Top

ನಟ ಕಿಚ್ಚ ಸುದೀಪ್​ ಆರೋಗ್ಯದಲ್ಲಿ ಚೇತರಿಕೆ

ಟ್ವೀಟ್​ ಮೂಲಕ ಅಭಿಮಾನಿಗಳಿಗೆ ಸಮಧಾನದ ಸುದ್ದಿ ಕೊಟ್ಟ ಕಿಚ್ಚ

ನಟ ಕಿಚ್ಚ ಸುದೀಪ್​ ಆರೋಗ್ಯದಲ್ಲಿ ಚೇತರಿಕೆ
X

ನಟ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಸಿಕ್ಕಿದ್ದು, ಕೆಲ ದಿನ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ವಾರಂತ್ಯದ ಬಿಗ್​ಬಾಸ್​ನಲ್ಲಿ ನಿಮ್ಮ ಮುಂದೆ ಬರಲು ಕಾತುರನಾಗಿದ್ದೇನೆ. ನನ್ನ ಆರೋಗ್ಯ ಸುಧಾರಣೆಯಲ್ಲಿ ಅತಿ ಕಾಳಜಿ ವಹಿಸಿದ ಡಾ. ವೆಂಕಟೇಶ್​,ಡಾ. ವಿನಯ್​ ಅವರಿಗೆ ಧನ್ಯವಾದಗಳು. ಇನ್ನು ನನ್ನ ಆರೋಗ್ಯ ಸುಧಾರಿಸಲು ಅನೇಕರು ಪೂಜೆ ಸಲ್ಲಿಸಿರುವ ವಿಡಿಯೋ ನೋಡಿದೆ. ಲವ್ ಯೂ ಆಲ್ ಇಷ್ಟೇ ಹೇಳ ಬಲ್ಲೆ ಎಂದಿದ್ದಾರೆ.

ಇನ್ನು ಬಿಗ್​ಬಾಸ್​ ಸೀಜನ್​ 8 ನಿರೂಪಣೆ ನಿರ್ವಹಿಸುತ್ತಿರುವ ಸುದೀಪ್​ ಕಳೆದೆರಡು ವಾರಗಳಿಂದ ವಾರಂತ್ಯ ಶೋಗಳಿಗೆ ಗೈರಾಗಿದ್ದರು. ದೊಡ್ಮನೆಯೊಳಗಿರುವ ಸ್ಪರ್ಧಿಗಳು ಸುದೀಪ್​ ಅವರನ್ನ ಎಷ್ಟು ಮಿಸ್​​ ಮಾಡಿಕೊಂಡ್ರೋ ಅದಕ್ಕೂ ಹೆಚ್ಚಾಗಿ ಅಭಿಮಾನಿಗಳು ಕಿಚ್ಚನ ಗೈರಿನಿಂದ ಬೇಸರವಾಗಿದ್ದರು.

Next Story

RELATED STORIES