Top

ತೆಲುಗಿನಲ್ಲೂ ಘರ್ಜಿಸಿ ಘೀಳಿಟ್ಟ ಮದಗಜ

ಟಾಲಿವುಡ್​ನಲ್ಲಿ ಮದಗಜ ಟೀಸರ್ ಬಿರುಗಾಳಿ

ತೆಲುಗಿನಲ್ಲೂ ಘರ್ಜಿಸಿ ಘೀಳಿಟ್ಟ ಮದಗಜ
X

ಒಂದು ಕಾಲ ಇತ್ತು ಬೇರೆ ಭಾಷೆಗಳ ಸಿನಿಮಾಗಳು ಕನ್ನಡದಲ್ಲಿ ಭಾರಿ ಸದ್ದು ಮಾಡುತ್ತಿದ್ವು ಆದರೆ ಇನ್ಮುಂದೆ ನಮ್ಮ ಸ್ಯಾಂಡಲ್​​ವುಡ್​ ಸಿನಿಮಾಗಳು ಬೇರೆ ಭಾಷೆಗಳಲ್ಲಿ ರಾರಾಜಿಸೋ ಟೈಂ ಬಂದಿದೆ. ಈಗಾಗಲೇ ಕನ್ನಡದ ಮದಗಜ ಮತ್ತು ಪೊಗರು ಚಿತ್ರದ ಟೀಸರ್-ಟ್ರೇಲರ್​ಗಳು ತಮಿಳು-ತೆಲುಗಿನಲ್ಲಿ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದು ರೆಕಾರ್ಡ್​ ಮಾಡುತ್ತಿವೆ.

ಎರಡು ವಾರದ ಹಿಂದೆ ಮದಗಜ ಫಸ್ಟ್​ಲುಕ್ ಟೀಸರ್​ ಸ್ಯಾಂಡಲ್​ವುಡ್​ ನಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಈ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿದೆ. ಈ ಮಧ್ಯೆ ತೆಲುಗಿನಲ್ಲೂ ಮದಗಜ ಘರ್ಜನೆ ಶುರುವಾಗಿದೆ. ಟಾಲಿವುಡ್​ನಲ್ಲಿ ಮದಗಜ ಗುಡುಗಿನ ಘರ್ಜನೆ ಮಾರ್ಧನಿಸಿದೆ. ಅದ್ಭುತ ದೃಶ್ಯಗಳ ಹೂರಣ. ಪ್ರತಿ ಪ್ರೇಮ್​​ನಲ್ಲೂ ಮೈ ರೋಮಾಂಚನಗೊಳಿಸುವ ಝಲಕ್. ಕಂಚಿನ ಕಂಠದ ಡೈಲಾಗ್ಸ್, ಎದೆ ಝಲ್ಲೆನಿಸೋ ಬ್ಯಾಗ್ರೌಂಡ್ ಮ್ಯೂಸಿಕ್. ಸುಡುವ ಹೆಣಗಳ ಮಧ್ಯೆ ಮೈಜುಂ ಎನಿಸೋ ಫೈಟ್ಸ್. ಗಂಗಾ ನದಿ ತಟದಲ್ಲಿ ರೋರಿಂಗ್​ಸ್ಟಾರ್​ ರೌದ್ರಾವತಾರ ಕಂಡು ಟಾಲಿವುಡ್​ ಮಂದಿ ಥ್ರಿಲ್ ಆಗಿದ್ದಾರೆ.

ಹೊಸ ವರ್ಷದ ಪ್ರಯುಕ್ತ ತೆಲುಗಿನಲ್ಲೂ ಮದಗಜ ಫಸ್ಟ್​ಲುಕ್ ಟೀಸರ್ ರಿಲೀಸ್ ಆಗಿದೆ. ಆಂಧ್ರ-ತೆಲಂಗಾಣದಲ್ಲೂ ಮದಗಜನ ರಣಘರ್ಜನೆ ಶುರುವಾಗಿದೆ. ತೆಲುಗಿನಲ್ಲಿ ಫಸ್ಟ್​​ಲುಕ್​​ ಟೀಸರ್​ ಬಿಡುಗಡೆಯಾದ 24 ಗಂಟೆಯಲ್ಲೇ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಮದಗಜ ಬಿರುಗಾಳಿಯೇ ಎದ್ದಿದೆ. ತೆಲುಗು ಟೀಸರ್​ಗೂ ಶ್ರೀಮುರುಳಿಯೇ ಧ್ವನಿ ನೀಡಿದ್ದು. ಮುರಳಿ ಕಂಚಿನ ಕಂಠಕ್ಕೆ ತೆಲುಗು ಫ್ಯಾನ್ಸ್ ಫಿದಾ ಆಗಿದ್ದಾರೆ.

