Top

ಟ್ವೆಂಟಿ-ಟ್ವೆಂಟಿ ಹೊಸ ಚಿತ್ರದ ಮೂಲಕ ಕೋಮಲ್​ ಕಂಬ್ಯಾಕ್

ಕೋಮಲ್​ ಅಭೀನಯದ ಹೊಸ ಚಿತ್ರಕ್ಕೆ 2020 ಅಂತ ಟೈಟಲ್​ ಫಿಕ್ಸ್ ಆಗಿದೆ.

ಟ್ವೆಂಟಿ-ಟ್ವೆಂಟಿ ಹೊಸ ಚಿತ್ರದ ಮೂಲಕ ಕೋಮಲ್​ ಕಂಬ್ಯಾಕ್
X

ಸ್ಯಾಂಡಲ್​ವುಡ್​ನಲ್ಲಿ ಹಾಸ್ಯ ಕಲಾವಿದನಾಗಿ, ನಂತರ ಹೀರೋ ಆಗಿ, ಆನಂತರ ಮಾಸ್ ಹೀರೋ ಪ್ರಮೋಶನ್​ ಪಡೀತಾ ಬಂದ ನಟ ಕೋಮಲ್​ ಕುಮಾರ್, ಒಂದಷ್ಟು ಗ್ಯಾಪ್​ ನಂತರ ಮತ್ತೆ ತೆರೆಮೇಲೆ ಮಿಂಚೋಕ್ಕೆ ಸಜ್ಜಾಗಿದ್ದಾರೆ. ಆ ಸಿನಿಮಾದ ಟೈಟಲ್ಲೇ ಸಖತ್​ ವಿಶೇಷವಾಗಿದೆ.

ಸ್ಯಾಂಡಲ್​ವುಡ್​ನ ಸೆನ್ಸೇಷನಲ್​ ಸ್ಟಾರ್ ಕೋಮಲ್​ ಕುಮಾರ್ ಹಾಸ್ಯ ಕಲಾವಿದರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟು, ಹೀರೋ ಆಗಿಯೂ ಕೂಡ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಆದರೆ, ಕಾಮಿಡಿ ಸ್ಟಾರ್ ಕೋಮಲ್​ ಮಾಸ್ ಹೀರೋ ಮಿಂಚಿದ್ದು ಮಾತ್ರ ಕೆಂಪೇಗೌಡ 2 ಸಿನಿಮಾ ಮೂಲಕ.

2016ರಲ್ಲಿ ಡೀಲ್​ ರಾಜ ಸಿನಿಮಾ ನಂತ್ರ ಸುಮಾರು 4 ವರ್ಷಗಳ ಗ್ಯಾಪ್​ ತೊಗೊಂಡು,ಕಂಪ್ಲೀಟ್ ಚೇಂಜ್​ಓವರ್​ ಮಾಡಿಕೊಂಡು, ಪೋಲೀಸ್​ ಆಫೀಸರ್ ಪಾತ್ರದಲ್ಲಿ ಕೆಂಪೇಗೌಡ ಆಗಿ ರೀ ಎಂಟ್ರಿ ಕೊಟ್ರು ಕೋಮಲ್. ಆದರೆ, ಸಿನಿಮಾ ಅಂದುಕೊಂಡ ನಿರೀಕ್ಷೆ ಮಟ್ಟ ತಲುಪಲಿಲ್ಲ.ಆನಂತ್ರ ಕೋಮಲ್​ ಚಿತ್ರರಂಗದಲ್ಲಿ ಅಷ್ಟು ಆಕ್ಟಿವ್​ ಆಗಿ ಇರಲಿಲ್ಲ. ಇದೀಗ ಹೊಸ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಹಾಸ್ಯದ ಹೊಳೆ ಹರಿಸೋಕ್ಕೆ ಸಜ್ಜಾಗಿದ್ದಾರೆ.

ಕೋಮಲ್​ ಅಭೀನಯದ ಹೊಸ ಚಿತ್ರಕ್ಕೆ 2020 ಅಂತ ಟೈಟಲ್​ ಫಿಕ್ಸ್ ಆಗಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​ನ ಅಡಿಯಲ್ಲಿ ಚಿತ್ರ ಸಿದ್ಧವಾಗುತ್ತಿದ್ದು, ಸದ್ಯ ಚಿತ್ರದ ಮೋಶನ್​ ಪೋಸ್ಟರ್ ರಿಲೀಸ್​ ಆಗಿದೆ.

ಈ ಮೋಶನ್ ಪೋಸ್ಟರ್ ನಲ್ಲಿ ಚೀನಾ ಏರ್‌ಲೈನ್ಸ್ ಕೊರೊನಾ ಹರಡಿಸಿರುವುದನ್ನು ಹೈಲೈಟ್ ಮಾಡಲಾಗಿದೆ. ಹಾಗಾಗಿ, ಈ ಚಿತ್ರದ ಕಥೆ ಕೊರೊನಾ ವೈರಸ್ ಹಾಗೂ ಅದರ ಪರಿಣಾಮದ ಸುತ್ತ ಸುತ್ತಲಿದೆ ಅನ್ನೋ ಕುತೂಹಲ ಹುಟ್ಟಿಸಿದೆ. ಅಂದ್ಹಾಗೇ ರಾಬರ್ಟ್ ಚಿತ್ರಕ್ಕೆ ಡೈಲಾಗ್​ ಬರೆದಿರುವ ರಾಜಶೇಖರ್ ಆಕ್ಷನ್ ಕಟ್ ಹೇಳ್ತಿದ್ದು, ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಇದಾಗಿದೆ.

ಅಂದ್ಹಾಗೇ ಸಹೋದರನ ಈ ಹೊಸ ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್​ ಸೋಶಿಯಲ್​ ಮೀಡಿಯಾದಲ್ಲಿ ಶುಭ ಹಾರೈಸಿ, ಮೋಶನ್​ ಪೋಸ್ಟರ್ ಶೇರ್ ಮಾಡಿದ್ದಾರೆ. ಸದ್ಯ ಒಂದಷ್ಟು ಗ್ಯಾಪ್​ ನಂತರ ಮತ್ತೆ ಕೋಮಲ್​ ಚಿತ್ರರಂಗದಲ್ಲಿ ಆ್ಯಕ್ಟಿವ್​ ಆಗಿರೋದು ಸಿನಿಪ್ರಿಯರಿಗೆ ಖುಷಿ ಕೊಟ್ಟಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

Next Story

RELATED STORIES