Top

ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನದಂದು ಕೆಜಿಎಫ್​ ಚಾಪ್ಟರ್​ 2 ಟೀಸರ್​ ಬಿಡುಗಡೆ

ಕೆಜಿಎಫ್​ ಎರಡನೇ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳಿಗೆ ಉಡುಗೊರೆ

ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನದಂದು ಕೆಜಿಎಫ್​ ಚಾಪ್ಟರ್​ 2 ಟೀಸರ್​ ಬಿಡುಗಡೆ
X

ಕೆಜಿಎಫ್​ ಇಡೀ ಇಂಡಿಯನ್​ ಸಿನಿ ಇಂಡಸ್ಟ್ರಿಯನ್ನೇ ಸ್ಯಾಂಡಲ್​​​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್, ಕನ್ನಡ ಸಿನಿಮಾಗಳ ರೇಂಜನ್ನೇ ಬದಲಾಯಿಸಿ ಬಿಟ್ಟಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2ಗಾಗಿ ಇಡೀ ಭಾರತವೇ ಕಾದು ಕುಳಿತಿದೆ. ಕೆಜಿಎಫ್​​​​​​​ ಸೀಕ್ವೆಲ್​ ಇನ್ನಿಲ್ಲದ ನಿರೀಕ್ಷೆ, ಕುತೂಹಲ ಹುಟ್ಟಾಕ್ಕಿದೆ. ಕೆಜಿಎಫ್​​​​ ಸೀಕ್ವೆಲ್​​ ಬಗ್ಗೆ ಎಕ್ಸ್​​ಪೆಕ್ಟೇಷನ್​​​​ ಎವರೆಸ್ಟ್​​ ಎತ್ತರಕ್ಕೇರಿದೆ. ಯಾವಾಗ ರಾಕಿ ಭಾಯ್​ ವರ್ಸಸ್​​ ಅಧೀರ ಫೈಟ್​​ ಕಣ್ತುಂಬಿಕೊಳ್ತೀವೋ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಅಭಿಮಾನಿಗಳು ನಿರೀಕ್ಷೆಯ ಸಾಗರದಲ್ಲಿ ಮುಳುಗಿರುವಾಗಲೇ ಕೆಜಿಎಫ್​​​ ಟೀಮ್ ಬಿಗ್​ ಸರ್ಫೈಸ್​​ವೊಂದನ್ನ ಕೊಟ್ಟಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದಿದರೆ, ದಸರಾ ಸಂಭ್ರಮಕ್ಕೆ ಕೆಜಿಎಫ್​-2 ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಕೊರೊನಾ ಅನ್ನೋ ಹೆಮ್ಮಾರಿ ಕೆಜಿಎಫ್ ವೈಭವಕ್ಕೆ ಅಡ್ಡಗಾಲು ಹಾಕಿತ್ತು. ಇದೀಗ ಹಲವು ಸವಾಲುಗಳನ್ನು ದಾಟಿಕೊಂಡು ಕೆಜಿಎಫ್ ಟೀಮ್ ಬಿಗ್ ಅಪ್ಡೇಟ್​ವೊಂದನ್ನು ಕೊಟ್ಟಿದೆ. ಕೋಟಿ ಕಂಗಳು ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಕೆಜಿಎಫ್​ ಚಾಪ್ಟರ್​​-2 ಟೀಸರ್​​ ರಿಲೀಸ್​ಗೆ ಮುಹೂರ್ತ ಫಿಕ್ಸ್​ ಆಗಿದೆ.

ಕೆಜಿಎಫ್​​ ಚಾಪ್ಟರ್-​1 ಸಿನಿಮಾ ಬಿಡುಗಡೆಯಾದ ಎರಡು ವರ್ಷಗಳಿಗೆ ಸರಿಯಾಗಿ ಕೆಜಿಎಫ್ ಟೀಮ್, ಅಭಿಮಾನಿಗಳಿಗೆ ಉಡುಗೊರೆ ನೀಡಿದೆ. ಕೆಜಿಎಫ್ ಚಾಪ್ಟರ್ 1 , 2018ರ ಡಿಸೆಂಬರ್ 21 ರಂದು ತೆರೆಕಂಡಿತ್ತು. 2020 ಡಿಸೆಂಬರ್​​ 21ಕ್ಕೆ ಕೆಜಿಎಫ್​​ ರಿಲೀಸ್ ಆಗಿ ಎರಡು ವರ್ಷಗಳು ಕಳೆದು ಹೋಗಿವೆ. ಶೂಟಿಂಗ್​ ಮುಕ್ತಾಯವಾಗಿದ್ದೇ ತಡ, ಕೆಜಿಎಫ್​​ ಎರಡನೇ ವರ್ಷಾಚರಣೆ ಪ್ರಯುಕ್ತ ದೊಡ್ಡದೊಂದು ಅನೌನ್ಸ್​ಮೆಂಟ್​ ಇದೆ ಅಂತ ಪ್ರಶಾಂತ್​ ಟ್ವೀಟ್​ ಮಾಡಿದ್ರು. ಈ ಟ್ವೀಟ್​ ತುಂಬಾನೇ ಕುತೂಹಲ ಕೆರಳಿಸಿತ್ತು. ತುಂಬಾ ಜನ ಟೀಸರ್​​​​ ಬಿಡುಗಡೆಯಾಗಬಹುದು ಅಂತ ನಿರೀಕ್ಷೆ ಇಟ್ಟುಕೊಂಡಿದರು. ಆದರೆ, ಪ್ರಶಾಂತ್ ನೀಲ್ ಟೀಸರ್ ರಿಲೀಸ್ ಡೇಟ್​ ಅನ್ನು ಅನೌನ್ಸ್ ಮಾಡಿದ್ದಾರೆ.

