Top

ಮಂಗಳೂರಿನಲ್ಲಿ ಕೆಜಿಎಫ್​ 2 ಭರ್ಜರಿ ಶೂಟಿಂಗ್

  • ಮತ್ತೆ ಅಖಾಡಕ್ಕಿಳಿದ ರಾಕಿಭಾಯ್​, ಕಡಲ ಕಿನಾರೆಯಲ್ಲಿ ಶೂಟಿಂಗ್​​
  • ಮುಂಬೈ T0 ಮಂಗಳೂರು.. ಏನಿದು KGF 2 ಸೀಕ್ರೆಟ್..?
  • ಕೆಜಿಎಫ್​ ಸಾಮ್ರಾಜ್ಯದಲ್ಲಿ ಮಂಗಳೂರಿಗೇನು ಲಿಂಕ್..?

ಮಂಗಳೂರಿನಲ್ಲಿ ಕೆಜಿಎಫ್​ 2 ಭರ್ಜರಿ ಶೂಟಿಂಗ್
X

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​​ಪೆಕ್ಡೆಡ್ ಸಿನಿಮಾ ಕೆಜಿಎಫ್ 2 ಶೂಟಿಂಗ್​ ಭರದಿಂದ ಸಾಗುತ್ತಿದೆ. ಬರೋಬ್ಬರಿ 7 ತಿಂಗಳ ಬಳಿಕ ರಾಕಿಭಾಯ್ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಮಂಗಳೂರಿನಲ್ಲಿ ಶೂಟಿಂಗ್​ ನಡೀತಿದ್ದು,ರಾಕಿಭಾಯ್​ ಕಡಲತೀರದ ಕಡೆ ಮುಖ ಮಾಡಿರೋ ಫೋಟೋವೊಂದು ವೈರಲ್​ ಆಗಿದೆ.

ರಾಕಿಭಾಯ್​​​ ಮತ್ತೊಮ್ಮೆ ಅಖಾಡಕ್ಕೆ ಇಳಿದು ಬಿಟ್ಟಿದ್ದಾರೆ. ಅದೇ ಖದರ್​, ಅದೇ ಲುಕ್, ಕಣ್ಣಲ್ಲಿ ಬೆಂಕಿ. ಅಲೆದಾಡುವ ಅಲೆಗಳತ್ತ ದಿಟ್ಟಿಸಿ ನೋಡುತ್ತಿದ್ದಾರೆ ಮುಂಬೈನ ಜಾನ್​. ಕಡಲನಗರಿಯ ಕಡಲ ಕಿನಾರೆಯಲ್ಲಿ ಬೋರ್ಗರೆದು ಬರುತ್ತಿರುವ ಅಲೆಗಳನ್ನು, ಕೆಂಡ ತುಂಬಿರುವ ಕಣ್ಣುಗಳಿಂದ ಸೂಕ್ಷ್ಮವಾಗಿಯೇ ನೋಡುತ್ತಿದ್ದಾರೆ ರಾಕಿಭಾಯ್​. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಯಶ್​ ಕೆಜಿಎಫ್​​-1ರಲ್ಲಿ ಮುಂಬೈ ಕಡಲ ತೀರದಲ್ಲಿ ಅಬ್ಬರಿಸಿದ್ದರು​, ಈ ಬಾರಿ ಹೀಗೆ ನಿಂತಿರೋದು ಮಂಗಳೂರಿನ ಕಡಲ ತೀರದಲ್ಲಿ.

