Top

ಲವ್ಲಿ ಸ್ಟಾರ್ ಪ್ರೇಮ್ ಕನ್ನಡದ ಮುದ್ದಾದ ಮುಖ, ಹೀಗಂದಿದ್ದೇಕೆ ನಾದಬ್ರಹ್ಮ

ಪ್ರೇಮಂ ಪೂಜ್ಯಂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ ಹಂಸಲೇಖ

ಲವ್ಲಿ ಸ್ಟಾರ್ ಪ್ರೇಮ್ ಕನ್ನಡದ ಮುದ್ದಾದ ಮುಖ, ಹೀಗಂದಿದ್ದೇಕೆ ನಾದಬ್ರಹ್ಮ
X

ಲವ್ಲಿ ಸ್ಟಾರ್ ಪ್ರೇಮ್​​, ಸ್ಯಾಂಡಲ್​​ವುಡ್​ನ ಟ್ಯಾಲೆಂಟೆಡ್​ ಹೀರೋ. ನೋಡು ನೋಡ್ತಿದ್ದ ಹಾಗೇ 25 ಸಿನಿಮಾಗಳನ್ನ ಪೂರೈಸಿದ್ದಾರೆ. ಇವರ 25 ನೇ ಸಿನಿಮಾ ಪ್ರೇಮಂ ಪೂಜ್ಯಂ ಟೀಸರ್ನಿಂದ್ಲೇ ಸಖತ್​ ಸೌಂಡ್​ ಮಾಡುತ್ತಿದೆ. ಇದೀಗ ಲವ್ಲಿ ಸ್ಟಾರ್ ಬಗ್ಗೆ ನಾದಬ್ರಹ್ಮ ಹಂಸಲೇಖ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನೆನಪಿರಲಿ ಪ್ರೇಮ್, ಲವ್ಲಿಸ್ಟಾರ್ ಪ್ರೇಮ್. ಹೇಗೆ ಕರೆದರು, ಹಂಸಲೇಖರವರು ಹೇಳಿದ ಹಾಗೇ ಕಣ್ಣ ಮುಂದೆ ಬರೋದು ಅದೇ ಮುದ್ದಾದ ಮುಖ. ಮೊದಲ ಸಿನಿಮಾ ಪ್ರಾಣ ಚಿತ್ರದಿಂದ 25 ನೇ ಸಿನಿಮಾ ಪ್ರೇಮಂ ಪೂಜ್ಯಂವರೆಗೆ ಪ್ರೇಮ್​ ಸಿನಿಜರ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ ನಾದಬ್ರಹ್ಮ.

ಹಿರಿಯ ಸಂಗೀತ ನಿರ್ದೇಶಕರಾದ ಹಂಸಲೇಖರವರು, ಲವ್ಲಿಸ್ಟಾರ್ ಪ್ರೇಮ್​ ಅಭಿನಯದ ನೆನಪಿರಲಿ, ಗುಣವಂತ, ಹೊಂಗನಸು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಅದರಲ್ಲೂ ನೆನಪಿರಲಿ ಮತ್ತು ಗುಣವಂತ ಸಿನಿಮಾದ ಹಾಡುಗಳು ಸ್ಯಾಂಡಲ್​ವುಡ್​ನ ಎವರ್​ಗ್ರೀನ್​ ಸಾಂಗ್ಸ್.

ಇನ್ನು ಪ್ರೇಮ್​ ಅಭಿನಯದ 25 ನೇ ಸಿನಿಮಾ ಪ್ರೇಮ್ ಪೂಜ್ಯಂ ಬಗ್ಗೆ ಕೂಡ ಮೆಚ್ಚುಗೆಯ ಮಾತುಗಳನ್ನಾಡಿರೋ ಹಂಸಲೇಖ, ಪ್ರೇಮ್​ ಜೊತೆಯಲ್ಲಿ ಸಿನಿಮಾ ಮಾಡೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರೇಮಂ ಪೂಜ್ಯಂ ಸಿನಿಮಾ ಕೂಡ ಈಗಾಗ್ಲೇ ಟೀಸರ್ ಮೂಲಕ ಸಕತ್​ ಸದ್ದು, ಸುದ್ದಿ ಮಾಡ್ತಿದ್ದು, ಚಿತ್ರದ ಟೈಟಲ್ಲೇ ಹೇಳೋ ಹಾಗೇ ಇದೊಂದು ರೊಮ್ಯಾಂಟಿಕ್​ ಲವ್​​ಸ್ಟೋರಿ. ಚಿತ್ರದಲ್ಲಿ ನಟ ಪ್ರೇಮ್​ ಸಖತ್​ ಸ್ಟೈಲಿಶ್​ ಹಾಗೂ ಯಂಗ್​ ಆಗಿ ಕಾಣಿಸಿಕೊಂಡಿದ್ದು, ಬರೋಬ್ಬರಿ 9 ಡಿಫ್ರೆಂಟ್​ ಲುಕ್​ಗಳಲ್ಲಿ ಮಿಂಚಲಿದ್ದಾರಂತೆ. ಇನ್ನು ಪ್ರೇಮ್​ಗೆ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ.

ಸ್ಯಾಂಡಲ್​​ವುಡ್​ನ ಲೆಜೆಂಡರಿ ಮ್ಯೂಸಿಕ್​ ಡೈರೆಕ್ಟರ್ ಹಂಸಲೇಖರವರು ನಟ ಲವ್ಲಿಸ್ಟಾರ್​ ಪ್ರೇಮ್​ ಹಾಗೂ ಅವರ 25 ನೇ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರೋದು ಸ್ವತಃ ನಟ ಪ್ರೇಮ್​ ಹಾಗೂ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Next Story

RELATED STORIES