ಮುಂಬರುವ ಜನವರಿ 8ಕ್ಕೆ ಕೆಜಿಎಫ್​ ಚಾಪ್ಟರ್​​-2 ಟೀಸರ್​ ಬಿಡುಗಡೆಯಾಗಲಿದೆ ಎಂದು ಪ್ರಶಾಂತ್ ನೀಲ್ ಘೋಷಣೆ ಮಾಡಿದ್ದಾರೆ. ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್​ ಹುಟ್ಟುಹಬ್ಬವಾಗಿದ್ದು ಅಂದೇ ಮೋಸ್ಟ್​ ಎಕ್ಸ್​ಪೆಕ್ಟೇಟೆಡ್​ ಕೆಜಿಎಫ್ ಚಾಪ್ಟರ್​-2 ಟೀಸರ್​​​ ರಿಲೀಸ್ ಆಗಲಿದೆ. ಸಾಮ್ರಾಜ್ಯದ ಒಂದು ಝಲಕ್. ಇದಕ್ಕಾಗಿ ಒಂದು ವರ್ಷ ಹೆಚ್ಚಿನ ಸಮಯ ಹಿಡಿಯಿತು. ನಿಮ್ಮ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ನಿಮ್ಮ ಮುಂದೆ ಬರ್ತಿವಿ ಅಂತ ಪ್ರಶಾಂತ್ ನೀಲ್​​​​ ಪ್ರಾಮಿಸ್ ಮಾಡಿದ್ದಾರೆ.

ಲಾಕ್​​​ಡೌನ್ ಬಳಿಕ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದ್ದ ಕೆಜಿಎಫ್-2 ಟೀಂ, ಇದೀಗ ಚಿತ್ರೀಕರಣ ಮುಗಿಸಿದೆ. ಈ ಬಗ್ಗೆ ಖುದ್ದು ಚಿತ್ರತಂಡವೇ ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದೆ. ಅನೇಕ ದಿನಗಳಿಂದ ಅಧೀರನಿಗಾಗಿ ಕೆಜಿಎಫ್ ತಂಡ ಕಾಯುತ್ತಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಂಜಯ್ ದತ್ ಚಿಕಿತ್ಸೆ ಪಡೆದು, ಕ್ಯಾನ್ಸರ್ ಗೆದ್ದ ನಂತರ ಕೆಜಿಎಫ್-2 ತಂಡ ಸೇರಿಕೊಂಡಿದ್ದರು.ಕೆಜಿಎಫ್-2 ಸಿನಿಮಾದ ರಾಕಿ ಭಾಯ್ ಮತ್ತ ಅಧೀರ ನಡುವಿನ ಫೈಟ್ ದೃಶ್ಯ ಸೆರೆಹಿಡಿಯಲಾಗಿದೆ. ಭಯಾನಕ ಫೈಟ್ ದೃಶ್ಯಕ್ಕಾಗಿ ಅನೇಕ ದಿನಗಳಿಂದ ತಯಾರಿ ನಡೆಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಹೈದರಾಬಾದ್ ನಲ್ಲಿ ಚಿತ್ರದ ಫೈಟ್ ದೃಶ್ಯ ಶೂಟಿಂಗ್ ಮಾಡಲಾಗಿದೆ ಅಂತ ಕೆಜಿಎಫ್ ಕ್ಯಾಮೆರಾಮೆನ್​​ ಭುವನ್ ಗೌಡ ಟ್ವೀಟ್ ಮಾಡಿದ್ದಾರೆ.

Next Story

RELATED STORIES