Top

'ಕೋಟಿಗೊಬ್ಬ'ನ​ ಚಮತ್ಕಾರಕ್ಕೆ ಅಭಿಮಾನಿಗಳ ಜೈಕಾರ

ಕೋಟಿಗೊಬ್ಬನ ಚಮತ್ಕಾರ ನೋಡೋಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆ್ಯಕ್ಷನ್​ ಪಕ್ಕಕ್ಕಿಟ್ಟು ಬಹಳ ಅದ್ಭುತವಾಗಿ ಟೀಸರ್​ ಕಟ್​ ಮಾಡಿದೆ ಚಿತ್ರತಂಡ.

ಕೋಟಿಗೊಬ್ಬನ​ ಚಮತ್ಕಾರಕ್ಕೆ ಅಭಿಮಾನಿಗಳ ಜೈಕಾರ
X

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಬರ್ತ್​ಡೇ ಸ್ಪೆಷಲ್ಲಾಗಿ ರಿಲೀಸ್​ ಆಗಿರೋ ಕೋಟಿಗೊಬ್ಬ-3 ಟೀಸರ್​ ಅಭಿಮಾನಿಗಳ ಮನಗೆದ್ದಿದೆ.. ಕೋಟಿಗೊಬ್ಬ-2 ಸೀಕ್ವೆಲ್​ ಆಗಿರೋ ಈ ಚಿತ್ರದಲ್ಲಿ ಬಾದ್​ಶಾ ಸುದೀಪ್ ಇಂಟರ್​ನ್ಯಾಷನಲ್​ ಕಿಲಾಡಿಯಾಗಿ ಪ್ರೇಕ್ಷಕರನ್ನ ರಂಜಿಸೋಕ್ಕೆ ಬರ್ತಿದ್ದಾರೆ.

ಕನ್ನಡದ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3. ಟೀಸರ್​, ಸಾಂಗ್​ ಮತ್ತು ಮೋಷನ್ ಪೋಸ್ಟರ್​ಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸೌಂಡ್​ ಮಾಡ್ತಿರೋ ಈ ಆ್ಯಕ್ಷನ್​ ಎಂಟ್ರಟ್ರೈನರ್​ ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಕೊರೊನಾ ಹಾವಳಿ ಇಲ್ಲದೇ ಇದ್ದಿದ್ರೆ, ಇಷ್ಟೋತ್ತಿಗೆ ತೆರೆಮೇಲೆ ಕೋಟಿಗೊಬ್ಬನ ದರ್ಬಾರ್​ ನಡೆಯಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸದ್ಯ ಸುದೀಪ್​ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಹೊಸ ಟೀಸರ್​ ರಿವೀಲ್​ ಆಗಿದೆ.

ಶಿವ ಕಾರ್ತಿಕ್​ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಅಭಿಮಾನಿಗಳು ಕೋಟಿಗೊಬ್ಬನ ಚಮತ್ಕಾರ ನೋಡೋಕ್ಕೆ ಕಾಯುತ್ತಿದ್ದಾರೆ. ಈ ಬಾರಿ ಆ್ಯಕ್ಷನ್​ ಪಕ್ಕಕ್ಕಿಟ್ಟು ಬಹಳ ಕಲರ್​ಫುಲ್ಲಾಗಿ ಟೀಸರ್​ ಕಟ್​ ಮಾಡಿದೆ ಚಿತ್ರತಂಡ. ಕೋಟಿಗೊಬ್ಬ ಹೇಳಿಕೇಳಿ ಪಕ್ಕಾ ಆ್ಯಕ್ಷನ್ ಥ್ರಿಲ್ಲರ್​ ಸಿನಿಮಾ. ಆದರೆ, ಆ್ಯಕ್ಷನ್​​ ಜೊತೆಗೆ ಎಲ್ಲಾ ಕಮರ್ಷಿಯಲ್​ ಎಲಿಮೆಂಟ್ಸ್​ ಚಿತ್ರದಲ್ಲಿದೆ ಅನ್ನೋದು ಟೀಸರ್​ ನೋಡುತ್ತಿದ್ರೆ ಗೊತ್ತಾಗುತ್ತಿದೆ.

ಚಿತ್ರದ ಬಿಂದಾಸ್​ ಸಾಂಗ್​​ ಹಿನ್ನಲೆಯಲ್ಲಿ ಚಿತ್ರದ ಒಂದಷ್ಟು ಸನ್ನಿವೇಶಗಳನ್ನ ಸೇರಿಸಿ, ಟೀಸರ್​ ಕಟ್​ ಮಾಡಲಾಗಿದೆ. ಒಂದಷ್ಟು ಫನ್ನಿ ಮೊಮೆಂಟ್ಸ್​ ಜೊತೆಗೆ ನಾಯಕಿ ಮಡೋನ್ನಾ ಅಂದ ಚೆಂದ, ಆಶಿಕಾ ರಂಗನಾಥ್​ ಹೆಜ್ಜೆ ಹಾಕಿರೋ ಸ್ಪೆಷಲ್​ ಡ್ಯಾನ್ಸ್​ ನಂಬರ್​ ಝಲಕ್​ ಕೂಡ ಟೀಸರ್​ನಲ್ಲಿದೆ.

ರಾಮ್​ಬಾಬು ಪ್ರೊಡಕ್ಷನ್ಸ್' ಬ್ಯಾನರ್​ನಲ್ಲಿ ಸೂರಪ್ಪ ಬಾಬು ಕೋಟಿಗೊಬ್ಬ 3 ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಆರ್ಮುಗ ರವಿಶಂಕರ್​​ ನೆಗಟಿವ್​ ಶೇಡ್​ ರೋಲ್​ನಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ಶ್ರದ್ಧಾ ದಾಸ್, ಅಫ್ತಾಬ್​ ಶಿವದಾಸಾನಿ ಮತ್ತು ನವಾಬ್​ ಶಾ ಮುಖ್ಯಭೂಮಿಕೆಯಲ್ಲಿದ್ದಾರೆ.

ಅರ್ಜುನ್​ ಜನ್ಯಾ ಸಂಗೀತ, ಶೇಖರ್​ ಚಂದ್ರ ಛಾಯಾಗ್ರಹಣ ಕೋಟಿಗೊಬ್ಬ-3 ಚಿತ್ರಕ್ಕಿದೆ. ಸದ್ಯ ಸುದೀಪ್​ ಬರ್ತ್​ಡೇ ಸ್ಪೆಷಲ್ಲಾಗಿ ರಿಲೀಸ್​ ಆಗಿರೋ ಟೀಸರ್ ಯೂಟ್ಯೂಬ್​ನಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಒಂದು ಮಿಲಿಯನ್​ಗೂ ಹೆಚ್ಚು ವೀವ್ಸ್​ ಸಾಧಿಸಿ, ಟ್ರೆಂಡಿಂಗ್​ನಲ್ಲಿದೆ. ಸಣ್ಣಪುಟ್ಟ ಕೆಲಸ​ ಬಿಟ್ರೆ, ಸೆನ್ಸಾರ್​ ಕದ ತಟ್ಟಲು ಚಿತ್ರತಂಡ ರೆಡಿಯಾಗಿದೆ. ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿದ್ದಂತೆ ಕೋಟಿಗೊಬ್ಬ-3 ರಿಲೀಸ್​ ಡೇಟ್​ ಅನೌನ್ಸ್​ ಆಗಲಿದೆ.

Next Story

RELATED STORIES