Top

ತಂದೆಯ ಫೋಟೋದೊಂದಿಗೆ ಜೂ.ಚಿರು ತೊದಲು ಮಾತು

ತಂದೆಯೊಂದಿಗೆ ಮಗನ ಸಂಭಾಷಣೆಯ ವಿಡಿಯೋ ಹಂಚಿಕೊಂಡ ನಟಿ ಮೇಘನಾ

ತಂದೆಯ ಫೋಟೋದೊಂದಿಗೆ ಜೂ.ಚಿರು ತೊದಲು ಮಾತು
X

ನಟಿ ಮೇಘನಾ ರಾಜ್​ ತಮ್ಮ ಮಗ ಜೂನಿಯರ್​ ಚಿರು ಫೋಟೋವನ್ನು ಹಾಗೂ ತಮ್ಮ ತಾಯ್ತನ ಖುಷಿಯನ್ನು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚಿಗಷ್ಟೇ ತಮ್ಮ ಮಗು ಜೂನಿಯರ್​ ಚಿರುಗೆ 6 ತಿಂಗಳು ತುಂಬಿದ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಕೂಡ ಚಿಂಟುವಿನ ಮುದ್ದಾದ ಫೋಟೋ ನೋಡಿ ಸೋ ಕ್ಯೂಟ್​ ಎಂದಿದ್ದಿದ್ದರು. ಇದೀಗ ಖುಷಿಯ ಜೊತೆಗೆ ಒಂದು ಭಾವುಕ ಕ್ಷಣವನ್ನು ಮೇಘನಾ ಹಂಚಿಕೊಂಡಿದ್ದಾರೆ.

ಜೂನಿಯರ್​ ಚಿರು ಚಿಂಟೂ ಅಂತಾನೂ ಫೇಮಸ್​, ಆರು ತಿಂಗಳು ತುಂಬಿರುವ ಚಿಂಟು ತಂದೆಯ ಫೋಟೋದೊಂದಿಗೆ ಮಾತನಾಡುವ ವಿಡಿಯೋವನ್ನು ಮೇಘನಾ ಶೇರ್​ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಫೋಟೋದೊಂದಿಗೆ ಜೂನಿಯರ್​ ಚಿರು ತೊದಲು ನುಡಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

Next Story

RELATED STORIES