Top

ಜೇಮ್ಸ್​ ಶೂಟಿಂಗ್​​ ವೇಳೆ ಅಂಜನಾದ್ರಿ ಬೆಟ್ಟ ಹತ್ತಿದ ಪವರ್​ಸ್ಟಾರ್

600 ಮೆಟ್ಟಿಲುಗಳನ್ನೇರಿ ಆಂಜನೇಯಸ್ವಾಮಿ ದರ್ಶನ ಪಡೆದ ಅಪ್ಪು

ಜೇಮ್ಸ್​ ಶೂಟಿಂಗ್​​ ವೇಳೆ ಅಂಜನಾದ್ರಿ ಬೆಟ್ಟ ಹತ್ತಿದ ಪವರ್​ಸ್ಟಾರ್
X

ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಜೇಮ್ಸ್​ ಸೆಕೆಂಡ್ ಶೆಡ್ಯೂಲ್​ ಶೂಟಿಂಗ್​ಗಾಗಿ ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದು ಗೊತ್ತೇಯಿದೆ. ಶೂಟಿಂಗ್​ ಫ್ರೀ ಟೈಮ್​ನಲ್ಲಿ ಒಂದಷ್ಟು ಜಾಗಗಳಿಗೆ ಭೇಟಿ ಕೊಟ್ಟಿದ್ದ ಅಪ್ಪು, ಅಂಜನಾದ್ರಿ ಬೆಟ್ಟ ಹತ್ತಿ, ದೇವರ ದರ್ಶನ ಪಡೆದಿದರು. ಇದೀಗ ಸ್ವತಃ ಅಪ್ಪು ಆ ವಿಡಿಯೋ ಶೇರ್​ ಮಾಡಿದ್ದಾರೆ.

ಜೇಮ್ಸ್ ಶೂಟಿಂಗ್​​ಗಾಗಿ ಹೊಸಪೇಟೆ, ಕೊಪ್ಪಳ, ಗಂಗಾವತಿ ಹೀಗೆ ಉತ್ತರ ಕರ್ನಾಟಕದ ಕೆಲವು ಕಡೆ ಬೇಟಿ ನೀಡಿದರು ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್. ಶೂಟಿಂಗ್​ ಬಿಡುವಿನ ವೇಳೆಯಲ್ಲಿ ಸ್ಥಳೀಯ ಪೊಲೀಸರು ಆಯೋಜಿಸಿದ್ದ ಕೊರೊನಾ ಜಾಗೃತಿ , ಮಾಸ್ಕ್ , ಹೆಲ್ಮೆಟ್ ಜಾಗೃತಿಯಂತಹ ಸಾಮಾಜಿಕ ಕಾರ್ಯಗಳಲ್ಲೂ ಭಾಗವಹಿಸಿದರು ಅಪ್ಪು.

ಇನ್ನು ಸಮಾಜಿಕ ಕೆಲಸಗಳ ಜೊತೆಗೆ ತುಂಗ ಭದ್ರಾ ಡ್ಯಾಂ, ಅಂಜನಾದ್ರಿ ಬೆಟ್ಟದಂತಹ ಪ್ರವಾಸಿ ತಾಣಗಳಲ್ಲೂ ಸುತ್ತಾಡಿ ಬಂದಿದ್ರು ಪುನೀತ್​ ರಾಜ್​ಕುಮಾರ್. ಅದಾಗಲೇ ಅಪ್ಪು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದ ಪೋಟೋಗಳು ಕೂಡ ವೈರಲ್​ ಆಗಿದ್ವು.ಇದೀಗ ಬಹುದಿನಗಳ ನಂತ್ರ ಪವರ್​ಸ್ಟಾರ್ ಬೆಟ್ಟ ಹತ್ತಿ ಆಂಜನೇಯ ಸ್ವಾಮಿ ದರ್ಶನ ಪಡೆದ ವಿಡಿಯೋವನ್ನ ಶೇರ್​ ಮಾಡಿದ್ದಾರೆ.

ಅಂಜನಾದ್ರಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದು, ಒಂದಷ್ಟು, ಹನುಮ ಸ್ವರೂಪರಾದ ಕೋತಿಗಳಿಗೆ ಬಾಳೆಹಣ್ಣನ್ನ ನೀಡಿದ್ದಾರೆ ಹಾಗೂ ಅಭಿಮಾನಿಗಳನ್ ಭೇಟಿ ಮಾಡಿ, ಸೆಲ್ಫಿ ಕೊಟ್ಟಿದ್ದಾರೆ. ಅಂದ್ಹಾಗೇ ಈ ವಿಡಿಯೋವನ್ನ ಪಿಆರ್​ಕೆ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು, ಸಖತ್​ ವೈರಲ್​ ಆಗಿದೆ.

Next Story

RELATED STORIES