Top

ಜೇಮ್ಸ್​ಗೆ ನಾಯಕಿ ಸಿಕ್ಕಾಯ್ತು​; ಮತ್ತೆ ಒಂದಾದ ರಾಜಕುಮಾರ ಜೋಡಿ

ಜೇಮ್ಸ್​ ಚಿತ್ರಕ್ಕೆ ತೆಲುಗು ತಮಿಳು ಮಲೆಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಪ್ರಿಯಾ ಆನಂದ್​ ನಾಯಕಿ.

ಜೇಮ್ಸ್​ಗೆ ನಾಯಕಿ ಸಿಕ್ಕಾಯ್ತು​; ಮತ್ತೆ ಒಂದಾದ ರಾಜಕುಮಾರ ಜೋಡಿ
X

ಯುವರತ್ನ ಸಿನಿಮಾ ರಿಲೀಸ್​ಗೂ ಮುನ್ನವೇ ಪವರ್​ಸ್ಟಾರ್​ ಅಭಿನಯದ ಜೇಮ್ಸ್​ ಸಖತ್​ ಸೌಂಡ್​ ಮಾಡುತ್ತಿದೆ. ರೀಸೆಂಟಾಗಿ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​ ಶುರು ಮಾಡಿರೋ ಜೇಮ್ಸ್​ ಅಡ್ಡಾದಿಂದ ಲೇಟೇಸ್ಟ್​ ಅಪ್​ಡೇಟೊಂದು ಸಿಕ್ಕಿದೆ. ಡಾನ್ಸ್​ ಅಪ್ಪು ಡಾನ್ಸ್​ ಅಂತ ಪವರ್​ಸ್ಟಾರ್ ಜೊತೆ ಹೆಜ್ಜೆ ಹಾಕೋಕ್ಕೆ ರಾಜಕುಮಾರನ ರಾಣಿ ಬಂದಿದ್ದಾರೆ.

ಶೂಟಿಂಗ್​ ಶುರುವಾಗಿದ್ದೇ ತಡ ಒಂದಲ್ಲ ಒಂದು ವಿಚಾರವಾಗಿ ಜೇಮ್ಸ್​ ಸುದ್ದಿಯಾಗ್ತಾನೇ ಇದೆ. ಮೊನ್ನೆಮೊನ್ನೆಯಷ್ಟೇ ಯುವರತ್ನ ಶೂಟಿಂಗ್​ ಕಂಪ್ಲೀಟ್ ಮಾಡಿ ಜೇಮ್ಸ್​ ಅಖಾಡಕ್ಕೆ ಇಳಿದಿದ್ದಾರೆ ಪವರ್​ಸ್ಟಾರ್. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ ಜೇಮ್ಸ್ ಚಿತ್ರೀಕರಣ ನಡೀತಿದ್ದು, ಮೊದಲು ನಾಲ್ಕು ದಿನ ರೆಸಾರ್ಟ್ ನಲ್ಲಿ ಆನಂತ್ರ ಗಂಗಾವತಿ ಬಳಿ ರೆಡಿಮಾಡಿರುವ ಅದ್ದೂರಿ ಸೆಟ್​ ಒಂದರಲ್ಲಿ ಶೂಟಿಂಗ್​ ಮಾಡಲಾಗುತ್ತಂತೆ.

ಸದ್ಯ ರಾಮಲಕ್ಷ್ಮಣ ಮಾಸ್ಟರ್ ಕಂಪೋಸಿಶನ್​ನಲ್ಲಿ ಆ್ಯಕ್ಷನ್​ ಸೀಕ್ವೆನ್ಸ್​ ಮತ್ತು ಟಾಕಿ ಪೋರ್ಶನ್​ ಚಿತ್ರೀಕರಣ ನಡಿತಿದೆ. ಸೆಕೆಂಡ್ ಶೆಡ್ಯೂಲ್​ ಶೂಟಿಂಗ್ ಶುರುಮಾಡಿರೋ ಜೇಮ್ಸ್​ ತಂಡಕ್ಕೆ ತೆಲುಗಿನ ಸ್ಟಾರ್​​ ನಟರಾದ ಶ್ರೀಕಾಂತ್​ ಮತ್ತು ಆದಿತ್ಯ ಮೆನನ್ ಹಾಗೂ ನಟಿ ಅನುಪ್ರಭಾಕರ್​ ಎಂಟ್ರಿಯಾಗಿರೋದು ನಾವೇ ನಿಮಗೆ ಹೇಳಿದ್ವಿ.

