Top

ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ಅಕ್ಕಿ​ ಅಭಿನಯದ ಲಕ್ಷ್ಮಿ

  • ಬಿಟೌನ್​ನ ಮೋಸ್ಟ್ ಸಕ್ಸಸ್​ಫುಲ್​ ಹೀರೋ ಅಕ್ಷಯ್​ಕುಮಾರ್
  • 2 ವರ್ಷದಲ್ಲಿ 7 ಸೂಪರ್​ ಹಿಟ್​ ಕೊಟ್ಟ ನಟ ಅಕ್ಕಿ
  • 35 ಕೋಟಿಯ ಪ್ಯಾಡ್​ಮನ್​ ಗಳಿಸಿದ್ದು ಬರೋಬ್ಬರಿ 207 ಕೋಟಿ

ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ಅಕ್ಕಿ​ ಅಭಿನಯದ ಲಕ್ಷ್ಮಿ
X

ಬಿಟೌನ್​ನ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಲಕ್ಷ್ಮಿ ಚಿತ್ರ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆಗಿದೆ. ಕಳೆದ 2 ವರ್ಷಗಳಿಂದ ಅಕ್ಷಯ್​ ಕುಮಾರ್ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಹಾಗೇ ನಟಿಸಿದ ಅಷ್ಟೂ ಚಿತ್ರಗಳು ಸೂಪರ್​ ಹಿಟ್ ಆಗಿವೆ.

ರಾಘವ್​ ಲಾರೆನ್ಸ್​ ನಿರ್ದೇಶನದ ಲಕ್ಷ್ಮಿ ಚಿತ್ರ​ ಕೊನೆಗೂ ಅಭಿಮಾನಿಗಳನ್ನ ರಂಜಿಸುತ್ತಿದೆ. ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾದ ಲಕ್ಷ್ಮಿ ​ ಚಿತ್ರವನ್ನ ಜನ ಎಂಜಾಯ್​ ಮಾಡುತ್ತಿದ್ದಾರೆ. ಅಂದ್ಹಾಗೇ ಲಾಕ್​ಡೌನ್​ ಬಳಿಕ ಬಿಡುಗಡೆಯಾದ ಮೊದಲ ಬಿಗ್​ಬಜೆಟ್​ ಹಾಗೂ ಬಿಗ್​ ಸ್ಟಾರ್​ ಚಿತ್ರ ಈ ಲಕ್ಷ್ಮಿ .

ಅಂದ್ಹಾಗೇ, ಲಕ್ಷ್ಮಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಯಾಕಂದ್ರೆ, ಇದು ತಮಿಳಿನಲ್ಲಿ ಬಿಗ್​ ಸಕ್ಸಸ್ ಕಂಡ ಕಾಂಚನಾ ಚಿತ್ರದ ರೀಮೇಕ್​. 2020 ಮೇ ತಿಂಗಳಲ್ಲೇ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಟೈಟಲ್​ ವಿವಾದದಿಂದಾಗಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಎಲ್ಲಾ ಕಾರಣಗಳಿಂದ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಕ್ಷಯ್​ ಕುಮಾರ್​ ಮಂಗಳಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಬಹುದೊಡ್ಡ ಎಕ್ಸೈಟ್​ಮೆಂಟ್​ ಕ್ರಿಯೇಟ್​ ಮಾಡಿದೆ.

ಅಕ್ಷಯ್​ ಕುಮಾರ್​ ಕಳೆದ ಎರಡು ವರ್ಷಗಳಿಂದ ಸತತವಾಗಿ 7 ಸೂಪರ್​ ಹಿಟ್​ ಚಿತ್ರಗಳನ್ನ ನೀಡಿದ್ದಾರೆ. 2018ರಿಂದ ಈವರೆಗೂ ಅಕ್ಕಿ ನಟಿಸಿರೋ ಪ್ರತಿ ಚಿತ್ರವೂ ಸೂಪರ್​ ಹಿಟ್​ ಆಗ್ತಾನೇ ಬಂದಿವೆ. ಈಗ ಲಕ್ಷ್ಮಿ ಚಿತ್ರ​ ಹಿಟ್​ ಆಗಿದ್ದೇ ಆದರೆ ಸತತ 8 ಯಶಸ್ವಿ ಚಿತ್ರಗಳನ್ನ ಕೊಟ್ಟ ಸೂಪರ್ ಸ್ಟಾರ್ ಎನಿಸಿಕೊಳ್ತಾರೆ ಅಕ್ಷಯ್​. ನಿಮಗೆಲ್ಲಾ ಗೊತ್ತಿರೋ ಹಾಗೆ 2018ರಲ್ಲಿ ಅಕ್ಷಯ್​ ಕುಮಾರ್ ಅವರು ಪ್ಯಾಡ್​ಮನ್​ ಅನ್ನೋ ರಿಯಲ್​ ಸ್ಟೋರಿಗೆ ಬಣ್ಣ ಹಚ್ಚಿದರು.