ಮಂಗಳೂರಿನಲ್ಲಿ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೆಜಿಎಫ್​-1ರಲ್ಲಿ ಮುಂಬೈ ಕಡಲ ತೀರದಲ್ಲಿ ಘರ್ಜಿಸಿದ್ದ ರಾಕಿಭಾಯ್, ಈ ಬಾರಿ ಮಂಗಳೂರಿನ ಕಡಲ ತೀರದಲ್ಲಿ ಘರ್ಜಿಸುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್-2ನ ಈ ಶೂಟಿಂಗ್​ ಸ್ಪಾಟ್​ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ಬಂದರಿನಲ್ಲಿ ಸಲಾಂ ರಾಕಿ ಭಾಯ್ ಅಂತಾ ಮೆರೆದಿದ್ದ ಯಶ್​ ಚಾಪ್ಟರ್​-2ನಲ್ಲಿ ಮಂಗಳೂರಿಗೆ ಶಿಫ್ಟ್​ ಆಗೋದಕ್ಕೆ ಕಾರಣವೇನು ಅನ್ನೋ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿವೆ.

ಮುಂಬೈ ಹಾಗೂ ಮಂಗಳೂರಿಗೆ ಹಿಂದಿನ ಕಾಲದಿಂದಲೂ ಕೂಡ ನಂಟಿದೆ. ಎರಡು ನಗರಗಳು ಸಮುದ್ರದ ಬುಡದಲ್ಲಿವೆ. ಮುಂಬೈ ಹಾಗೂ ಮಂಗಳೂರಿಗೆ ಅಂಡರ್​ವಲ್ಡ್​ ಲಿಂಕ್​ ತುಂಬಾನೇ ಇದೆ. ಕೆಜಿಎಫ್​ ಸಿನಿಮಾ ಕೂಡ ಇದೇ ಅಂಡರ್​​ವರ್ಲ್ಡ್ ಆ್ಯಂಗಲ್​ನಲ್ಲಿ ಸಾಗೋದ್ರಿಂದ ,ರಾಕಿಭಾಯ್​ ಮಂಗಳೂರಿನ ಅಧ್ಯಾಯ ಶುರುವಾಗಬಹುದಾ ಅನ್ನೋ ಬಗ್ಗೆ ಸಹಜವಾಗಿ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ಸಿಗಬೇಕು ಅಂದ್ರೆ ಇನ್ನು ಹಲವು ತಿಂಗಳು ನೀವು ಕಾಯಲೇಬೇಕು.

ಇನ್ನು 7 ತಿಂಗಳ ಬಳಿಕ ಕೆಜಿಎಫ್​ 2 ಶೂಟಿಂಗ್​ ಸೆಟ್​ಗೆ ಹಾಜರಾಗಿದ್ದಾರೆ ಯಶ್​. ಈಗಾಗಲೇ ಕೆಜಿಎಫ್​ 2 ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇಷ್ಟು ದಿನ ಪ್ರಕಾಶ್​ ರೈ, ಮಾಳವಿಕಾ ಅವಿನಾಶ್,ಹಾಗೂ ಉಳಿದ ಕಲಾವಿದರ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಗುರುವಾರದಿಂದ ರಾಕಿಂಗ್​ ಸ್ಟಾರ್​ ಪೋರ್ಶನ್​ನ್ನ ಶೂಟ್ ಮಾಡಲಾಗುತ್ತಿದೆ. ಹೀಗಾಗಿ ಚಿತ್ರತಂಡದಲ್ಲಿ ಮತ್ತಷ್ಟು ಜೋಶ್​ ಬಂದಿದೆ.

ರಾಕಿಭಾಯ್​ ಕೆಜಿಎಫ್​ 2 ಅಖಾಡಕ್ಕೆ ಇಳಿದಿದ್ದು, ಕೆಜಿಎಫ್​ 2 ಸೆಟ್ ಮತ್ತಷ್ಟು ರಂಗೇರಲಿದೆ. ಚಿತ್ರದ ಶೂಟಿಂಗ್​ ಈ ತಿಂಗಳ ಅಂತ್ಯಕ್ಕೆ ಕಂಪ್ಲೀಟ್ ಆಗಲಿದ್ದು, ದಸರಾ ಹಬ್ಬಕ್ಕೆ ಕೆಜಿಎಫ್​ 2 ಟೀಸರ್ ನಿರೀಕ್ಷೆಯಲ್ಲಿದ್ದಾರೆ ಸಿನಿಪ್ರಿಯರು.

Next Story

RELATED STORIES