Top

'ತೇಜಸ್'​ನಲ್ಲಿ ಹಾರೋಕೆ ರೆಡಿಯಾಗುತ್ತಿದ್ದಾರೆ ಕಂಗನಾ ರಣಾವತ್​

ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಡೇರಿಂಗ್ ಗರ್ಲ್

ತೇಜಸ್​ನಲ್ಲಿ ಹಾರೋಕೆ ರೆಡಿಯಾಗುತ್ತಿದ್ದಾರೆ ಕಂಗನಾ ರಣಾವತ್​
X

ಬಾಲಿವುಡ್​ ಕ್ವೀನ್​ ಕಂಗನಾ ರಣಾವುತ್​ ಸದ್ಯ ಪೈಲೆಟ್​ ಆಗಿ ವಿಮಾನ ಹಾರಿಸೋಕ್ಕೆ ರೆಡಿಯಾಗಿದ್ದಾರೆ. ಪೈಲೆಟ್ ಜಾಕೆಟ್ ತೊಡೋಕ್ಕು ಮುನ್ನ ರಕ್ಷಣಾ ಸಚಿವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಕಂಗನಾ ರಣಾವತ್. ಬಾಲಿವುಡ್​ನ ಕ್ವೀನ್​. ಡೇರಿಂಗ್ ಗರ್ಲ್​​. ಏನೇ ಆಗ್ಲಿ ನೇರವಾಗಿ ಹೇಳುವ ಗಟ್ಟಿಗಿತ್ತಿ. ಅದ್ರಲ್ಲೂ ಸುಶಾಂತ್​​ ಸಿಂಗ್ ಆತ್ಮಹತ್ಯೆ ಕೇಸ್ ವಿಚಾರದಲ್ಲಿ ಕಂಗನಾ ರಣಾವತ್ ಹಲವಾರು ವಿಚಾರವನ್ನು ಬಹಿರಂಗ ಪಡಿಸಿದರು. ನೆಪೋಟಿಸಮ್ ವಿರುದ್ಧ ಕೆಂಡವಾಗಿದರು. ಈ ವಿಚಾರ ಹಲವು ಕಾಂಟ್ರವರ್ಸಿಗೂ ಕೂಡ ಕಾರಣವಾಗಿತ್ತು. ಇದೀಗ ಕಂಗನಾ ರಣಾವತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಭಾರತದ ವಾಯುಪಡೆಯ ಹೆಮ್ಮೆ ತೇಜಸ್​ನಲ್ಲಿ ಹಾರೋಕೆ ಕಂಗನಾ ರೆಡಿಯಾಗುತ್ತಿದ್ದಾರೆ. ಅದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನ್ನು ಕೂಡ ಭೇಟಿಯಾಗಿದ್ದಾರೆ.

ಅರೇ ಇದೇನಿದು ಕಂಗನಾ ಸಿನಿಮಾ ಬಿಟ್ಟು ಪೈಲೆಟ್​ ಆಗ್ತಿದ್ದಾರೆ. ರಕ್ಷಣಾ ಸಚಿವರನ್ನು ಭೇಟಿಯಾಗುತ್ತಿದ್ದಾರೆ ಅಂದ್ರೆ ವಾಯುಪಡೆ ಸೇರುವ ಪ್ಲಾನ್ ಮಾಡಿಕೊಂಡಿದ್ದಾರಾ(?) ದೇಶಿ ನಿರ್ಮಿತ ತೇಜಸ್ ಯುದ್ಧವಿಮಾನವನ್ನೇ ಹಾರಿಸ್ತಾರಾ(?) ಅನ್ನೋ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಕಂಗನಾ ಇಷ್ಟೆಲ್ಲಾ ಮಾಡ್ತಿರೋದು ತಮ್ಮ ಮುಂದಿನ ಸಿನಿಮಾಗಾಗಿ, ಕಂಗನಾ ತಮ್ಮ ಮುಂದಿನ ಸಿನಿಮಾ 'ತೇಜಸ್'ಗಾಗಿ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.

