Top

ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಸೃಷ್ಟಿಸಿದ 'ಖರಾಬು' ಸಾಂಗ್

151 ಮಿಲಿಯನ್ ವೀಕ್ಷಣೆ ಪಡೆದ ಖರಾಬು ಸಾಂಗ್, ‘ಚುಟು ಚುಟು’ ರೆಕಾರ್ಡ್ ಬ್ರೇಕ್ ಮಾಡಿದ ‘ಖರಾಬು ಸಾಂಗ್​'

ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಸೃಷ್ಟಿಸಿದ ಖರಾಬು ಸಾಂಗ್
X

ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ ಆಭಿನಯದ ಪೊಗರು ಸಿನಿಮಾ ದಿನದಿಂದ ದಿನಕ್ಕೆ ಹೈಪ್​ ಕ್ರಿಯೇಟ್ ಮಾಡ್ತಾನೇ ಇದೆ. ಅದರಲ್ಲೂ ಪೊಗರು ಚಿತ್ರದ ಖರಾಬು ಸಾಂಗ್ ರಿಲೀಸ್​ ಆಗಿ 7 ತಿಂಗಳುಗಳೇ ಕಳೆದ್ರೂ, ಇನ್ನೂ ಅದರ ಹವಾ ಮಾತ್ರ ಕಮ್ಮಿಯಾಗಿಲ್ಲ. ಖರಾಬು ಸಾಂಗ್​ ಯೂಟ್ಯೂಬ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೀತಾನೇ ಇದೆ. ಇದೀಗ ಮತ್ತೊಂದು ರೆಕಾರ್ಡ್​ ಬ್ರೇಕ್ ಮಾಡಿದೆ.

ಈ ಹಾಡು ಬಿಡುಗಡೆಯಾದ ಕೂಡಲೇ ಚಂದನದಲ್ಲಿ ಸೆನ್ಸೇಷನ್ ಸೃಷ್ಟಿಯಾಗಿತ್ತು. ಸಣ್ಣ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಈ ಹಾಡು ಇಷ್ಟುವಾಗಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ಖರಾಬು ಸಾಂಗ್ ಧೂಳೆಬ್ಬಿಸಿತ್ತು. ದಾಖಲೆಗಳ ಮೇಲೆ ದಾಖಲೆ ಬರೆಯಿತು. ಇದೀಗ ಖರಾಬು ಹಾಡು ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ಸ್ಯಾಂಡಲ್​ವುಡ್​ನಲ್ಲಿ ಖರಾಬು ಸಾಂಗ್ ಇತಿಹಾಸವನ್ನೇ ಬರೆದಿದೆ. ಖರಾಬು ಖದರ್​ಗೆ ಯೂಟ್ಯೂಬ್ ಶೇಕ್ ಆಗಿದೆ.

ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹಾಡು ಹಾಗೂ ಡೈಲಾಗ್ ಟ್ರೈಲರ್ ಮೂಲಕವೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಪೊಗಲು ಸಿನಿಮಾದ ಖರಾಬು ಹಾಡು ಚಂದನವನದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಇದೀಗ ಈ ಹಾಡು ಯೂಟ್ಯೂಬ್​​​ನಲ್ಲಿ 151 ಮಿಲಿಯನ್​​ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಮೂಲಕ ರ್ಯಾಂಬೋ ಚಿತ್ರದ ಚುಟು ಚುಟು ಹಾಡಿನ ದಾಖಲೆಯನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ.

ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡು ಎಂಬ ಖ್ಯಾತಿಗೆ ಖರಾಬು ಸಾಂಗ್​ ಪಾತ್ರವಾಗಿದೆ. ಪೊಗರು ಚಿತ್ರದ ಖರಾಬು ಹಾಡನ್ನು ಬರೋಬ್ಬರಿ 15 ಕೋಟಿ ಜನ ಯೂಟ್ಯೂಬ್​ನಲ್ಲಿ ವೀಕ್ಷಣೆ ಮಾಡಿದ್ದಾರೆ. ಅಷ್ಟೆಯಲ್ಲ 10 ಲಕ್ಷಕ್ಕೂ ಹೆಚ್ಚು ಜನ ಈ ಹಾಡಿಕೆ ಲೈಕ್​ ಬಟನ್ ಒತ್ತಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ 150 ಮಿಲಿಯನ್​ ಒಂದು ಹಾಡನ್ನು ವೀಕ್ಷಣೆ ಮಾಡಿದ್ದು ಇದೇ ಮೊದಲು. ಇದಕ್ಕೂ ಮುನ್ನ ಇದಕ್ಕೂ ಮುಂಚೆ ಶರಣ್ ನಟಿಸಿದ್ದ Rambo-2 ಚಿತ್ರದ ಚುಟು ಚುಟು ಹಾಡು ಅತಿ ಹೆಚ್ಚು ವೀಕ್ಷಣೆ ಕಂಡಿತ್ತು. ಇದೀಗ, ಈ ಹಾಡಿನ ದಾಖಲೆಯನ್ನು ಖರಾಬು ಹಾಡು ಮುರಿದಿದೆ. ಇನ್ನು ಪೊಗರು ಸಿನಿಮಾ ರಿಲೀಸ್ ಆಗಿಲ್ಲ

ಪೊಗರು ಚಿತ್ರ ದಿನದಿಂದ ಹೈಪ್​ ಹೆಚ್ಚು ಮಾಡಿಕೊಳ್ಳುತ್ತದೆ. ಖರಾಬು ಹಾಡು ಪೊಗರು ಚಿತ್ರಕ್ಕೆ ಉತ್ತಮ ಅಡಿಪಾಯವನ್ನೇ ಹಾಕಿಕೊಟ್ಟಿದೆ. ಅಂದಹಾಗೆ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ವತಃ ಚಂದನ್ ಶೆಟ್ಟಿ ಸಾಹಿತ್ಯ ರಚಿಸಿದ್ದು, ಖುದ್ದು ಚಂದನ್ ಶೆಟ್ಟಿ ಅವರೇ ಹಾಡಿದ್ದಾರೆ. ಸದ್ಯ 150 ಮಿಲಿಯನ್​​ ದಾಟಿರುವ ಖರಾಬು 200 ಮಿಲಿಯನ್ ವೀಕ್ಷಣೆ ಮೇಲೆ ಕಣ್ಣಿಟ್ಟಿದೆ.

Next Story

RELATED STORIES