ಇದೀಗ ಬಹುದಿನಗಳಿಂದ ಅಪ್ಪು ಫ್ಯಾನ್ಸ್ ಕೇಳುತ್ತಿದ್ದ ಕುತೂಹಲದ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿದೆ. ಜೇಮ್ಸ್​​ಗೆ ನಾಯಕಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿಗೆ ಬ್ರೇಕ್​ ಬಿದ್ದಿದೆ. ಜೇಮ್ಸ್​ ಚಿತ್ರಕ್ಕೆ ತೆಲುಗು ತಮಿಳು ಮಲೆಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಪ್ರಿಯಾ ಆನಂದ್​ ನಾಯಕಿಯಾಗಿ ಫಿಕ್ಸ್​ ಆಗಿದ್ದಾರೆ.

ಈ ಹಿಂದೆ ಪುನೀತ್​ ರಾಜ್​ಕುಮಾರ್ ಆಭಿನಯದ, ರಾಜಕುಮಾರ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದ ಪ್ರಿಯಾ ಆನಂದ್, ಇದೀಗ ಜೇಮ್ಸ್​ ಮೂಲಕ ಮತ್ತೊಮ್ಮೆ ಪವರ್​ಸ್ಟಾರ್​ಗೆ ಜೋಡಿಯಾಗುತ್ತಿದ್ದಾರೆ. ರಾಜಕುಮಾರ ಕನ್ನಡದಲ್ಲಿ ದೊಡ್ಡಮಟ್ಟದ ಯಶಸ್ಸನ್ನ ಗಳಿಸೋದರ ಜೊತೆಗೆ ದಾಖಲೆ ಬರೆದ ಸಿನಿಮಾ. ಈ ಚಿತ್ರದ ಪ್ರತಿಯೊಂದು ಹಾಡು ಸೂಪರ್​ ಹಿಟ್​ ಆಗಿತ್ತು. ಡಾನ್ಸ್​ ಅಪ್ಪು ಡಾನ್ಸ್ ಹಾಡಿನಲ್ಲಿ ಪ್ರಿಯಾ ಆನಂದ್ ಕೂಡ ಅಷ್ಟೇ ಎನರ್ಜಿಟಿಕ್​ ಆಗಿ ಪವರ್​ಸ್ಟಾರ್ ಜೊತೆ ಹೆಜ್ಜೆ ಹಾಕಿದರು.

ರಾಜಕುಮಾರ್ ಸಿನಿಮಾ ನಂತರ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಆರೆಂಜ್​ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಆನಂದ್ 2 ವರ್ಷಗಳ ನಂತರ ಮತ್ತೊಮ್ಮೆ ಜೇಮ್ಸ್​ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ.

ಸದ್ಯ ಜೇಮ್ಸ್​ ಶೂಟಿಂಗ್​ ಕೂಡ ಸಖತ್​ ಫಾಸ್ಟಾಗಿ ನಡೀತಿದ್ದು, ಮುಂದಿನವರ್ಷ ಯುವರತ್ನ ಮತ್ತು ಜೇಮ್ಸ್ ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗಿದ್ದೇ ಆದರೆ ಪವರ್​ಸ್ಟಾರ್ ಫ್ಯಾನ್ಸ್​ಗೆ ಡಬಲ್​ ಧಮಾಕ.

Next Story

RELATED STORIES