Top

66ನೇ ವಸಂತಕ್ಕೆ ಕಾಲಿಟ್ಟ ಕಮಲ್​ ಹಾಸನ್

  • ಲೆಜೆಂಡರಿ ಆ್ಯಕ್ಟರ್​ಗೆ ಹುಟ್ಟುಹಬ್ಬದ ಸಂಭ್ರಮ
  • ಉಳಗನಾಯಗನ್​ ಅದ್ದೂರಿ ಬರ್ತ್​ಡೇಗೆ ಕೊರೊನಾ ಬ್ರೇಕ್
  • ಸೋಶಿಯಲ್​ ಮೀಡಿಯಾದಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮ
  • ಕಮಲ್​ ಹಾಸನ್​ಗೆ ವಿಶ್​ ಮಾಡಿದ ಕಿಚ್ಚ ಸುದೀಪ್

66ನೇ ವಸಂತಕ್ಕೆ ಕಾಲಿಟ್ಟ ಕಮಲ್​ ಹಾಸನ್
X

ಕಾಲಿವುಡ್​ ಉಳಗನಾಯಗನ್​ಗೆ ಇಂದು 66 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕೊರೊನಾ ಸಮಸ್ಯೆಯಿಂದ ಕಮಲ್​ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್​ ಬಿದ್ದಿದ್ದು, ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕವೇ ನೆಚ್ಚಿನ ನಟನ ಬರ್ತ್​ಡೇಯನ್ನ ಸೆಲೆಬ್ರೇಟ್ ಮಾಡುತ್ತಿದ್ದಾರೆ.

ಕಮಲ್​​​ ಹಾಸನ್​​ ಭಾರತೀಯ ಚಿತ್ರರಂಗದ ಮೇರು ಪ್ರತಿಭೆ, ಸಕಲಕಲಾವಲ್ಲಭ, ಲೆಜೆಂಡರಿ ನಟ, ವರ್ಸಟೈಲ್​ ಆ್ಯಕ್ಟರ್, ಈ ಅಪ್ರತಿಮ ಕಲಾವಿದ ಇದೀಗ 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 61 ವರ್ಷಗಳಲ್ಲಿ ವಿವಿಧ ಹಾಗೂ ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಕಮಲ್​ ಹಾಸನ್​ ಬರ್ತ್​ ಡೇ ಸೆಲೆಬ್ರೇಷನ್​ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಈ ಬಾರಿ ಕೊರೊನಾ ಸಮಸ್ಯೆಯಿಂದ ಕಮಲ್​ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್​ ಬಿದ್ದಿದ್ದು, ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕವೇ ನೆಚ್ಚಿನ ನಟನ ಬರ್ತ್​ಡೇಯನ್ನ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕಮಲ್​ ಫೋಟೋ ಮತ್ತು ವಿಡಿಯೋಗಳನ್ನ ಶೇರ್​ ಮಾಡ್ತಾ ನೆಚ್ಚಿನ ನಟನಿಗೆ ದೂರದಿಂದಲೇ ಶುಭಾಶಯ ತಿಳಿಸ್ತಾ ಇದ್ದಾರೆ. ರೀಸೆಂಟಾಗಿ ಕಮಲ್​ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯೊಂದನ್ನ ಸ್ವತಃ ಪುತ್ರಿ ಶ್ರುತಿ ಹಾಸನ್​ ಬಿಡುಗಡೆ ಮಾಡಿದರು.

ಕಿಚ್ಚ ಸುದೀಪ್​​ಗೆ ಕಮಲ್ ಹಾಸನ್ ಅಂದ್ರೆ ತುಂಬಾ ಇಷ್ಟ. ನೆಚ್ಚಿನ ನಟನಿಗೆ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ವಿಶ್​ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಕಮಲ್ ಹಾಸನ್ ಸರ್' ಎಂದು ವಿಶ್ ಮಾಡುವ ಜೊತೆಗೆ ಕಮಲ್ ಹಾಸನ್ ಫೋಟೋವನ್ನು ಶೇರ್ ಮಾಡಿದ್ದಾರೆ. ರಾಯಲ್ ಲುಕ್ ನಲ್ಲಿ ಕುಳಿತಿರುವ ಕಮಲ್ ಫೋಟೋ ಹಂಚಿಕೊಂಡಿದ್ದಾರೆ.

ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾರಂಗದಲ್ಲೂ ಕಮಲ್​​​ ಮಿಂಚಿದ್ದಾರೆ. ಹೀಗಾಗಿ ಎಲ್ಲಾ ಭಾಷೆಯ ಅಭಿಮಾನಿಗಳು, ಗಣ್ಯರು ಕಮಲ್ ಹಾಸನ್​​​ಗೆ ವಿಶ್ ಮಾಡುತ್ತಿದ್ದಾರೆ. ಪ್ರೀತಿಯ ತಂದೆಗೆ ಶ್ರುತಿ ಹಾಸನ್‌ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಅಪ್ಪನ ಜೊತೆಗೆ ಇರುವ ತಮ್ಮ ಬಾಲ್ಯದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಕಮಲ್ ಹಾಸನ್ ಸದ್ಯ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ಹುಟ್ಟುಹಾಕಿರುವ ಕಮಲ್ ಮುಂಬರುವ ತಮಿಳುನಾಡು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಹಾಗಾಗಿ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಕಮಲ್ ರಾಜಕೀಯರಂಗದಲ್ಲಿ ಸಕ್ರೀಯರಾಗಿದ್ದಾರೆ. 2021ರ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಕೂಡ ದಟ್ಟವಾಗಿದೆ.

Next Story

RELATED STORIES