Top

ಕೆಜಿಎಫ್​ 2ನಲ್ಲಿ ಯಶ್​ ಜೊತೆ ಹೆಜ್ಜೆ ಹಾಕಲಿರುವ ಬಾಲಿವುಡ್​ ನಟಿ ಯಾರು ಗೊತ್ತಾ..?

ಮೆಹಬೂಬಾ ಸಾಂಗ್​ ರಿ ಕ್ರಿಯೇಟ್​ ಮಾಡ್ತಾರಂತೆ ಕೆಜಿಎಫ್-2​ ತಂಡ

ಕೆಜಿಎಫ್​ 2ನಲ್ಲಿ ಯಶ್​ ಜೊತೆ ಹೆಜ್ಜೆ ಹಾಕಲಿರುವ ಬಾಲಿವುಡ್​ ನಟಿ ಯಾರು ಗೊತ್ತಾ..?
X

ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್​ 2 ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ. ಕೆಜಿಎಫ್​ ಚಾಪ್ಟರ್​ 2ನಲ್ಲಿ ರಾಖಿಭಾಯ್​ ಜೊತೆ ಬಾಲಿವುಡ್​ ಸೂಪರ್​ ಡಾನ್ಸರ್​ ಒಬ್ರು ಹೆಜ್ಜೆ ಹಾಕ್ತಾರೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬರ್ತಿದೆ.

ಇಡೀ ವಿಶ್ವವೇ ಕಾತುರದಿಂದ ಕಾಯ್ತಾ ಇರೋ ಸಿನಿಮಾ ಕೆಜಿಎಫ್​ 2. ಸದ್ಯ ಚಿತ್ರದ ಟೀಸರ್​ ರಿಲೀಸ್​ ಆಗಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡಿದ್ದುಆಯ್ತು. ಅಷ್ಟೇ ಯಾಕೆ ಸಿನಿಮಾ ರಿಲೀಸ್​​ ಡೇಟ್ ಕೂಡ ಚಿತ್ರತಂಡ ಅನೌನ್ಸ್​ ಮಾಡಿದೆ.

ಇದೀಗ ಕೆಜಿಎಫ್​ 2 ಸಿನಿಮಾ ಮತ್ತೊಂದು ಅಪ್​ಡೇಟ್​ ಇಲ್ಲಿದೆ. ಕೆಜಿಎಫ್​ ಚಾಪ್ಟರ್ 1ನಲ್ಲಿ ಹಾಡೊಂದಕ್ಕೆ ರಾಕಿಂಗ್​ ಸ್ಟಾರ್ ಯಶ್​ ಜೊತೆ ಕನ್ನಡದಲ್ಲಿ ತಮ್ಮನ್ನಾ, ಹಾಗೂ ಉಳಿದೆಲ್ಲಾ ಭಾಷೆಗಳಲ್ಲೂ ಮೌನಿರಾಯ್​ ಹೆಜ್ಜೆ ಹಾಕಿದ್ರು. ಕನ್ನಡದಲ್ಲಿ ​ ಜೋಕೆ..ನಾನು ಬಳ್ಳಿಯ ಮಿಂಚು ಹಾಡಿಗೆ ರಿಮಿಕ್ಸ್​ ಮಾಡಿದ್ರೆ, ಹಿಂದಿಯಲ್ಲಿ ಗಲಿ ಗಲಿ ಸಾಂಗ್​ನ್ನ ರಿಮಿಕ್ಸ್​ ಮಾಡಲಾಗಿತ್ತು.

ಇದೀಗ ಕೆಜಿಎಫ್​ ಚಾಪ್ಟರ್ 2 ನಲ್ಲಿ ಇಂತದ್ದೇ ಮತ್ತೊಂದು ಹಳೆಯ ಚಿತ್ರದ ಹಾಡನ್ನ ರಿಮಿಕ್ಸ್​ ಮಾಡಿದ್ದಾರಂತೆ. ಬಿಟೌನ್​ ಸೂಪರ್​ ಸ್ಟಾರ್ ಅಮಿತಾಬ್ ಬಚ್ಚನ್ ನಟನೆಯ ಸೂಪರ್ ಹಿಟ್ ಶೋಲೆ ಸಿನಿಮಾದ ಮೆಹಬೂಬಾ ಮೆಹಬೂಬಾ. ಹಾಡನ್ನು ಈ ಸಿನಿಮಾದಲ್ಲಿ ರಿ ಕ್ರಿಯೇಟ್ ಮಾಡಿದ್ದಾರಂತೆ.

ಅಂದಹಾಗೆ ಈ ರಿಮಿಕ್ಸ್​ ಸಾಂಗ್​ಗೆ ರಾಕಿಂಗ್​ ಸ್ಟಾರ್ ಜೊತೆ ಹೆಜ್ಜೆ ಹಾಕಿರೋದು ಬೇರ್ಯಾರು ಅಲ್ಲ. ಬಾಲಿವುಡ್​ ಡಾನ್ಸ್​ ಕ್ವೀನ್ ನೋರ ಫತೇಹಿ ಅನ್ನಲಾಗ್ತಿದೆ. ಈಗಾಗಲೇ ಹೈದ್ರಾಬಾದ್​ನಲ್ಲಿ ಸಾಂಗ್​ ಶೂಟಿಂಗ್​ ಕೂಡ ಕಂಪ್ಲೀಟ್ ಆಗಿದೆ ಅನ್ನೋ ಮಾತು ಕೂಡ ಕೇಳಿಬರ್ತಿದೆ..

ಕೆಜಿಎಫ್​ 2 ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳು ಹರಿದಾಡ್ತಾನೇ ಇರುತ್ತೆ. ಆದ್ರೆ ಈ ಅಂತೆಕಂತೆಗಳಿಗೆ ಚಿತ್ರತಂಡವೇ ಬ್ರೇಕ್​ ಹಾಕಬೇಕಾಗಿದೆ.

Next Story

RELATED STORIES