Top

ಸ್ಯಾಂಡಲ್​ವುಡ್​ನಲ್ಲಿ 2021ಕ್ಕೆ ಬೆಳ್ಳಿ ಪರದೆ ಮೇಲೆ ಅಪ್ಪಳಿಸಿರುವ ದೊಡ್ಡ ಸಿನಿಮಾಗಳ ಪಟ್ಟಿ ಇಲ್ಲಿವೆ​

ಜನವರಿ 8ಕ್ಕೆ ಕೆಜಿಎಫ್​ ಚಾಪ್ಟರ್ -2 ಟೀಸರ್ ರಿಲೀಸ್

ಸ್ಯಾಂಡಲ್​ವುಡ್​ನಲ್ಲಿ 2021ಕ್ಕೆ ಬೆಳ್ಳಿ ಪರದೆ ಮೇಲೆ ಅಪ್ಪಳಿಸಿರುವ ದೊಡ್ಡ ಸಿನಿಮಾಗಳ ಪಟ್ಟಿ ಇಲ್ಲಿವೆ​
X

ಕೊರೊನಾ.. ಕೊರೊನಾ.. ಅಂತಾ 2020ನ್ನು ತಳ್ಳಿ ಹಾಕಿದ್ದು ಆಯ್ತು. ಜಗತ್ತು ಕೊರೊನಾ ಸುಳಿಗಾಳಿಗೆ ಸಿಲುಕಿ ನಲುಗಿದ್ದಾಯ್ತು. ಇದು ಸಿನಿಮಾ ಮಂದಿಯನ್ನೂ ಬಿಡಲಿಲ್ಲ. ಹಾಲಿವುಡ್​ನಿಂದ ಹಿಡಿದು ಸ್ಯಾಂಡಲ್​ವುಡ್ ತನಕ ಈ ವರ್ಷ ನಷ್ಟ ಅನುಭವಿಸಿದ್ದೇ ಆಯ್ತು..ಆದ್ರೆ ಹೊಸವರ್ಷಕ್ಕೆ ಹೊಸ ಸಿನಿಮಾಗಳ ನಿರೀಕ್ಷೆಯಲ್ಲಿದೆ ಚಂದನವನ. ಹಾಗಾದ್ರೆ 2021ಗೆ ತೆರೆಗೆ ಬರಲಿರೋ ಸ್ಟಾರ್​ ಸಿನಿಮಾಗಳ ಲಿಸ್ಟ್​ ಇಲ್ಲಿದೆ ಮಾಹಿತಿ.

ಕೊರೊನಾ ಸಮಸ್ಯೆ ನಡುವೆಯೂ ಇನ್ನೇನು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸ್ಯಾಂಡಲ್​ವುಡ್ ಅಭಿಮಾನಿಗಳಿಗೆ ಹೊಸವರ್ಷದಲ್ಲಿ ರಸದೌತಣ ನೀಡಲು ಸಿನಿ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಹಲವು ನಿರೀಕ್ಷೆಗಳೊಂದಿಗೆ 2021ರ ಹೊಸ ವರ್ಷವನ್ನ ಹೊಸ ಹುರುಪಿನೊಂದಿಗೆ ನೋಡುತ್ತಿದ್ದಾರೆ.

2021ರಲ್ಲಿ ಧೂಳೆಬ್ಬಿಸಲಿದೆ ಕೆಜಿಎಫ್ ಚಾಪ್ಟರ್-2

ಕೆಜಿಎಫ್​​ ಇಡೀ ಭಾರತವನ್ನು ಸ್ಯಾಂಡಲ್​​​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಭಾರತದ ಬಾಕ್ಸ್​ ಆಫೀಸ್​ನ್ನ ಚಿಂದಿ ಉಡಾಯಿಸಿದ ಸಿನಿಮಾ. ಕೆಜಿಎಫ್ ಸಿನಿಮಾಗಳ ರೇಂಜನ್ನೇ ಬದಲಾಯಿಸಿ ಬಿಟ್ಟಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2ಗಾಗಿ ಇಡೀ ಭಾರತವೇ ಕಾದು ಕುಳಿತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ವರ್ಷವೇ ಕೆಜಿಎಫ್​ ಚಾಪ್ಟರ್-2 ದರ್ಶನ ಭಾಗ್ಯ ಸಿಕ್ತಾ ಇತ್ತು. ಆದ್ರೆ ಕೊರೊನಾ ಎಲ್ಲವನ್ನೂ ಹಾಳು ಮಾಡಿದೆ. ಹೀಗಾಗಿ 2021ರಲ್ಲಿ ಕೆಜಿಎಫ್​- ಚಾಪ್ಟರ್ 2 ತೆರೆಗೆ ಬರೋದು ಬಹುತೇಕ ಕನ್ಫರ್ಮ್​.

