Top

ಮೈಸೂರಿನಲ್ಲಿ ಮದಗಜ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್ ಶುರು

ಸ್ಯಾಂಡಲ್​ವುಡ್​​ನ ಮೋಸ್ಟ್ ಎಕ್ಸ್​ಪೆಕ್ಡೆಡ್​, ಮದಗಜ ಸಿನಿಮಾ ಕೂಡ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​ ಶುರು ಮಾಡಿದೆ.

ಮೈಸೂರಿನಲ್ಲಿ ಮದಗಜ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್ ಶುರು
X

ಕೊರೊನಾ ಸಮಸ್ಯೆಯಿಂದ ಸ್ಯಾಂಡಲ್​ವುಡ್​ ಕಂಪ್ಲೀಟ್​ ಸೈಲೆಂಟ್​ ಆಗಿತ್ತು. ಆದ್ರೀಗ ನಿಧಾನವಾಗಿ ಚಿತ್ರರಂಗ ಆ್ಯಕ್ಟಿವ್​ ಆಗ್ತಿದ್ದು, ಸಿನಿಮಾಗಳ ಶೂಟಿಂಗ್​ ಶುರುವಾಗ್ತಿದೆ. ಅದೇ ಹಾದಿಯಲ್ಲಿ ಸ್ಯಾಂಡಲ್​ವುಡ್​​ನ ಮೋಸ್ಟ್ ಎಕ್ಸ್​ಪೆಕ್ಡೆಡ್​, ಮದಗಜ ಸಿನಿಮಾ ಕೂಡ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​ ಶುರುಮಾಡಿದೆ.


ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್​ ಸಿನಿಮಾಗಳಲ್ಲಿ ಒಂದಾದ ಮದಗಜ ಸಿನಿಮಾ, ಕೊರೊನಾ ಮತ್ತು ಲಾಕ್​ಡೌನ್​ನಿಂದ ಕೊಂಚ ಶೂಟಿಂಗ್​ಗೆ ಬ್ರೇಕ್​ ನೀಡಿತ್ತು. ಅದ್ದೂರಿಯಾಗಿ ಮುಹೂರ್ತ ಮಾಡಿ, ವಾರಣಾಸಿಯಲ್ಲಿ ಫಸ್ಟ್ ಶೆಡ್ಯೂಲ್​ ಶೂಟಿಂಗ್ಗ್ ಮುಗಿಸಿ ಬಂದಿದ್ದ ಮದಗಜ ಟೀಂ, ಇದೀಗ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​​ನಲ್ಲಿ ಭಾಗಿಯಾಗಿದೆ. ಮೈಸೂರಿನಲ್ಲಿ ನಡೀತಿರೋ ಶೂಟಿಂಗ್​ನ ಎಕ್ಸ್​ಕ್ಲೂಸಿವ್ ಫೋಟೋಸ್​ ಅಂಡ್ ಮೇಕಿಂಗ್​ ವಿಡಿಯೋಸ್ ಝಲಕ್​ ನಿಮ್ಮ ಟಿವಿ5 ನಲ್ಲಿ ಮಾತ್ರ.

ವಾರಣಾಸಿಯಲ್ಲಿ ಚಿತ್ರದ ನಾಯಕನ ಚೈಲ್ಡ್​​ವುಡ್ ಪೋರ್ಶನ್ ಮತ್ತು ಇಂಟ್ರೋಡಕ್ಷನ್​ ಶೂಟಿಂಗ್​ ಕಂಪ್ಲೀಟ್​ ಮಾಡಿದ್ದ ತಂಡ, ಇದೀಗ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​ನ್ನ ಮೈಸೂರಿನಲ್ಲಿ ಶುರು ಮಾಡಿದೆ. ಅಂದ್ಹಾಗೇ ಸೆಪ್ಟೆಂಬರ್​ 19 ರಿಂದ ಮದಗಜ ಶೂಟಿಂಗ್​ ಶುರುವಾಗಿದ್ದು, ಅಕ್ಟೋಬರ್​​ 12 ರವರೆಗೂ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಬೀಡು ಬಿಡಲಿದೆ ಮದಗಜ ಟೀಂ.


ಅಂದ್ಹಾಗೇ ಮೈಸೂರಿನಲ್ಲಿ 18 ದಿನ ಟಾಕಿ ಪೋರ್ಶನ್​ ಮತ್ತು 7 ದಿನಗಳ ಫೈಟ್​ ಶೂಟಿಂಗ್​ ಪ್ಲಾನ್​ ಮಾಡಿಕೊಂಡಿದ್ದಾರೆ ನೀರ್ದೇಶಕ ಮಹೇಶ್ ಅಂಡ್ ಟೀಂ. ಅಂದ್ಹಾಗೇ ಸೆಕೆಂಡ್​ ಶೆಡ್ಯೂಲ್​ನಲ್ಲಿ ನಾಯಕ ಶ್ರೀಮುರಳಿ ಜೊತೆಗೆ ನಾಯಕಿ ಆಶೀಕಾ ರಂಗನಾಥ್, ಹಾಸ್ಯ ಕಲಾವಿದರಾದ ಚಿಕ್ಕಣ್ಣ, ಶಿವರಾಜ್​ ಕೆ.ಆರ್​ ಪೇಟೆ, ಹೀಗೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ. ಇನ್ನು ಮದಗಜ ಚಿತ್ರಕ್ಕಾಗಿ ಬಾಡಿ ಫಿಟ್​ನೆಸ್​ ಮಾಡಿಕೊಂಡಿರೋ ಶ್ರೀಮುರುಳಿ ಕೊಂಚ ಲುಕ್​ನ್ನ ಕೂಡ ಬದಲಿಸಿದ್ದಾರೆ.


Next Story

RELATED STORIES