ರಾಜನಾಥ್​ ಸಿಂಗ್ ಭೇಟಿ ಕುರಿತು ಟ್ವೀಟ್ ಮಾಡಿರುವ ಕಂಗನಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇವೆ. ಈ ವೇಳೆ ತೇಜಸ್ ಸಿನಿಮಾದ ಸ್ಕ್ರಿಪ್ಟ್​ ಅನ್ನ ಇಂಡಿಯನ್ ಏರ್​ಫೋರ್ಸ್​ನೊಂದಿಗೆ ಹಂಚಿಕೊಳ್ಳಲಾಗಿದೆ. ಜೊತೆಗೆ ಸಿನಿಮಾಗೆ ಕೆಲವು ಅನುಮತಿಯನ್ನ ಕೋರಲಾಗಿದೆ. ಜೈ ಹಿಂದ್ ಅಂತಾ ಬರೆದುಕೊಂಡಿದ್ದಾರೆ.

ಸರ್ವೇಶ್ ಮೇವಾರ್ ನಿರ್ದೇಶನದ ಈ ಸಿನಿಮಾದಲ್ಲಿ ಕಂಗನಾ ವಾಯಸೇನೆಯ ಪೈಲಟ್ ಪಾತ್ರವನ್ನು ಮಾಡಿದ್ದಾರೆ. ತೇಜಸ್ ಸಿನಿಮಾವನ್ನು ವಿಕ್ಕಿ ಕೌಶಲ್ ಅಭಿನಯದ ಉರಿ, ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ಮಾಪಕರೇ ನಿರ್ಮಿಸುತ್ತಿರುವುದು ವಿಶೇಷ. ಅನುಮತಿ ಸಿಕ್ಕ ಬಳಿಕ ಸಿನಿಮಾ ಶೂಟಿಂಗ್ ಶುರುವಾಗಲಿದೆ.

ತೇಜಸ್​ ಯುದ್ಧ ವಿಮಾನ ಭಾರತದ ವಾಯುಪಡೆಯ ಹೆಮ್ಮೆಯ ಪ್ರತೀಕ. ಇದು ದೇಸಿ ನಿರ್ಮಿತ ಯುದ್ಧ ವಿಮಾನ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಇದನ್ನು ಬೆಂಗಳೂರಿನ ಹೆಚ್​ಎಎಲ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ ಬಾರಿ ಈ ಲಘು ಯುದ್ಧ ವಿಮಾನದಲ್ಲಿ ಸ್ವತಃ ರಾಜನಾಥಸಿಂಗ್​ ಕುಳಿತು ಹಾರಾಟ ನಡೆಸಿದರು. ಈಗ ಇದೇ ಯುದ್ಧ ವಿಮಾನದ ಕುರಿತು ಸಿನಿಮಾ ಬರಲಿದೆ. ಈ ಸಿನಿಮಾದಲ್ಲಿ ತೇಜಸ್​ ಯುದ್ಧ ವಿಮಾನವನ್ನು ಕಂಗನಾ ಹಾರಿಸಲಿದ್ದಾರೆ.

ಕಂಗನಾ ರಣಾವತ್ ಸದಾ ಡಿಫರೆಂಟ್​ ಕಥೆಯನ್ನ ಆಯ್ದುಕೊಳ್ತಾರೆ. ಈ ಹಿಂದೆ ಮಣಿಕರ್ಣಿಕಾ ಸಿನಿಮಾದಲ್ಲಿ ಕಂಗನಾ ಮಿಂಚಿದರು. ಝಾನ್ಸಿ ರಾಣಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದರು. ಇದಾದ ನಂತರ ಮತ್ತೊಂದು ದೇಶಪ್ರೇಮದ ಕಥೆಯನ್ನು ಆಯ್ದುಕೊಂಡಿದ್ದಾರೆ. ಸದ್ಯಕ್ಕೆ ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾದಲ್ಲಿ ಕಂಗನಾ ಬ್ಯುಸಿಯಾಗಿದ್ದಾರೆ. ತಲೈವಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಬಳಿಕ ತೇಜಸ್​ ಟೇಕಾಫ್ ಆಗಲಿದೆ. ಕಂಗನಾರನ್ನ ಪೈಲೆಟ್​ ಜಾಕೆಟ್​ನಲ್ಲಿ ನೋಡಲು ಅಭಿಮಾನಿಗಳು ಕಾತರಾಗಿದ್ದಾರೆ.

Next Story

RELATED STORIES