Top

ಅಪ್ಪಿತಪ್ಪಿ ಪ್ರೂವ್ ಆಗೋದ್ರೆ ನೀವು ಅವನನ್ನ ಕರ್ಕೊಂಡು ಬಂದು ಶಿಕ್ಷೆ ಕೊಡೋಕೆ ಆಗುತ್ತಾ - ನಟ ದರ್ಶನ್

ಸತ್ತವರ ಬಗ್ಗೆ ಯಾವುದೇ ಕೆಟ್ಟ ವಿಚಾರ ಮಾತನಾಡಬಾರದು ಎಂದು ನಮ್ಮ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ.

ಅಪ್ಪಿತಪ್ಪಿ ಪ್ರೂವ್ ಆಗೋದ್ರೆ ನೀವು ಅವನನ್ನ ಕರ್ಕೊಂಡು ಬಂದು ಶಿಕ್ಷೆ ಕೊಡೋಕೆ ಆಗುತ್ತಾ - ನಟ ದರ್ಶನ್
X

ದಾವಣಗೆರೆ: ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ವಿಷಯ ಹೊರಗೆ ಬರುತ್ತೆ, ಆಮೇಲೆ ಮಾತನಾಡಬಹುದು ಎಂದು ಸ್ಯಾಂಡಲ್​ವುಡ್​ ನಟ ದರ್ಶನ್ ಅವರು ಡ್ರಗ್ಸ್​ ಮಾಫಿಯಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣೆಗೆರೆಯ ಶಾಮನೂರು ಗೆಸ್ಟ್​​ಹೌಸ್​ನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಆ ನಟ, ಈ ನಟ ನೀವೇ ಏನಕ್ಕೆ ಹೇಳುತ್ತೀರಿ(?) ಒಂದು ಕ್ಲಾಸ್​ನಲ್ಲಿ ರ್ಯಾಂಕ್ ಸ್ಟೂಡೆಂಟೂ ಇರುತ್ತಾನೆ. ಜೀರೋ ತಗೆಯೋನು ಇರುತ್ತಾನೆ. ಇಡಿ ಕ್ಲಾಸ್ ಜೀರೋ ಅನ್ನೋಕೆ ಆಗುತ್ತಾ(?) ಇಡೀ ಸ್ಯಾಂಡಲ್​ವುಡ್​ ಬಗ್ಗೆ ಹೇಳಬೇಡಿ. ನಿಮ್ಮ ಮೀಡಿಯಾದಲ್ಲಿ ಇಲ್ವಾ(?) ಎಂದು ನಟ ದರ್ಶನ್ ಅವರು ಮಾಧ್ಯಮದವರನನ್ನು ಪ್ರಶ್ನೆ ಮಾಡಿದರು.

ಸದ್ಯ ನೀವೇ ಡ್ರಗ್ ಪೆಡ್ಲರ್ ಕಾಣುತ್ತಿದ್ದೀರಾ(?) ಅಂತ ಹೇಳಿದ್ರ ನೀವು ಒಪ್ಪೊಕೊಳ್ಳುತ್ತೀರಾ(?) ಇನ್ನೊಬ್ಬರ ಬಗ್ಗೆ ಮಾತನಾಡಲ್ಲ, ಜಸ್ಟ್​ವೇಟ್​ ಅಂಡ್ ವಾಚ್(!) ಎಲ್ಲಾ ಇನ್ವೆಸ್ಟಿಗೇಷನ್ ನಡೀಲಿ. ಕ್ವಶ್ಚೆನ್ ಮಾರ್ಕ್ಸ್ ಬೇಡ. ಸ್ಯಾಂಡಲ್​ವುಡ್​ನಲ್ಲಿ ಅಂತಹದ್ದೇನು ಇಲ್ಲ. ನಾನು 26 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ಇದು ಸ್ಯಾಂಡಲ್​ವುಡ್​ಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಕಳಂಕ. ಎಂದರು.

ಚಿರು ಮೃತಪಟ್ಟು 3 ತಿಂಗಳಾಗಿದೆ. ಈಗ ಅದರ ಬಗ್ಗೆ ಫೋಸ್ಟ್ ಮಾರ್ಟಂ ಮಾಡುವುದು ಸರಿಯಲ್ಲ. ಅಪ್ಪಿತಪ್ಪಿ ಪ್ರೂವ್ ಆದ್ರೆ ಅವನಿಗೆ ಶಿಕ್ಷೆ ಕೊಡೋಕೆ ಆಗುತ್ತಾ(?) ಸತ್ತವರ ಬಗ್ಗೆ ಯಾವುದೇ ಕೆಟ್ಟ ವಿಚಾರ ಮಾತನಾಡಬಾರದು ಎಂದು ನಮ್ಮ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ. ಸತ್ತ ನಂತರ ಒಳ್ಳಯದೇ ಮಾತಾನೋಡೋಣ ಕೆಟ್ಟದ್ದು ಬೇಡ. ಒಂದು ವಾರದಲ್ಲಿ ಯಾವ್ಯಾವುದೋ ತೊಳೆದು ಹೋಗುತ್ತೇ ಗೊತ್ತಾಗಲ್ಲ ಎಂದು ನಟ ದರ್ಶನ್​ ಅವರು ಮಾತನಾಡಿದ್ದಾರೆ.

Next Story

RELATED STORIES