ಟಾಲಿವುಡ್​ನಲ್ಲಿ ಶ್ರೀ ಮುರುಳಿ ಹವಾ ಶುರುವಾಗಿದೆ. ಮದಗಜ ತೆಲುಗು ಟೀಸರ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ. ಅಭಿಮಾನಿಗಳಂತೂ ಟೀಸರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುವಲ್ಲಿ ಮದಗಜ ಟೀಸರ್ ಯಶಸ್ವಿಯಾಗಿದೆ. ಒಂದೇ ದಿನದಲ್ಲಿ ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಪಡೆದು ತನ್ನ ಓಟ ಮುಂದುವರಿಸಿದೆ. ತೆಲುಗು ಮಂದಿ ಮದಗಜನನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ಕೇವಲ ಮದಗಜ ಮಾತ್ರವಲ್ಲ ದ್ರುವ ಸರ್ಜಾ ಅಭಿನಯದ ಪೊಗರು ಕೂಡ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಮಾಡಿದೆ. ಹಾಡು, ಟ್ರೇಲರ್​ಗಳು ದೊಡ್ಡ ಮಟ್ಟದ ಸದ್ದು ಮಾಡಿವೆ. ಈಗ ತಮಿಳು ಮತ್ತು ತೆಲುಗಿನಲ್ಲೂ ಪೊಗರು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಟಾಲಿವುಡ್​ ಮತ್ತು ಕಾಲಿವುಡ್​ನಲ್ಲಿ ಪೊಗರು ಪ್ರಳಯವನ್ನೇ ಎಬ್ಬಸಿದೆ. ಪಂಚಿಂಗ್​ ಡೈಲಾಗ್​ಗೆ ತಮಿಳು ಮತ್ತು ತೆಲುಗು ಪ್ರೇಕ್ಷಕರು ಜೈ ಎಂದಿದ್ದಾರೆ.

ತೆಲುಗಿನಲ್ಲಿ ಪೊಗುರು ಹೆಸರಿನಲ್ಲೇ ರಿಲೀಸ್ ಆಗಿರೋ ಡೈಲಾಗ್ ಟ್ರೇಲರ್​ ಬಿಡುಗಡೆಯಾದ 24 ಗಂಟೆಯಲ್ಲೇ 4 ಮಿಲಿಯನ್​​​​ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾ ಬಗ್ಗೆ ತೆಲುಗು ಪ್ರೇಕ್ಷಕರಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಗರಿಗೆದರಿದಂತಿದೆ. ಇನ್ನು ತಮಿಳಿನಲ್ಲಿ ಸೆಮ್ಮಾ ತಿಮಿರು ಅನ್ನೋ ಹೆಸರಿನಲ್ಲಿ ಡೈಲಾಗ್ ಟ್ರೇಲರ್​ ರಿಲೀಸ್ ಆಗಿದೆ. ತಮಿಳಿನಲ್ಲೂ ಕೂಡ 4 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆಯುವಲ್ಲಿ ಪೊಗರು ಯಶಸ್ವಿಯಾಗಿದೆ.

ಮಿಳು ಮತ್ತು ತೆಲುಗಿನಲ್ಲಿ ವಾಯ್ಸ್ ಡಬ್​​ ಮಾಡಲಾಗಿದೆ. ಸಿನಿಮಾ ಕೂಡ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಇನ್ನು 'ಖರಾಬು' ಹಾಡು ತೆಲುಗಿನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಚಂದನ್ ಶೆಟ್ಟಿ ಸಂಗೀತಕ್ಕೆ ಟಾಲಿವುಡ್ ಪ್ರಿಯರು ಫಿದಾ ಆಗಿದ್ದಾರೆ.

Next Story

RELATED STORIES