Top

ವರ್ಷಗಟ್ಟಲೇ ​ಯಶಸ್ವಿ ಪ್ರದರ್ಶನ ಕಾಣ್ತಿದ್ದ ಅಣ್ಣಾವ್ರ ಸಿನಿಮಾಗಳು

ಒಡಹುಟ್ಟಿದವರು 25 ವಾರ, ಜೀವನಚೈತ್ರ 365 ದಿನ ಹಾಗೂ ಆಕಸ್ಮಿಕ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಪ್ರಯುಕ್ತ ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತಂತೆ.

ವರ್ಷಗಟ್ಟಲೇ ​ಯಶಸ್ವಿ ಪ್ರದರ್ಶನ ಕಾಣ್ತಿದ್ದ ಅಣ್ಣಾವ್ರ ಸಿನಿಮಾಗಳು
X

ಸ್ಯಾಂಡಲ್​​ವುಡ್​ನ ವರನಟ ಡಾ.ರಾಜ್​ಕುಮಾರ್. ಅವರ ಸಿನಿಮಾಗಳು ಥಿಯೇಟರ್​ಗಳಲ್ಲಿ ವಾರಗಟ್ಟಲೇ ಅಲ್ಲಾ. ವರ್ಷಗಟ್ಟಲೇ ಸಕ್ಸಸ್​ಫುಲ್​ ಆಗಿ ಪ್ರದರ್ಶನ ಕಾಣ್ತಾ ಇತ್ತು. ಒಮ್ಮೆ ಅಣ್ಣಾವ್ರ ಮೂರು ಸಿನಿಮಾಗಳ ಸಕ್ಸಸ್​ ಕಾರ್ಯಕ್ರಮವನ್ನ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಮಾಡಲಾಗಿತ್ತಂತೆ. ಅಂತಹ ಒಂದು ಅಪರೂಪದ ಫೋಟೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಡಾ.ವರನಟ ರಾಜ್​ಕುಮಾರ್ ಸಿನಿಮಾಗಳೇ ಹಾಗೇ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕುಟುಂಬ ಸಮೇತರಾಗಿ ಕೂತು ನೋಡುವಂತಹ ಸಿನಿಮಾಗಳು. ಈಗಂತೂ ಒಂದು ಸಿನಿಮಾ 25 ದಿನಗಳನ್ನ ಪೂರೈಸಿದ್ರೆ ಸಾಕು ಅದ್ದೂರಿ ಸಮಾರಂಭಗಳೇ ನಡೆಯುತ್ತೆ. ಆದರೆ, ಆ ಕಾಲದಲ್ಲಿ ಅಣ್ಣಾವರ ಸಿನಿಮಾಗಳು ವರ್ಷಗಟ್ಟಲೇ ಪ್ರದರ್ಶನ ಕಾಣ್ತಾ ಇದ್ವು.


ವಿಶೇಷ ಅಂದ್ರೆ ಡಾ.ರಾಜ್​ಕುಮಾರ್ ಅಭಿನಯದ 1992 ರಲ್ಲಿ ತೆರೆಕಂಡ ಜೀವನ ಚೈತ್ರ,1993 ರಲ್ಲಿ ತೆರೆಕಂಡ ಆಕಸ್ಮಿಕ, 1994 ರಲ್ಲಿ ತೆರೆಕಂಡ ಒಡಹುಟ್ಟಿದವರು. ಈ ಮೂರು ಸಿನಿಮಾಗಳ ಸಕ್ಸಸ್​ ಕಾರ್ಯಕ್ರಮವನ್ನ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಮಾಡಲಾಗಿತ್ತಂತೆ. ಸದ್ಯ ಈ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಒಡಹುಟ್ಟಿದವರು 25 ವಾರ, ಜೀವನಚೈತ್ರ 365 ದಿನ ಹಾಗೂ ಆಕಸ್ಮಿಕ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಪ್ರಯುಕ್ತ ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತಂತೆ. ಈ ಕಾರ್ಯಕ್ರಮದಲ್ಲಿ ಡಾ.ರಾಜ್​ಕುಮಾರ್,ಪಾರ್ವತಮ್ಮ ರಾಜ್​ಕುಮಾರ್, ರೆಬೆಲ್​ ಸ್ಟಾರ್ ಅಂಬರೀಶ್, ನಟಿ ಮಾಧವಿ ಮುಂತಾದವರು ಹಾಜರಾಗಿದರು.

ಒಟ್ಟಾರೆ ಚಿತ್ರರಂಗದಲ್ಲಿ ಸರಳತೆಗೆ ಪ್ರತೀಕವಂತಿದ್ದ ಅಣ್ಣಾವ್ರು ಇವತ್ತಿಗೂ ಪ್ರತಿ ಹಂತದಲ್ಲೂ ಮಾದರಿಯಾಗಿದ್ದಾರೆ. ಯಾವುದೇ ಆಡಂಬರ ಉತ್ಪ್ರೇಕ್ಷೆಗಳಿಲ್ಲದೆ ಮೂರೂ ಚಿತ್ರಗಳ ಸಂಭ್ರಮಾಚರಣೆಯನ್ನ ಇಷ್ಟು ಸರಳವಾಗಿ ಆಚರಿಸಿ ಅಭಿಮಾನಿಗಳನ್ನ ರಂಜಿಸಿದ್ರು. ಈ ಮೂಲಕ ಅಣ್ಣಾವ್ರಿಗೆ ಅಣ್ಣಾವರೇ ಸಾಟಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

Next Story

RELATED STORIES