Top

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಜಲ್ ಅಗರ್​​​​​ವಾಲ್​

ಗೆಳೆಯನ ಜೊತೆ ಸಪ್ತಪದಿ ತುಳಿದ ಸೌತ್ ಬ್ಯೂಟಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಜಲ್ ಅಗರ್​​​​​ವಾಲ್​
X

ಟಾಲಿವುಡ್​​ ಸ್ಟಾರ್​ ನಟಿ ಕಾಜಲ್​ ಅಗರ್​ವಾಲ್​ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಸದ್ಯ ಕಾಜಲ್​ ಮೆಹಂದಿ, ಅರಿಶೀನ ಶಾಸ್ತ್ರ, ಹಾಗೂ ಮದುವೆಯ ಫೋಟೋಗಳು ಸೋಶೀಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ದಕ್ಷಿಣ ಭಾರತದ ಪ್ರಖ್ಯಾತ ನಟಿ ಕಾಜಲ್​​ ಅಗರ್​ವಾಲ್​​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರಗಳಲ್ಲಿ ಮಿಂದೆದ್ದಿದ್ದ ಕಾಜಲ್, ಉದ್ಯಮಿ ಗೌತಮ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮುಂಬೈನ ತಾಜ್​ ಹೋಟೆಲ್‌ನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಗೌತಮ್ ಖ್ಯಾತ ನಟಿ ಕಾಜಲ್ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಮದುಮಗಳು ಕಾಜಲ್ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದರೆ, ಪತಿ ಗೌತಮ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ತಾಜ್​ ಹೋಟೆಲ್​ನಲ್ಲಿ ಹಾಕಿದ್ದ ಅದ್ಧೂರಿ ಸೆಟ್​ನಲ್ಲಿ ಸಿಂಪಲ್​ ಆಗಿ ಮದುವೆ ನೆರವೇರಿದೆ. ಕಾಜಲ್ ಮದುವೆಗೆ ಕೆಲವೇ ಕೆಲವು ಮಂದಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.

ಇನ್ನು ಬುಧವಾರ ಕಾಜಲ್ ಮನೆಯಲ್ಲಿ ಮೆಹಂದಿ ಶಾಸ್ತ್ರದ ಸಂಭ್ರಮ ಜೋರಾಗಿತ್ತು. ಮದುಮಗಳು ಕಾಜಲ್ ಮದರಂಗಿ ಹಾಕಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದರು. ಎರಡೂ ಕೈಗೆ ಮೆಹಂದಿ ಹಾಕಿ ಕ್ಯಾಮರಾಗೆ ಪೋಸ್ ನೀಡಿದರು. ಮೆಹಂದಿ ಶಾಸ್ತ್ರದಲ್ಲಿ ಸ್ನೇಹಿತೆಯರು, ಕುಟುಂಬದವರ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ ಕಾಜಲ್.

ಪಂಜಾಬಿ ಕುಟುಂಬಕ್ಕೆ ಸೇರಿದ ಕಾಜಲ್ ಅಗರ್​​ವಾಲ್, 2007ರಲ್ಲಿ ತೆಲುಗಿನ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗಿನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೇ ಹೆಚ್ಚು ಸಕ್ರಿಯರಾದರು.

ಮಗಧೀರ, ಡಾರ್ಲಿಂಗ್, ಆರ್ಯ 2, ಮಿಸ್ಟರ್​ ಪಫೆಕ್ಟ್, ಸಿಂಗಂ, ಬ್ಯುಸ್ನೆಸ್ ಮ್ಯಾನ್, ತುಪಾಕಿ, ಬಾದ್​ಷಾ, ಟೆಂಪರ್, ಮಾರಿ, ಜನತಾ ಗ್ಯಾರೇಜ್, ನೇನೇ ರಾಜು ನೇನೆ ಮಂತ್ರಿ, ಸೀತ, ಇಂಡಿಯನ್ 2, ಪ್ಯಾರಿಸ್ ಪ್ಯಾರಿಸ್ ಸೇರಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಜಲ್ ಅಗರ್​​ವಾಲ್ ನಟಿಸಿದ್ದಾರೆ. ಇದೀಗ ಈ ಬ್ಯೂಟಿ ಜೀವನದ ಮತ್ತೊಂದು ಘಟ್ಟಕ್ಕೆ ಕಾಲಿಟ್ಟಿದ್ದು. ಕಾಜಲ್ ಅಗರ್​ವಾಲ್ ವೈಯಕ್ತಿಕ ಜೀವನ ಸಂತೋಷವಾಗಿರಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Next Story

RELATED STORIES