Top

ಕುತೂಹಲ ಕೆರಳಿಸಿದೆ 3 ಕಥೆಯ ಮಹಿಳಾ ಪ್ರಧಾನ ಚಿತ್ರ

ಸೆಂಚುರಿ ಸ್ಟಾರ್ ಗಮನ ಸೆಳೆದ ಗಮನಂ ಟ್ರೇಲರ್

ಕುತೂಹಲ ಕೆರಳಿಸಿದೆ 3 ಕಥೆಯ ಮಹಿಳಾ ಪ್ರಧಾನ ಚಿತ್ರ
X

ಫೀಮೇಲ್​ ಓರಿಯಂಟೆಡ್​​ ಪ್ಯಾನ್​ ಇಂಡಿಯನ್​ ಸಿನಿಮಾ ಗಮನಂ ಚಿತ್ರ ಪೋಸ್ಟರ್​ನಿಂದ್ಲೇ ಕುತೂಹಲ ಕೆರಳಿಸಿತ್ತು. ಇದೀಗ ಪಂಚ ಭಾಷೆಗಳಲ್ಲೂ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು, ಪಂಚ ತಾರೆಯರು ಈ ಟ್ರೇಲರ್​ಗೆ ನೋಡಿ ಫಿದಾ ಆಗಿದ್ದಾರೆ.

ಬಹುಭಾಷಾ ನಟಿ ಶ್ರಿಯಾ ಶರಣ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಶ್ರಿಯಾ ಶರಣ್​​​​​ ಮಹಿಳಾ ಗಮನಂ ಅನ್ನೋ ಮಹಿಳಾ ಪ್ರಧಾನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹೊಸ ಸಿನಿಮಾ ಭಾರೀ ಕುತೂಹಲ ಕೆರಳಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾಕ್ಕೆ ಈಗ ಐದು ಸ್ಟಾರ್‌ ನಟರು ಕೈಜೋಡಿಸಿದ್ದಾರೆ. ಈ ಚಿತ್ರದ ಟ್ರೇಲರ್​ನ್ನ ಐದು ಭಾಷೆಯಲ್ಲಿ ಐದು ಹೀರೋಗಳು ಲಾಂಚ್ ಮಾಡಿದ್ದಾರೆ.

ಕನ್ನಡದಲ್ಲಿ ಗಮನಂ ಚಿತ್ರದ ಟ್ರೇಲರ್​​ನ್ನ ಹ್ಯಾಟ್ರೀಕ್ ಹೀರೋ ಶಿವರಾಜ್​ಕುಮಾರ್ ಲಾಂಚ್​ ಮಾಡಿದ್ದರೆ. ಬುಧವಾರ ಬೆಳಗ್ಗೆ ಟ್ರೇಲರ್ ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ. ಗಮನಂ ಟ್ರೇಲರ್ ಮೊದಲ ನೋಟದಲ್ಲೇ ಶಿವಣ್ಣನ ಗಮನ ಸೆಳೆದಿದೆ. ಮೂರು ಕಥೆ ಇರುವ ಈ ಚಿತ್ರದಲ್ಲಿ ಶ್ರಿಯಾ ಶರಣ್​ ವಿಶೇಷ ಚೇತನ ಪಾತ್ರದಲ್ಲಿ ಮಿಂಚಿದ್ದಾರೆ.

ಫ್ಯಾಷನ್ ಡಿಸೈನಿಂಗ್ ಕಲಿತು, ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಜತೆಗೆ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿದ್ದ ಸುಜನಾ ರಾವ್, ಈಗ ಗಮನಂ ಮೂಲಕ ನಿರ್ದೇಶಕಿಯಾಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಗಮನಂ ತಯಾರಾಗಿದ್ದು, ರಮೇಶ್ ಕರುತೂರಿ, ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಸಂಸ್ಥೆ ಮೂಲಕ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ಪವನ್ ಕಲ್ಯಾಣ್, ತಮಿಳಿನಲ್ಲಿ ಜಯಂರವಿ, ಮಲಯಾಳಂನಲ್ಲಿ ಫಹಾದ್ ಫಾಸಿಲ್, ಹಿಂದಿಯಲ್ಲಿ ಸೋನು ಸೂದ್‌ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರ. ಮೂವರು ಬೇರೆ ಬೇರೆ ಕ್ಷೇತ್ರ ಮಹಿಳೆಯರ ಕಥೆ ಈ ಚಿತ್ರದಲ್ಲಿದೆ. ನಿತ್ಯಾ ಮೆನನ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕಿಯ ಪಾತ್ರದಲ್ಲಿ ಮಿಂಚಿದ್ದಾರೆ.

ಹಿರಿಯ ಸಂಗೀತ ನಿರ್ದೇಶಕ, ಇಳಯರಾಜಾ ಗಮನಂಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಹಿಂದಿಯ ಮಣಿಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಒಟ್ನಲ್ಲಿ ಟ್ರೇಲರ್ ಮೂಲಕವೇ ಗಮನಂ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.

Next Story

RELATED STORIES