ತಮಿಳುನಾಡಿನ ಅರುಣಾಚಲಮ್​ ಮುರುಗನಾಥಮ್ ಅವರ ರಿಯಲ್​ ಸ್ಟೋರಿಯೇ ಪ್ಯಾಡ್​ಮನ್​. ನಿರ್ದೇಶಕ ಆರ್.ಬಾಲ್ಕಿಯವರು 35 ಕೋಟಿ ಬಜೆಟ್​ನಲ್ಲಿ ಈ ಚಿತ್ರವನ್ನ ತೆರೆಮೇಲೆ ತಂದಿದರು. ಬಾಕ್ಸ್ ಆಫೀಸ್​ನಲ್ಲಿ ಇದು 207 ಕೋಟಿ ಗಳಿಕೆ ಮಾಡಿತ್ತು.

2018ರ ಆಗಸ್ಟ್ 15 ರಂದು ತೆರೆಕಂಡ ಮತ್ತೊಂದು ಸಿನಿಮಾ ಗೋಲ್ಡ್​. ಒಂದು ಕ್ರೀಡೆ ಹೇಗೆ ಒಂದು ದೇಶವನ್ನ ಒಂದು ಮಾಡುತ್ತೆ ಅನ್ನೊದೇ ಈ ಚಿತ್ರದ ಸ್ಟೋರಿಲೈನ್. ಚಿತ್ರದಲ್ಲಿ ಬಂಗಾಳಿ ಹಾಕಿ ಟ್ರೈನರ್​ ಪಾತ್ರದಲ್ಲಿ ಅಕ್ಷಯ್​ ಕಾಣಿಸಿಕೊಂಡಿದರು. 61 ಕೋಟಿ ಬಜೆಟ್​ನ ಈ ಗೋಲ್ಡ್​ ಚಿತ್ರ 158 ಕೋಟಿ ಗಳಿಸುವ ಮೂಲಕ ಭಾರೀ ಯಶಸ್ಸನ್ನ ಕಂಡಿತ್ತು.

2018ರ ಕೊನೆಯಲ್ಲಿ ಶಂಕರ್ ನಿರ್ದೇಶನದ​ 2.O ಚಿತ್ರದಲ್ಲಿ ಸೂಪರ್​ ಸ್ಟಾರ್ ರಜಿನಿಕಾಂತ್​ ಎದುರು ಅಕ್ಷಯ್​ ಕುಮಾರ್ ನೆಗಿಟಿವ್​ ರೋಲ್​ನಲ್ಲಿ​ ಧೂಳೆಬ್ಬಿಸಿದ್ದರು. ಬರೋಬ್ಬರಿ 570 ಕೋಟಿ ಬಜೆಟ್​ನ 2.O ಚಿತ್ರ ಬಾಕ್ಸ್​ಆಫೀಸ್​ನಲ್ಲಿ 800 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಆ ಮೂಲಕ 2018ರಲ್ಲಿ ಅಕ್ಷಯ್​ ಕುಮಾರ್​ ಅಮೋಘ ಯಶಸ್ಸನ್ನ ಪಡೆದರು.

2019ರ ಆರಂಭದಲ್ಲಿ ಅಕ್ಷಯ್​ ಕುಮಾರ್ ಅವರ ಕೇಸರಿ ಚಿತ್ರದ ಈ ಅವತಾರವೇ ಅಭಿಮಾನಿಗಳನ್ನ ಥ್ರಿಲ್ ಆಗುವಂತೆ ಮಾಡಿತ್ತು. ಪಂಜಾಬಿ ಭಾಷೆ ಮಿಶ್ರಿತ ಐತಿಹಾಸಿಕ ಆ್ಯಕ್ಷನ್​ ಥ್ರಿಲ್ಲರ್​ ಕೇಸರಿ ಒಂದು ನೈಜ ಹಾಗೂ ದೇಶಪ್ರೇಮದ ಕಥಾಹಂದರ. 80 ಕೋಟಿಯ ಈ ಚಿತ್ರ ಅದ್ಭುತ ಯಶಸ್ಸಿನ ​ ಜೊತೆಗೆ 207 ಕೋಟಿ ಗಳಿಕೆ ಮಾಡಿತ್ತು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ವಿಜ್ಞಾನಿಗಳ ಬದುಕು, ಸಾಹಸ ಹಾಗೂ ಮಂಗಳಯಾನ ಯೋಜನೆ ಕುರಿತ ಚಿತ್ರ ಮಿಷನ್​ ಮಂಗಳ. 2019 ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ತೆರೆ ಕಂಡ ಮಿಷನ್​ ಮಂಗಳ ಅದ್ಭುತ ಸಕ್ಸಸ್​ ಕಂಡಿತ್ತು. 32 ಕೋಟಿಯ ಚಿತ್ರ 300 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಜೊತೆಗೆ ಅಕ್ಷಯ್​ ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.

ಇಷ್ಟೇ ಅಲ್ಲದೇ ಅಕ್ಷಯ್​ ಕುಮಾರ್ 2019 ರ ಕೊನೆಯಲ್ಲಿ ಹೌಸ್​ಫುಲ್​-4 ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಂಡರು. ಬಳಿಕ ಗುಡ್​ನ್ಯೂಸ್​ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಎರಡೂ ಚಿತ್ರಗಳು ಕೂಡ ಬಾಕ್ಸ್​ ಆಫೀಸ್​​ನಲ್ಲಿ ಸದ್ದು ಮಾಡಿದವು.

Next Story

RELATED STORIES