ಮುಂಬರುವ ಜನವರಿ 8ಕ್ಕೆ ಕೆಜಿಎಫ್​ ಚಾಪ್ಟರ್​​-2 ಟೀಸರ್​ ಬಿಡುಗಡೆಯಾಗಲಿದೆ ಎಂದು ಪ್ರಶಾಂತ್ ನೀಲ್ ಘೋಷಣೆ ಮಾಡಿದ್ದಾರೆ. ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್​ ಹುಟ್ಟುಹಬ್ಬವಾಗಿದ್ದು ಅಂದೇ ಮೋಸ್ಟ್​ ಎಕ್ಸ್​ಪೆಕ್ಟೇಟೆಡ್​ ಕೆಜಿಎಫ್ ಚಾಪ್ಟರ್​-2 ಟೀಸರ್​​​ ರಿಲೀಸ್ ಆಗಲಿದೆ.

2021ರಲ್ಲಿ ರಿಲೀಸ್ ಆಗಲಿದೆ ಕೋಟಿಗೊಬ್ಬ -3..!

ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ -3 ರಿಲೀಸ್​ಗೆ ರೆಡಿಯಾಗಿದೆ. ಟೀಸರ್​​​​ ಸಾಂಗ್​ ಮೂಲಕವೇ ಸದ್ದು ಮಾಡಿರೋ ಕೋಟಿಗೊಬ್ಬ -3, 2021ರಲ್ಲಿ ತೆರೆಗೆ ಅಪ್ಪಳಿಸೋದ್ರಲ್ಲಿ ಅನುಮಾನವಿಲ್ಲ. ಕೋಟಿಗೊಬ್ಬನ ಮೂರನೇ ಅವತರಣಿಕೆಯನ್ನು ನೋಡಲು ಕಿಚ್ಚನ ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದಾರೆ.

2021ರಲ್ಲಿ ಚಂದನವನದಲ್ಲಿ 'ರಾಬರ್ಟ್'​ ದರ್ಶನ

ಡಿ ಬಾಸ್‌ ದರ್ಶನ್‌ ಅಭಿಮಾನಿಗಳು ಈ ವರ್ಷ ತುಂಬ ಕಾತರದಿಂದ ಕಾದಿದ್ದು ರಾಬರ್ಟ್ ಚಿತ್ರಕ್ಕಾಗಿ. ಆದರೆ, ಕೊರೊನಾ, ಲಾಕ್‌ಡೌನ್‌ ಕಾರಣದಿಂದಾಗಿ ಈ ಬಹುನಿರೀಕ್ಷಿತ ಸಿನಿಮಾ ಇನ್ನೂ ತೆರೆಕಂಡಿಲ್ಲ. ಹಾಗಾಗಿ, ರಾಬರ್ಟ್ ಯಾವಾಗ ತೆರೆಕಾಣಬಹುದು ಎಂಬ ನಿರೀಕ್ಷೆ ಜೋರಾಗಿದೆ. ರಾಬರ್ಟ್ ರಿಲೀಸ್​ಗೆ ಹಲವು ಡೇಟ್​ಗಳು ಅನೌನ್ಸ್ ಆಗಿದ್ರೂ ಯಾವಾವ ರಾಬರ್ಟ್ ದರ್ಶನವಾಗುತ್ತೆ ಅನ್ನೋದು ಕನ್ಫರ್ಮ್ ಆಗಿಲ್ಲ. ಆದರೆ, 2021ರ ಏಪ್ರಿಲ್ ಒಳಗಡೆ ರಾಬರ್ಟ್ ರಿಲೀಸ್​ ಆಗೋದು ಪಕ್ಕಾ.

ರಿಲೀಸ್​ಗೆ ರೆಡಿಯಾಗಲಿದೆ ಪುನೀತ್ 'ಯುವರತ್ನ'..!

ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಕೂಡ ರಿಲೀಸ್​ಗೆ ರೆಡಿಯಾಗಿದೆ. ಯುವರತ್ನ ಸಿನಿಮಾದ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿದ್ದು. ತೆಲುಗಿನಲ್ಲೂ ಸಿನಿಮಾ ರಿಲೀಸ್​ ಆಗ್ತಿರೋದ್ರಿಂದ ಅಂದುಕೊಂಡಂತೆ ಜನವರಿಯಲ್ಲೇ ರಿಲೀಸ್​ ಆಗದೇ ಇದ್ರೂ 2021ರಲ್ಲಿ ಯುವರತ್ನನ ಹವಾ ಇರೋದಂತೂ ಖಂಡಿತ.

ಪ್ರೇಕ್ಷಕರಿಗೆ ದರ್ಶನ ನೀಡಲು ರೆಡಿಯಾಗಿದೆ ಭಜರಂಗಿ-2

ಶಿವರಾಜ್​​ಕುಮಾರ್​ ಅಭಿನಯ ಮೋಸ್ಟ್ ಎಕ್ಸ್​ಪೆಕ್ಟೆಟ್ ಸಿನಿಮಾ ಭಜರಂಗಿ- 2 ಕೂಡ ರಿಲೀಸ್​ಗೆ ರೆಡಿಯಾಗಿದೆ. ಟೀಸರ್​​​ನಲ್ಲೇ ಧೂಳೆಬ್ಬೆಸಿದ ಭಜರಂಗಿ-2 ಸಿನಿಮಾ 2021ರಲ್ಲಿ ತೆರೆಗೆ ಅಪ್ಪಳಿಸಲಿದೆ. ಭಜರಂಗಿಯ ದರ್ಶನಕ್ಕಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ.

2021ರಲ್ಲಿ ಘೀಳಿಟ್ಟು ಘರ್ಜಿಸಲಿದೆ ಸಲಗ..!

ಸೆಟ್ಟೇರಿದ ಮೇಲೆ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಾ ಬಂದಿರೋ ಸಲಗ ಕೂಡ 2021ರಲ್ಲಿ ರಿಲೀಸ್ ಆಗಲಿದೆ. ಸಲಗದ ಟೀಸರ್, ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಹೀಗಾಗಿ ದುನಿಯಾ ವಿಜಿ ಅಭಿನಯದ ಸಲಗ ಸಾಕಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿದೆ.

ಹೊಸ ಟ್ರೆಂಡ್ ಸೆಟ್ ಮಾಡುತ್ತಾ ಮದಗಜ.. ಪೊಗರು..?

ಸ್ಟಾರ್ ಸಿನಿಮಾಗಳ ನಡುವೆ ಭಾರಿ ಸದ್ದು ಮಾಡ್ತಿರೋದು ಮದಗಜ ಮತ್ತು ಪೊಗರು ಚಿತ್ರಗಳು. ಪೊಗರು ತನ್ನ ಡೈಲಾಗ್​ ಟೀಸರ್. ಹಾಡಿನ ಮೂಲಕ ರೆಕಾರ್ಡ್​ಗಳ ಮೇಲೆ ರೆಕಾರ್ಡ್​ ಬರೆದಿದೆ. ಈ ಸಿನಿಮಾ ಕೂಡ 2021ರಲ್ಲಿ ತೆರೆಗೆ ಬರಲಿದೆ. ಇನ್ನು ಟೀಸರ್​ ಮೂಲಕ ಘರ್ಜಿಸುತ್ತಿರೊ ಮದಗಜ ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪಿದ್ದು, 2021ರ ವರ್ಷಾಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ 2020ರಲ್ಲಿ ವನವಾಸ ಅನುಭವಿಸಿದ್ದ ಸ್ಯಾಂಡಲ್​​ವುಡ್​ 2021ರಲ್ಲಿ ಹೊಸ ಉತ್ಸಾಹವನ್ನ ಪಡೆದುಕೊಂಡಿದೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಹೊಸ ವರ್ಷದಲ್ಲಿ ತೆರೆಗೆ ಅಪ್ಪಳಿಸಿದೆ. ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಸಿನಿಮಾ ಸಂಭ್ರಮ ಶುರುವಾಗಲಿದೆ.

Next Story

RELATED STORIES