Top

RX 100 ಬೈಕ್​ನಲ್ಲಿ ಜಾಗ್ವಾರ್ ಸ್ಟಾರ್ ನಿಖಿಲ್​ ಕುಮಾರಸ್ವಾಮಿ ಜಾಲಿರೈಡ್

ಪತ್ನಿ ಜೊತೆ ಫಾರ್ಮ್ಹೌಸ್ ಸುತ್ತಾಡಿದ ನಿಖಿಲ್ ಕುಮಾರ್

RX 100 ಬೈಕ್​ನಲ್ಲಿ ಜಾಗ್ವಾರ್ ಸ್ಟಾರ್ ನಿಖಿಲ್​ ಕುಮಾರಸ್ವಾಮಿ ಜಾಲಿರೈಡ್
X

ಜಾಗ್ವಾರ್ ಸ್ಟಾರ್ ನಿಖೀಲ್​ ಕುಮಾರಸ್ವಾಮಿ ಸದ್ಯ ಜಾಗ್ವಾರ್ ಬಿಟ್ಟು ಆರ್​​ಎಕ್ಸ್​ 100 ಬೈಕ್​ ಏರಿದ್ದಾರೆ. ಪತ್ನಿ ಜೊತೆ ಜಾಲಿ ರೈಡ್ ಮಾಡೀರೋ ನಿಖಿಲ್​, ಈ ವಿಡಿಯೋನ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸ್ಯಾಂಡಲ್​ವುಡ್ ಯುವರಾಜ ನಿಖಿಲ್​ ಕುಮಾರಸ್ವಾಮಿ ಸಿನಿಮಾ ಮತ್ತು ರಾಜಕೀಯದಲ್ಲಿ ಸದಾ ಸುದ್ದಿಯಲ್ಲಿರ್ತಾರೆ. ಇತ್ತೀಚೆಗಷ್ಟೇ ರೈಡರ್ ಚಿತ್ರದ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದರು. ಈಗ ಮತ್ತೆ ಯುವರಾಜ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ನಿಖಿಲ್ ಸುದ್ದಿಯಾಗಿರೋದು ಸಿನಿಮಾ ಅಥವಾ ರಾಜಕೀಯ ಸುದ್ದಿಯಿಂದಾಗಿ ಅಲ್ಲ. ಬದಲಾಗಿ ತಮ್ಮ ಪತ್ನಿ ಜೊತೆ ಜಾಲಿ ರೈಡ್ ಮಾಡಿ.

ಪತ್ನಿ ರೇವತಿ ಜೊತೆ ಜಾಲಿ ರೈಡ್ ಮಾಡಿರೋ ನಿಖಿಲ್ ಆ ವಿಡಿಯೋನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದಾ ಜಾಗ್ವಾರ್, ಬಿಎಂಡಬ್ಲ್ಯೂ ನಂತರ ಹೈಫೈ ಕಾರ್​ಗಳಲ್ಲಿ ಓಡಾಡುತ್ತಿದ್ದ ನಿಖಿಲ್ ಈಗ ಆರ್​ಎಕ್ಸ್ 100 ರೈಡಿಂಗ್ ಮಾಡಿನಲ್ಲಿ ಫುಲ್ ಥ್ರಿಲ್ ಆಗಿದ್ದಾರೆ.

ಶೂಟಿಂಗ್ ಫ್ರೀ ಟೈಂನಲ್ಲಿ ನಿಖಿಲ್ ರಾಮನಗರದ ತಮ್ಮ ಫಾರ್ಮ್ ಹೌಸ್​ನಲ್ಲಿ ಪತ್ನಿ ರೇವತಿ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಇನ್ನು ದುಬಾರಿ ಕಾರುಗಳ ಒಡೆಯ ನಿಖಿಲ್ ಕುಮಾರಸ್ವಾಮಿಗೆ ಆರ್​ಎಕ್ಸ್ 100 ಬೈಕ್ ಅಂದ್ರೆ ಪಂಚಪ್ರಾಣವಂತೆ. ಹಾಗಾಗಿ ತಮ್ಮಿಷ್ಟದ ಬೈಕ್ ಏರಿ ಮುದ್ದಿನ ಪತ್ನಿ ಜೊತೆ ಜಾಲಿ ರೈಡ್ ಮಾಡಿದ್ದಾರೆ ನಿಖಿಲ್.

ಇನ್ನು ಲಾಕ್​ಡೌನ್​ನಲ್ಲಿ ನಿಖಿಲ್ ಮತ್ತು ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ವಿಶೇಷ ಅಂದ್ರೆ ಇದೇ ಫಾರ್ಮ್ ಹೌಸ್​ನಲ್ಲೇ ನಡೆದ ಸರಳ ಸಮಾರಂಭದಲ್ಲಿ ನಿಖಿಲ್ ಮತ್ತು ರೇವತಿ ಸತಿ ಪತಿಗಳಾದರು. ಆ ಸಂದರ್ಭದಲ್ಲಿ ಸಿನಿಮಾ ರಾಜಕೀಯ ಜಂಜಾಟಗಳಿಲ್ಲದೇ ಕಂಪ್ಲೀಟ್ ಫ್ರೀ ಇದ್ದ ನಿಖಿಲ್, ಪತ್ನಿ ಜೊತೆ ಇದೇ ತೋಟದ ಮನೆಯಲ್ಲಿ ಕಾಲ ಕಳೀತಿದರು.

ಸದ್ಯ ನಿಖಿಲ್ ರೈಡರ್ ಸಿನಿಮಾ ದಲ್ಲಿ ಬ್ಯುಸಿ ಇದ್ದಾರೆ. ಇನ್ನು ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದ್ದು, ಮಾಸ್ ಲುಕ್​ನಲ್ಲಿ ನಿಖಿಲ್ ಮಿಂಚಿದ್ದಾರೆ. ರಾಜಕೀಯದಲ್ಲಿ ಬ್ಯುಸಿಯಾಗಿದ್ದ ನಿಖಿಲ್ ಮತ್ತೆ ರೈಡರ್ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಟೀಸರ್ ನಿಂದಲೇ ಸಿಕ್ಕಾಪಟ್ಟೆ ಕ್ರೇಝ್ ಕ್ರಿಯೇಟ್ ಮಾಡಿರೋ ರೈಡರ್ ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ.

Next Story

RELATED STORIES