗಡೆಯಾಗಿ ಕೆಲವೇ ಸೆಕೆಂಡ್​ಗಳಲ್ಲಿ ವೀಕ್ಷಕರ ಸಾಗರವೇ ಯ್ಯೂಟೂಬ್​ಗೆ ಬಂದು ಲೈಕ್ ಬಟನ್ ಒತ್ತಿತ್ತು. ಗಂಟೆಯ ಲೆಕ್ಕದಲ್ಲಿ ಎಲ್ಲಾ ದಾಖಲೆಗಳು ಉಡೀಸ್​ ಆಗಿದೆ. ಮದಗಜ ಟೀಸರ್​​​ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ. 24ಗಂಟೆಯಲ್ಲಿ ವೇಗವಾಗಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಮೊದಲ ಫಸ್ಟ್​​ ಲುಕ್ ಟೀಸರ್ ಅನ್ನೋ ಖ್ಯಾತಿಗೆ ಮದಗಜ ಟೀಸರ್ ಪಾತ್ರವಾಗಿದೆ.

ಇನ್ನು ಮದಗಜ ಟೀಸರ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ. ಅಭಿಮಾನಿಗಳಂತೂ ಟೀಸರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುವಲ್ಲಿ ಮದಗಜ ಟೀಸರ್ ಯಶಸ್ವಿಯಾಗಿದೆ. ಒಂದೇ ದಿನದಲ್ಲಿ 3 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಪಡೆದು ತನ್ನ ಓಟ ಮುಂದುವರಿಸಿದೆ. ಇದೇ ಸ್ಪೀಡ್​ನಲ್ಲಿ ವಿವ್ಸ್​ ಪಡೆದುಕೊಂಡ್ರ ಇನ್ನು ಹಲವು ದಾಖಲೆಗಳು ಬ್ರೇಕ್ ಆಗುವ ಸಾಧ್ಯತೆ ಇದೆ.

​ ಶ್ರೀ ಮುರಳಿ ಹುಟ್ಟುಹಬ್ಬದ ಪ್ರಯುಕ್ತ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಫಸ್ಟ್​ ಲುಕ್​ ಟೀಸರ್​ ಲಾಂಚ್​​​ ಆಗಿತ್ತು. ಉಗ್ರಂ ಸಿನಿಮಾದ ಮೂಲಕ, ನಟ ಶ್ರೀಮುರಳಿಗೆ ಮರುಜನ್ಮ ನೀಡಿದ್ದ ಶ್ರೀಮುರಳಿ ಭಾಮೈದ ನಿರ್ದೇಶಕ ಪ್ರಶಾಂತ್​ ನೀಲ್​ ಮದಗಜನ ಫಸ್ಟ್​ ಲುಕ್​ಟೀಸರ್ ಲಾಂಚ್ ಮಾಡಿದ್ರು. ಈ ಸಿನಿಮಾದಲ್ಲಿ ಶ್ರೀಮುರುಳಿ ಇಲ್ಲಿವರೆಗೂ ಕಾಣಿಸಿಕೊಂಡಿರದ ಹೊಸ ಲುಕ್​ನಲ್ಲಿ ಮಿಂಚಿದ್ದಾರೆ. ರಗಡ್​ ಲುಕ್​ನಲ್ಲಿ ರೋರ್​ ಮಾಡಿದ್ದಾರೆ.

ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿರುವ ಭಾಗ ಅದ್ಭುತವಾಗಿ ಮೂಡಿಬಂದಿದ್ದು, ಸುಡುವ ಹೆಣಗಳ ಮಧ್ಯೆ ಮುರಳಿ ಕೂತು ಚಿಲ್ಲಂ ಸೇದುವ ಸ್ಲೋ ಮೋಶನ್ ಶಾಟ್ ಅಂತೂ ಅಭಿಮಾನಿಗಳಿಗೆ ಹಬ್ಬ. ಸದ್ಯ ಮದಗಜ ಟೀಸರ್ ಸ್ಯಾಂಡಲ್​ವುಡ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ಇನ್ನು ಮದಗಜ ಸಿನಿಮಾದ ಶೇಕಾಡ 75ರಷ್ಟು ಶೂಟಿಂಗ್​ ಕಂಪ್ಲೀಟ್ ಆಗಿದ್ದು .. ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅಯೋಗ್ಯ ಖ್ಯಾತಿಯ ಮಹೇಶ್​ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ರೆ ಆಶಿಕಾ ರಂಗನಾಥ್​ ಶ್ರೀಮುರಳಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಒಟ್ನಲ್ಲಿ ನಿರೀಕ್ಷೆಯಂತೆ ಮದಗಜನ ಆರ್ಭಟ ಜೋರಾಗಿದೆ. ಚಂದವನದಲ್ಲಿ ಶ್ರೀಮುರುಳಿ ಹೊಸ ಶಕೆ ಆರಂಭವಾಗಿದೆ. ಟೀಸರ್​ ನೋಡಿದ ಅಭಿಮಾನಿಗಳು ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Next Story

RELATED STORIES